Krishnam Pranaya Sakhi: ಕೃಷ್ಣಂ ಪ್ರಣಯ ಸಖಿ ಪೋಸ್ಟರ್‌ ಔಟ್:‌ ಗೋಲ್ಡನ್ ಸ್ಟಾರ್ ಜೊತೆ ಎಂಟು ನಾಯಕಿಯರ ಕಲರವ!

Krishnam Pranaya Sakhi Update: ಚಂದನವನದ ಗೋಲ್ಡನ್ ಸ್ಟಾರ್ ಗಣೇಶ್‌ ನಟನೆಯ ಬಹುನಿರೀಕ್ಷಿತ ʻಕೃಷ್ಣಂ ಪ್ರಣಯ ಸಖಿʼ ಚಿತ್ರತಂಡ ಯುಗಾದಿ ಹಬ್ಬದಂದು ಹೊಸ ಪೋಸ್ಟರ್‌ ರಿಲೀಸ್‌ ಮಾಡಿದೆ. ಇದರಲ್ಲಿ ನಾಯಕ ನಟನ ಜೊತೆಗೆ ಎಂಟು ಜನ ನಟಿಯರು ಇರುವುದು ವಿಶೇಷವಾಗಿದೆ. ಇನ್ನಷು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 9, 2024, 12:05 PM IST
  • ಯುಗಾದಿ ಹಬ್ಬದಂದು ಚಿತ್ರತಂಡ ಬಿಡುಗಡೆ ಮಾಡಿದ ಈ ಪೋಸ್ಟರ್‌ನಲ್ಲಿ ನಟ ಗಣೇಶ್‌ ಜೊತೆಗೆ ಎಂಟು ಜನ ನಟಿಯರಿದ್ದಾರೆ ಎಂಬುದು ವಿಶೇಷವಾಗಿದೆ.
  • ಹೊಸ ಪೋಸ್ಟರ್‌ ನೋಡಿದಾಗ ನಟ ಗಣೇಶ್‌ ಎಂಟು ನಟಿಯರ ಜೊತೆಗೆ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಬಹುದು ಅಂತ ಅನಿಸುತ್ತದೆ.
  • ʻಕೃಷ್ಣಂ ಪ್ರಣಯ ಸಖಿʼ ಚಿತ್ರದಲ್ಲಿ ಗಿರಿ, ಸಾಧು ಕೋಕಿಲಾ, ಶರಣ್ಯ ಶೆಟ್ಟಿ ಅಂತಹ ಹಲವಾರು ನಟರು ಕಾಣಿಸಿಕೊಳ್ಳಲಿದ್ದಾರೆ.
Krishnam Pranaya Sakhi: ಕೃಷ್ಣಂ ಪ್ರಣಯ ಸಖಿ ಪೋಸ್ಟರ್‌ ಔಟ್:‌  ಗೋಲ್ಡನ್ ಸ್ಟಾರ್ ಜೊತೆ ಎಂಟು ನಾಯಕಿಯರ ಕಲರವ! title=

Krishnam Pranaya Sakhi New Poster Out: ಸ್ಯಾಂಡಲ್‌ವುಡ್‌ ನಟ ಗೋಲ್ಡನ್ ಸ್ಟಾರ್ ಗಣೇಶ್‌ ಅಭಿನಯದ ʻಕೃಷ್ಣಂ ಪ್ರಣಯ ಸಖಿʼ ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದೆ. ಯುಗಾದಿ ಹಬ್ಬದಂದು ಚಿತ್ರತಂಡ ಬಿಡುಗಡೆ ಮಾಡಿದ ಈ ಪೋಸ್ಟರ್‌ನಲ್ಲಿ ನಟ ಗಣೇಶ್‌ ಜೊತೆಗೆ ಎಂಟು ಜನ ನಟಿಯರಿದ್ದಾರೆ ಎಂಬುದು ವಿಶೇಷವಾಗಿದೆ. ಹೊಸ ವರ್ಷದಂದು ಈಗಾಗಲೇ ಸಿನಿಮಾ ತಂಡ ಒಂದು ಪೋಸ್ಟರ್‌ ರಿಲೀಸ್‌ ಮಾಡಿತ್ತು.

ಇದೀಗ ಯುಗಾದಿ ಮತ್ತೊಂದು ಪೋಸ್ಟರ್‌ ರಿಲೀಸ್‌ ಮಾಡಿದ್ದು ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಇದಕ್ಕೂ ಮುಂಚೆ ಈ ಚಿತ್ರದ ನಾಯಕಿಯಾಗಿ ಮಾಳವಿಕಾ ನಾಯರ್ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿತ್ತು. ಆದರೆ ಹೊಸ ಪೋಸ್ಟರ್‌ ನೋಡಿದಾಗ ನಟ ಗಣೇಶ್‌ ಎಂಟು ನಟಿಯರ ಜೊತೆಗೆ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಬಹುದು ಅಂತ ಅನಿಸುತ್ತದೆ. 

 
 
 
 

 
 
 
 
 
 
 
 
 
 
 

A post shared by Ganesh (@goldenstar_ganesh)

ಇದನ್ನೂ ಓದಿ: Nirup Bhandari: ಅಮೇರಿಕಾದಲ್ಲಿ ಭೂಕಂಪ: ಭಯಾನಕ ಅನುಭವದ ಬಗ್ಗೆ ಬಿಚ್ಚಿಟ್ಟ ರಂಗಿತರಂಗ ನಟ!

ಗೋಲ್ಡನ್ ಸ್ಟಾರ್ ಗಣೇಶ್‌ ಇದೇ ಮೊದಲ ಬಾರಿಗೆ ಡೈರೆಕ್ಟರ್‌ ಶ್ರೀನಿವಾಸ್ ರಾಜು ಜೊತೆಗೆ ಕೆಲಸ ಮಾಡಿದ್ದು, ಸದ್ಯ ಸಿನಿಮಾದ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇದೀಗ ಚಿತ್ರ ಪೊಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗುತ್ತಿದ್ದು, ಇದರ ಮಧ್ಯೆಯೇ ಯುಗಾದಿಯ ವಿಶೇಷವಾಗಿ ಚಿತ್ರತಂಡ ಹೊಸ ಪೋಸ್ಟರ್‌ ರಿಲೀಸ್‌ ಮಾಡಿದೆ. ಇದೇ ನಟ ಗಣೇಶ್‌ ನಟನೆಯ 41 ನೇ ಸಿನಿಮಾವಾಗಿದೆ.

ʻಕೃಷ್ಣಂ ಪ್ರಣಯ ಸಖಿʼ ಚಿತ್ರದಲ್ಲಿ ಗಿರಿ, ಸಾಧು ಕೋಕಿಲಾ, ಶರಣ್ಯ ಶೆಟ್ಟಿ ಅಂತಹ ಹಲವಾರು ನಟರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ದೃಶ್ಯಗಳನ್ನು ವೆಂಕಟ್ ಪ್ರಸಾದ್  ಸೆರೆಹಿಡಿದಿದ್ದು, ಕೆ.ಎಂ.ಪ್ರಕಾಶ್ ಸಂಕಲನ ಇದೆ. ಹಾಗೇ ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಇದಕ್ಕೆ ಸಂಗೀತ ಸಂಯೋಜಕ ಅರ್ಜುನ್ ಜನ್ಯ  ಮ್ಯೂಸಿಕ್ದ ಕಂಪೋಸ್‌ ಮಾಡಿದೆ. ಪ್ರಶಾಂತ್ ಜಿ ರುದ್ರಪ್ಪ ತ್ರಿಶೂಲ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News