ನವೀನ್ ಶಂಕರ್ ಈಗ "ಕ್ಷೇತ್ರಪತಿ"... ಇದರ ಅರ್ಥ ಏನು ಗೊತ್ತಾ..!?

ಚಿತ್ರದಲ್ಲಿ ನವೀನ್ ಬಸವ ಎಂಬ ಪಾತ್ರ ಮಾಡಿದ್ದಾರೆ. ಈ ಬಸವನಿಗೆ ನಮ್ಮ ಕ್ರಾಂತಿಕಾರಿ ಬಸವಣ್ಣನವರು ಆದರ್ಶವಾಗಲಿ. ಚಿತ್ರ ಜಯಭೇರಿ ಬಾರಿಸಲಿ ಎಂದು  ಹಾರೈಸಿದ ಡಾಲಿ, ನಾನು ಹಾಗೂ ನವೀನ್ ಶಂಕರ್ "ಹೊಯ್ಸಳ" ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿರುವುದಾಗಿ ತಿಳಿಸಿದರು.  

Written by - YASHODHA POOJARI | Last Updated : May 27, 2022, 04:33 PM IST
  • ಕ್ಷೇತ್ರಪತಿ" ಚಿತ್ರದ ಫಸ್ಟ್ ಲುಕ್ ಬಿಡುಗಡೆ
  • ಡಾಲಿ ಧನಂಜಯ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
  • ಚಿತ್ರ ಜಯಭೇರಿ ಬಾರಿಸಲಿ ಎಂದು ಹಾರೈಸಿದ ಡಾಲಿ,
 ನವೀನ್ ಶಂಕರ್ ಈಗ "ಕ್ಷೇತ್ರಪತಿ"... ಇದರ ಅರ್ಥ ಏನು ಗೊತ್ತಾ..!?  title=
Kstrapati film team

ಬೆಂಗಳೂರು : "ಗುಲ್ಟು" ಚಿತ್ರದ ಮೂಲಕ ತಮ್ಮ ಅಮೋಘ ಅಭಿನಯದಿಂದ ನಟ ನವೀನ್ ಶಂಕರ್ ಕನ್ನಡಿಗರ ಮನಗೆದ್ದಿದ್ದಾರೆ. ಇದೀಗ ಇವರ ನಟನೆಯ "ಕ್ಷೇತ್ರಪತಿ" ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡಾಲಿ ಧನಂಜಯ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಹಾರೈಸಿದ್ದಾರೆ.

ನಾನು "ಜಯನಗರ 4ನೇ ಬ್ಲಾಕ್" ಕಿರುಚಿತ್ರ ಮಾಡುತ್ತಿದ್ದಾಗ ನವೀನ್, ನಾನು ಭೇಟಿಯಾಗುತ್ತಿದ್ದೆವು. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ನವೀನ್ ಇಷ್ಟು ಬೆಳೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಚಿತ್ರದಲ್ಲಿ ನವೀನ್ ಬಸವ ಎಂಬ ಪಾತ್ರ ಮಾಡಿದ್ದಾರೆ. ಈ ಬಸವನಿಗೆ ನಮ್ಮ ಕ್ರಾಂತಿಕಾರಿ ಬಸವಣ್ಣನವರು ಆದರ್ಶವಾಗಲಿ. ಚಿತ್ರ ಜಯಭೇರಿ ಬಾರಿಸಲಿ ಎಂದು  ಹಾರೈಸಿದ ಡಾಲಿ, ನಾನು ಹಾಗೂ ನವೀನ್ ಶಂಕರ್ "ಹೊಯ್ಸಳ" ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿರುವುದಾಗಿ ತಿಳಿಸಿದರು.

ಇದನ್ನೂ ಓದಿ : Actor Lavanya Marriage : ರಿಯಲ್‌ ಲೈಫ್‌ನಲ್ಲೂ ಹೊಸ ಇನ್ನಿಂಗ್ಸ್‌ ಆರಂಭಿಸಿದ ನಟ-ನಟಿಯರು..!

ನವೀನ್ ನನಗೆ ಬಹಳ ದಿನಗಳಿಂದ ಪರಿಚಯ. ಇವತ್ತು ಅವರ ಹುಟ್ಟುಹಬ್ಬ ಕೂಡ. ಎಲ್ಲಾ ಕೆಲಸಗಳಿಗೆ ದೇವರ ಆಶೀರ್ವಾದ ಬೇಕು. ಕೆಲವೊಮ್ಮೆ ರಾಕ್ಷಸರ ಆಶೀರ್ವಾದ ಬೇಕಾಗುತ್ತದೆ. ಹಾಗಾಗಿ ನಮ್ಮ ನಟ ರಾಕ್ಷಸ ಡಾಲಿ ಧನಂಜಯ ಬಂದಿದ್ದಾರೆ. ಅವರ ಆಶೀರ್ವಾದ ಚಿತ್ರತಂಡಕ್ಕೆ ಇರಲಿ ಎಂದರು ಸಿಂಪಲ್ ಸುನಿ.

ನಾನು ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. "ಗುಲ್ಟು" ಸಿನಿಮಾ ನೋಡಿ ಅಭಿಮಾನಿಯಾದೆ. ನಾನು ಯಾರ ಬಳಿಯೂ ಸಹ ನಿರ್ದೇಶಕನಾಗಿ ಕೆಲಸ ಮಾಡಿಲ್ಲ. ಇದು ಮೊದಲ ಚಿತ್ರ. ರೈತನಿಗೆ ಸಂಸ್ಕೃತದಲ್ಲಿ  ೨೧ ಹೆಸರುಗಳಿವೆ. ಅದರಲ್ಲಿ "ಕ್ಷೇತ್ರಪತಿ" ಸಹ ಒಂದು. "ರೈತ"ನನ್ನು  "ಕ್ಷೇತ್ರಪತಿ" ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದೊಂದು ಅಪ್ಪ-ಮಗನ ಬಾಂಧವ್ಯದ ಚಿತ್ರವೂ ಹೌದು. ಗದಗಿನ ತಿಮ್ಮಾಪುರ ಎಂಬ ಊರಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ಸಹಕಾರ ನೀಡಿದ ಅಲ್ಲಿನ ಜನತೆಗೆ ಅಭಿನಂದನೆ. ನಿರ್ಮಾಣಕ್ಕೆ ಜೊತೆಯಾಗಿರುವ ಸ್ನೇಹಿತರಿಗೂ ಧನ್ಯವಾದ ಎಂದರು ನಿರ್ದೇಶಕ ಶ್ರೀಕಾಂತ್ ಕಟಗಿ.

ಇದನ್ನೂ ಓದಿ Drugs Case : ಮುಂಬೈ ಡ್ರಗ್ಸ್ ಪ್ರಕರಣ, ಶಾರುಖ್ ಖಾನ್ ಪುತ್ರನಿಗೆ ಕ್ಲೀನ್ ಚಿಟ್!

ಧನಂಜಯ್ ಹಾಗೂ ನನ್ನ ಸ್ನೇಹ ತುಂಬಾ ವರ್ಷಗಳದ್ದು. ನನಗೆ ಅವರು ನೀಡುತ್ತಿರುವ ಸಹಕಾರ ಅಪಾರ. ಸುನಿ ಅವರು ಕೂಡ ನನ್ನ ಮೊದಲ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟಿದ್ದರು. ಜನಾರ್ದನ ಚಿಕ್ಕಣ್ಣ ಅವರ ಸಹಕಾರ ಕೂಡ ಮರೆಯುವ ಹಾಗಿಲ್ಲ. ಇವರೆಲ್ಲ  ಬಂದಿರುವುದು ತುಂಬಾ ಸಂತೋಷವಾಗಿದೆ. ಶ್ರೀಕಾಂತ್ ಅವರು ಈ ಚಿತ್ರದ ಕಥೆ ಹೇಳಿದಾಗ, ನಾನು ಮನಸ್ಸಿನಲ್ಲಿ ಈ ರೀತಿಯ ಚಿತ್ರ ಮಾಡಬೇಕೆಂದುಕೊಳ್ಳುತ್ತಿದ್ದೆ. ಇದು ಸಹ ಅದೇ ರೀತಿಯ ಕಥೆಯಾಗಿದ್ದು ಕಾಕತಾಳೀಯ. ನಂತರ ನಿರ್ಮಾಪಕರ ಹುಡುಕಾಟ ಶುರುವಾಯಿತು. ಆನಂತರ ನಾವೇ ಕೆಲವು ಸ್ನೇಹಿತರು ಸೇರಿ ಒಂದು ನಿರ್ಮಾಣ ಸಂಸ್ಥೆ ಪ್ರಾರಂಭ‌ ಮಾಡಿ ಚಿತ್ರೀಕರಣ ಆರಂಭಿಸಿದೆವು. ಸಾಕಷ್ಟು ಜನ  ಸ್ನೇಹಿತರು ನಿರ್ಮಾಣಕ್ಕೆ ಜೊತೆಯಾದರು. 

ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕಥೆ ಕೇಳಿ ಸಂತೋಷಪಟ್ಟರು. ಸಂಗೀತ ನೀಡಲು ಒಪ್ಪಿದರು. ಈ ಚಿತ್ರದ ಬಗ್ಗೆ ಹೇಳಬೇಕೆಂದರೆ ನಾನು  ಬಸವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಬಸವ ಇಂಜಿನಿಯರಿಂಗ್ ವಿದ್ಯಾರ್ಥಿ. ‌ತನ್ನಷ್ಟಕ್ಕೆ ತಾನು ಇರುವಾತ. ಆತನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಯೊಂದರ ಮೂಲಕ ಈತ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.‌ ಈ ಬಸವ ನನ್ನೊಳಗೆ, ನಿಮ್ಮೊಳಗೆ ಇದ್ದಾನೆ.‌ ಕೆಲವರಿಗೆ ಅವನು ಜೀವಂತ. ಇನ್ನೂ ಕೆಲವರಿಗೆ ಆತ‌ ಇಲ್ಲ. ಚಿತ್ರ ನೋಡಿದ ಮೇಲೆ ಅದರ ಬಗ್ಗೆ ತಿಳಿಯುತ್ತದೆ ಎಂದು ಕಥೆಯ ಬಗ್ಗೆ ವಿವರಿಸಿದ ನವೀನ್ ಶಂಕರ್, ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.‌ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ ಎಂದರು.

ಚಿತ್ರದಲ್ಲಿ ನಟಿಸಿರುವ ರಾಹುಲ್ ಐನಾಪುರ ತಮ್ಮ ಪಾತ್ರದ ಬಗ್ಗೆ ‌ಮಾಹಿತಿ ನೀಡಿದರು. ಅತಿಥಿಯಾಗಿ ಆಗಮಿಸಿದ್ದ ಗಣೇಶ್ ಪಾಪಣ್ಣ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕರ ಪರವಾಗಿ ಪ್ರವೀಣಾ ಕುಲಕರ್ಣಿ ಮಾತನಾಡಿದರು.

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News