ಲೋಕಸಭಾ ಚುನಾವಣಾ ಫಲಿತಾಂಶದ ನಡುವೆ ಟ್ವಿಟ್ಟರ್'ನಲ್ಲಿ ಸನ್ನಿ ಲಿಯೋನಿ ಟ್ರೆಂಡ್ ಆಗಿದ್ಯಾಕೆ!

ದೇಶಾದ್ಯಂತ ಎಲ್ಲರ ಚಿತ್ತ 2019ರ ಲೋಕಸಭಾ ಚುನಾವಣಾ ಫಲಿತಾಂಶದತ್ತ ನೆಟ್ಟಿದೆ. ಏತನ್ಮಧ್ಯೆ, ಬಾಲಿವುಡ್ ನಟಿ ಸನ್ನಿ ಲಿಯೋನಿ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದ್ದಾರೆ.

Last Updated : May 23, 2019, 12:16 PM IST
ಲೋಕಸಭಾ ಚುನಾವಣಾ ಫಲಿತಾಂಶದ ನಡುವೆ ಟ್ವಿಟ್ಟರ್'ನಲ್ಲಿ ಸನ್ನಿ ಲಿಯೋನಿ ಟ್ರೆಂಡ್ ಆಗಿದ್ಯಾಕೆ! title=
File Image

ನವದೆಹಲಿ: ಸಾಮಾಜಿಕ ಜಾಲತಾಣ ಒಂದು ವೇದಿಕೆಯಾಗಿದ್ದು, ಯಾರು ಯಾವ ಸಮಯದಲ್ಲಾದರೂ ಟ್ರೆಂಡ್ ಮಾಡಬಹುದು. ದೇಶಾದ್ಯಂತ ಇಂದು ಎಲ್ಲರ ಚಿತ್ತ 2019ರ ಲೋಕಸಭಾ ಚುನಾವಣಾ ಫಲಿತಾಂಶದತ್ತ ನೆಟ್ಟಿದೆ. ಏತನ್ಮಧ್ಯೆ,  ಬಾಲಿವುಡ್ ನಟಿ ಸನ್ನಿ ಲಿಯೋನಿ  ಟ್ವಿಟ್ಟರ್ ಟಾಪ್ ಟ್ರೆಂಡ್ ಪಟ್ಟಿಯಲ್ಲಿದ್ದಾರೆ. ಇಂದು ಸನ್ನಿ ಲಿಯೋನಿ ಹುಟ್ಟುಹಬ್ಬ ಏನಿಲ್ಲ. ಸನ್ನಿಯ ಯಾವ ಹೊಸ ಚಿತ್ರಗಳ ಇವೆಂಟ್ ಕೂಡಾ ಇಲ್ಲ. ಆದರೂ ಟ್ವಿಟ್ಟರ್ ಈ ಟ್ರೆಂಡಿಂಗ್ ಲಿಸ್ಟ್ ನಲ್ಲಿ ಸನ್ನಿ ಲಿಯೋನಿ...? ಇದು ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದೆ.

 
 
 
 

 
 
 
 
 
 
 
 
 

Love this #Berryglimmer Lip shade by @starstruckbysl 😍💋 #SunnyLeone

A post shared by Sunny Leone (@sunnyleone) on

ವಾಸ್ತವವಾಗಿ, ಲೋಕಸಭಾ ಚುನಾವಣಾ ಟ್ರೆಂಡ್ ಬಗ್ಗೆ ಹೇಳುವ ವೇಳೆ ಆಂಕರ್ ಲೋಕಸಭಾ ಚುನಾವಣಾ ಸ್ಪರ್ಧಿ ಸನ್ನಿ ಡಿಯೋಲ್ ಎಂದು ಹೇಳುವ ಬದಲಿಗೆ ಬಾಯಿತಪ್ಪಿ ಸನ್ನಿ ಲಿಯೋನ್ ಎಂದು ಹೇಳಿದ್ದಾರೆ. ಆ ವಿಡಿಯೋ ಕ್ಲಿಪ್ ಟ್ವಿಟ್ಟರ್ ನಲ್ಲಿ ಶೇರ್ ಆಗಿದೆ. ಆ ವಿಡಿಯೋ ನೋಡು ನೋಡುತ್ತಲೇ ಟ್ವಿಟ್ಟರ್ ನಲ್ಲಿ ಟ್ರೆಂಡ್ ಕೂಡಾ ಆಗಿದೆ. (ಗಮನಿಸಿ: ಸನ್ನಿ ಲಿಯೋನಿ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿಲ್ಲ.)

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ನ ಗುರುದಾಸ್ಪುರ್ ಕ್ಷೇತ್ರದಿಂದ ಸನ್ನಿ ಡಿಯೋಲ್ ಸ್ಪರ್ಧಿಸಿದ್ದಾರೆ. ಬಾಲಿವುಡ್ ಚಿತ್ರರಂಗದ ನಟ ಸನ್ನಿ ಡಿಯೋಲ್ ಈ ಲೋಕಸಭಾ ಚುನಾವಣೆಯಿಂದ ರಾಜಕೀಯ ಪ್ರವೇಶಿಸಿದ್ದಾರೆ. ತಮ್ಮ 27ನೇ ವಯಸ್ಸಿನಲ್ಲಿ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದ ಸನ್ನಿ ಡಿಯೋಲ್ ಇದೀಗ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. 

Trending News