Larry King Death: US ಕಿರುತೆರೆಯ ಖ್ಯಾತ ಹಿರಿಯ ನಿರೂಪಕ ಲ್ಯಾರಿ ಕಿಂಗ್ ನಿಧನ

Larry King Death: ರೇಡಿಯೋ ಹಾಗೂ ಟೆಲಿವಿಷನ್ ಗಳ ಮೇಲೆ 60 ವರ್ಷಕ್ಕೂ ಅಧಿಕ ಸಮಯದ ವರೆಗೆ ಸಕ್ರೀಯರಾಗಿದ್ದ ಲ್ಯಾರಿ ಕಿಂಗ್, CNN ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಷೋ "LARRY KING LIVE"ಗೆ ಸುಮಾರು 25 ವರ್ಷಗಳ ಕಾಲ ನಿರೂಪಕರಾಗಿ ಕೆಲಸ ಮಾಡಿದ್ದಾರೆ.

Written by - Nitin Tabib | Last Updated : Jan 23, 2021, 09:43 PM IST
  • ಅಮೆರಿಕಾದ ಖ್ಯಾತ ಟಿವಿ ನಿರೂಪಕ ಲ್ಯಾರಿ ಕಿಂಗ್ಸ್ ನಿಧನ
  • ಅವರಿಗೆ 87 ವರ್ಷ ವಯಸ್ಸಾಗಿತ್ತು.
  • ಕೆಲ ದಿನಗಳ ಹಿಂದೆಯಷ್ಟೇ ಅವರು ಕೊವಿಡ್ ಸೋಂಕಿಗೆ ಗುರಿಯಾಗಿದ್ದರು.
Larry King Death: US ಕಿರುತೆರೆಯ ಖ್ಯಾತ ಹಿರಿಯ ನಿರೂಪಕ ಲ್ಯಾರಿ ಕಿಂಗ್ ನಿಧನ title=
Larry King Death (File Photo)

Larry King Death - ಲಾಸ್ ಎಂಜಲಿಸ್: ಅಮೆರಿಕಾದ ಖ್ಯಾತ ಟೆಲಿವಿಷನ್ ನಿರೂಪಕ ಲ್ಯಾರಿ ಕಿಂಗ್ (Larry King) ತಮ್ಮ ವಯಸ್ಸಿನ 87ನೇ ವರ್ಷಕ್ಕೆ ನಿಧನರಾಗಿದ್ದಾರೆ. ಓರಾ (ORA) ಮೀಡಿಯಾ ಕಿಂಗ್ ಅವರ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡುವ ಮೂಲಕ  ಅವರ ನಿಧನನ ಕುರಿತು ಮಾಹಿತಿ ನೀಡಿದೆ. 

ಲಾಸ್ ಎಂಜಲಿಸ್ ನ ಸೀಡರ್ಸ್ ಸಿನಾಯಿ ಮೆಡಿಕಲ್ ಸೆಂಟರ್ ನಲ್ಲಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ. ಆದರೆ, ಅವರ ನಿಧನಕ್ಕೆ ಕಾರಣವೇನು ಎಂಬುದರ ಕುರಿತು ಓರಾ ಮೀಡಿಯಾ ಯಾವುದೇ ನಿಖರ ಮಾಹಿತಿ ನೀಡಿಲ್ಲ. ಲ್ಯಾರಿ ಕಿಂಗ್ ಓರಾ ಮೀಡಿಯಾ ಸಂಸ್ಥಾಪಕರಾಗಿದ್ದರು ಎಂಬುದು ಇಲ್ಲಿ ಗಮನಾರ್ಹ.

ಕೆಲ ದಿನಗಳ ಹಿಂದೆಯಷ್ಟೇ ಲ್ಯಾರಿ ಕಿಂಗ್ ಕೊರೊನಾ ಸೋಂಕಿಗೆ (Coronavirus) ಗುರಿಯಾಗಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಲಾಸ್ ಎಂಜಲಿಸ್ ನ ಸಿನಾಯಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಲ್ಯಾರಿ
ವರದಿಗಳ ಪ್ರಕಾರ ಲ್ಯಾರಿ ಕಿಂಗ್ ದೀರ್ಘಕಾಲದಿಂದ ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡುತ್ತಿದ್ದರು. ಇತ್ತೀಚಿಗೆ ಅವರು ಹೃದಯಾಘಾತ, ಡಯಾಬಿಬಿಟಿಸ್ ಹಾಗೂ ಶ್ವಾಸಕೋಶದ ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು.

Peabody ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿತ್ತು
ಅಮೆರಿಕಾದ ಪ್ರಮುಖ ಮಾಧ್ಯಮ ನಿರೂಪಕರಲ್ಲಿ ಲ್ಯಾರಿ ಕಿಂಗ್ಸ್ ಕೂಡ ಒಬ್ಬರಾಗಿದ್ದರು. ಅವರು ಹಲವು ರಾಷ್ಟ್ರಾಧ್ಯಕ್ಷರ ಸಂದರ್ಶನಗಳನ್ನೂ ಸೇರಿದಂತೆ ಹಲವು ಗಣ್ಯರ ಸಂದರ್ಶನಗಳನ್ನು ನಡೆಸಿದ್ದರು. ಕಿರುತೆರೆಗೆ ಅವರು ಸಲ್ಲಿಸಿದ ಕೊಡುಗೆಗಾಗಿ ಅವರನ್ನು Peabody ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಇದನ್ನು ಓದಿ- ಫುಟ್‌ಬಾಲ್ ದಂತಕಥೆ ಜಿನೆಡಿನ್ ಜಿಡಾನೆಗೆ ಕೊರೊನಾ ಧೃಢ

ರೇಡಿಯೋ ಹಾಗೂ ಟೆಲಿವಿಷನ್ ಗಳ ಮೇಲೆ 60 ವರ್ಷಕ್ಕೂ ಅಧಿಕ ಸಮಯದ ವರೆಗೆ ಸಕ್ರೀಯರಾಗಿದ್ದ ಲ್ಯಾರಿ ಕಿಂಗ್, CNN ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಷೋ "LARRY KING LIVE"ಗೆ ಸುಮಾರು 25 ವರ್ಷಗಳ ಕಾಲ ನಿರೂಪಕರಾಗಿ ಕೆಲಸ ಮಾಡಿದ್ದಾರೆ.

ಇದನ್ನು ಓದಿ- ಗಾಳಿ ಮೂಲಕವೂ ಕೊರೊನಾ ಹರಡುತ್ತದೆ ಎಂದ ಹೊಸ ಸಂಶೋಧನೆ ..!

1978ರಲ್ಲಿ ರೇಡಿಯೋದಲ್ಲಿ ಆರಂಭಗೊಂಡ ರೇಡಿಯೋ ಕಾಲ್ ಇನ್ ಷೋ ಮೂಲಕ ಅವರು ಖ್ಯಾತಿಯ ಉತ್ತುಂಗಕ್ಕೆ ಏರಿದ್ದರು. 1985 ರಿಂದ 2010 ರವರೆಗೆ ಅವರು ಅತ್ಯಧಿಕ ರೇಟಿಂಗ್ ಹೊಂದಿರುವ ಹಾಗೂ ಎಲ್ಲಕ್ಕಿಂತ ದೀರ್ಘಾವಧಿಗೆ ನಡೆದ ಕಾರ್ಯಕ್ರಮ Larry King Live ಅನ್ನು ಹೋಸ್ಟ್ ಮಾಡಿದ್ದರು. ಈ ಷೋನ ಜನಪ್ರೀಯತೆ ಕೇವಲ ಅಮೆರಿಕಾಗೆ ಮಾತ್ರ ಸೀಮಿತವಾಗಿರಲಿಲ್ಲ.

ಇದನ್ನು ಓದಿ-COVID-19 Vaccine: ಭಾರತದ ಕೊರೊನಾ ಲಸಿಕೆ ಬಗ್ಗೆ ಆಂಗ್ ಸಾನ್ ಸೂಕಿ ಹೇಳಿದ್ದೇನು ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News