ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಪೈಲ್ವಾನ್' ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಸೆಪ್ಟೆಂಬರ್ 12ರಂದು ಐದು ಭಾಷೆಗಳಲ್ಲಿ ದೇಶಾದ್ಯಂತ ತೆರೆಕಾಣಲಿದೆ.
'ಹೆಬ್ಬುಲಿ' ಚಿತ್ರದ ಬಳಿಕ ಕೃಷ್ಣ ನಿರ್ದೇಶನದಲ್ಲಿ ತೆರೆಗೆ ಬರುತ್ತಿರುವ ಈ ಜೋಡಿಯ ಎರಡನೇ ಚಿತ್ರ ಇದಾಗಿದ್ದು, ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೆ, ಬಾಲಿವುಡ್, ಕಾಲಿವುಡ್, ಟಾಲಿವುಡ್ ಗಳಲ್ಲಿಯೂ ಭಾರೀ ನಿರೀಕ್ಷೆ ಮೂಡಿಸಿದೆ. ಈ ಚಿತ್ರವನ್ನು ಝೀ ಸ್ಟುಡಿಯೋಸ್ 2500 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದೆ.
Mitti ke अखाड़े se lekar rassi ki रिंग tak ka safar tay karega #Pehlwaan iss 12 September ko.🥊@KicchaSudeep @SunielVShetty @krisshdop @iswapnakrishna @aakanksha_s30 @sushant_says @Kabirduhansingh @ArjunJanyaAJ @ZeeStudios_ @RRRmotion_pics @LahariMusic @TSeries pic.twitter.com/U0cjfzjq5w
— Zee Studios (@ZeeStudios_) July 25, 2019
ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಕೃಷ್ಣ ಅವರು, ಈ ಚಿತ್ರ ಜನರಿಗೆ ಖಂಡಿತಾ ಇಷ್ಟವಾಗಲಿದೆ. ಕಡೆಗೂ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.
ಸದ್ಯ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದು ಎನ್ನಲಾಗಿದೆ. ಭಾರೀ ಬಜೆಟ್ ನ ಸಿನಿಮಾ ಇದಾಗಿದ್ದು, ಅದ್ಭುತ ಮೇಕಿಂಗ್ ಹೊಂದಿದೆ ಎನ್ನಲಾಗಿದೆ.
Sept 12th it is.#PailwaanOn12Sept
Coordination that had to happen between all language distributors for a new release date caused the slight delay in announcement,
Apologies.
Audio function date at Chitradurga Wil be announced shortly.
🤗🤗🥂 pic.twitter.com/QUk4RVxi2H— Kichcha Sudeepa (@KicchaSudeep) July 24, 2019
ಚಿತ್ರದ ನಾಯಕಿಯಾಗಿ ಆಕಾಂಕ್ಷಾ ಸಿಂಗ್ ನಟಿಸಿದ್ದು, ನಿರ್ಮಾಪಕಿ ಸ್ವಪ್ನ ಕೃಷ್ಣ ಬಂಡವಾಳ ಹೂಡಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಸೇರಿದಂತೆ ಅನೇಕ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗಿತವಿದ್ದು, ಕರುಣಾಕರ ಅವರ ಛಾಯಾಗ್ರಹಣವಿದೆ.