Leo: ಲಿಯೋ ಚಿತ್ರದ ಪೋಸ್ಟರ್‌ ರಿಲೀಸ್‌...ದಳಪತಿ ನ್ಯೂ ಲುಕ್‌ಗೆ ಫ್ಯಾನ್ಸ್‌ ಫಿದಾ!!

Leo Movie Poster: ದಳಪತಿ ವಿಜಯ್-ಲೋಕೇಶ್ ಕನಕರಾಜ್ ಕಾಂಬಿನೇಷನ್ ಚಿತ್ರ ಲಿಯೋ. ಸದ್ಯ ಈ ಸಿನಿಮಾದ ಹೊಸ ಪೋಸ್ಟರ್‌ ಬಿಡುಗಡೆಯಾಗಿದ್ದು, ದಳಪತಿಯವರ ಲುಕ್ ವೈರಲ್ ಆಗಿದೆ.     

Written by - Savita M B | Last Updated : Sep 18, 2023, 08:48 AM IST
  • ಕಾಲಿವುಡ್ ಸ್ಟಾರ್ ಹೀರೋ ದಳಪತಿ ವಿಜಯ್ ಅವರ ಹೊಸ ಚಿತ್ರ ಲಿಯೋ.
  • ಆ್ಯಕ್ಷನ್ ಎಂಟರ್‌ಟೈನರ್ ಆಗಿ ತಯಾರಾಗುತ್ತಿರುವ ಚಿತ್ರ
  • ಇತ್ತೀಚೆಗೆ ಲಿಯೋ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ
Leo: ಲಿಯೋ ಚಿತ್ರದ ಪೋಸ್ಟರ್‌ ರಿಲೀಸ್‌...ದಳಪತಿ ನ್ಯೂ ಲುಕ್‌ಗೆ ಫ್ಯಾನ್ಸ್‌ ಫಿದಾ!! title=

Leo: ಕಾಲಿವುಡ್ ಸ್ಟಾರ್ ಹೀರೋ ದಳಪತಿ ವಿಜಯ್ ಅವರ ಹೊಸ ಚಿತ್ರ ಲಿಯೋ. ಆ್ಯಕ್ಷನ್ ಎಂಟರ್‌ಟೈನರ್ ಆಗಿ ತಯಾರಾಗುತ್ತಿರುವ ಈ ಚಿತ್ರವನ್ನು ತಮಿಳಿನ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಮತ್ತು ಟೈಟಲ್ ಪ್ರೋಮೋ ಗ್ಲಿಂಪ್ಸ್ ಗಳು ಸಿನಿಮಾದ ಬಗ್ಗೆ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. 

ಸದ್ಯ ನಿರ್ಮಾಪಕರು ಇತ್ತೀಚೆಗೆ ಲಿಯೋ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ವಿಜಯ್ ಅವರ ಕೂಲ್ ಅಂಡ್ ಸ್ಟೈಲಿಶ್ ಲುಕ್ ಇದೀಗ ಟ್ರೆಂಡ್ ಆಗುತ್ತಿದೆ. ಈ ಪೋಸ್ಟರ್ ಅನ್ನು ಸಿತಾರಾ ಎಂಟರ್ಟೈನ್ಮೆಂಟ್ಸ್ ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್ ಮಾಡಿದೆ. ಇನ್ನು ಈ ಚಿತ್ರ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 

ಇದನ್ನೂ ಓದಿ-Mouni Roy: ಶೈನಿಂಗ್‌ ಬಟ್ಟೆ ಧರಿಸಿ ಸ್ಟನ್ನಿಂಗ್‌ ಲುಕ್‌ ಕೊಟ್ಟ ಮೌನಿ...ಪೋಟೋಸ್‌ ನೋಡಿ

ಸದ್ಯದಲ್ಲೇ ಲೋಕೇಶ್ ಕನಕರಾಜ್ ಚಿತ್ರತಂಡ ಈ ಚಿತ್ರದ ಪ್ರಮೋಷನ್ ಕಾರ್ಯ ಆರಂಭಿಸಲಿದೆ. ಇದಲ್ಲದೇ ಸೆಪ್ಟೆಂಬರ್ 30 ಅಥವಾ ಅಕ್ಟೋಬರ್ 01 ರಂದು ಲಿಯೋ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲು ನಿರ್ಮಾಪಕರು ರೆಡಿಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಚಿತ್ರತಂಡದಿಂದ ಅಧಿಕೃತ ಹೇಳಿಕೆ ಬರಬೇಕಿದೆ. 

ಲಿಯೋ ಚಿತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಹೆರಾಲ್ಡ್ ದಾಸ್ ಪಾತ್ರದಲ್ಲಿ ಮತ್ತು ಸಂಜಯ್ ದತ್ ಆಂಟೋನಿ ದಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಝಲಕ್ ವೈರಲ್ ಆಗುತ್ತಿದೆ. ಪ್ರಿಯಾ ಆನಂದ್, ಮಲಯಾಳಂ ನಟಿ ಶಾಂತಿ ಮಾಯಾದೇವಿ, ಮನ್ಸೂರ್ ಅಲಿ ಖಾನ್, ಗೌತಮ್ ವಾಸು ದೇವಮೆನನ್, ಮಿಸ್ಕಿನ್, ಮ್ಯಾಥ್ಯೂ ಥಾಮಸ್, ಸ್ಯಾಂಡಿ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. 

ಇದನ್ನೂ ಓದಿ-ದುಲ್ಕರ್ ಸಲ್ಮಾನ್ ನಟನೆಯ ʼಕಿಂಗ್ ಆಫ್ ಕೋಥಾʼ OTT ಎಂಟ್ರಿಗೆ ಡೇಟ್‌ ಫಿಕ್ಸ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News