ದಕ್ಷಿಣದ ಈ ನಟಿಗಾಗಿ ಸಿನಿಮಾ ನಿರ್ಮಿಸಲಿದ್ದಾರೆ ಎಂ.ಎಸ್‌.ಧೋನಿ!

ಮೂಲಗಳ ಪ್ರಕಾರ, ಧೋನಿ ಈಗಾಗಲೇ ಮೆಗಾಸ್ಟಾರ್ ರಜನಿಕಾಂತ್ ಅವರ ಆಪ್ತರಲ್ಲಿ ಒಬ್ಬರಾದ ಸಂಜಯ್ ಅವರನ್ನು ಸಂಪರ್ಕಿಸಿದ್ದಾರೆ. ಧೋನಿ ಅವರ ನಿರ್ಮಾಣದ ಚೊಚ್ಚಲ ಚಿತ್ರಕ್ಕೆ ನಯನತಾರಾ ನಾಯಕಿಯಾಗಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Written by - Chetana Devarmani | Last Updated : May 13, 2022, 11:36 AM IST
  • ದಕ್ಷಿಣದ ಈ ನಟಿಗಾಗಿ ಸಿನಿಮಾ ನಿರ್ಮಿಸಲಿದ್ದಾರೆ ಧೋನಿ
  • ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ
  • ನಯನತಾರಾ ನಾಯಕಿಯಾಗಿರುವ ಚಿತ್ರವನ್ನು ನಿರ್ಮಿಸಲಿದ್ದಾರೆ
ದಕ್ಷಿಣದ ಈ ನಟಿಗಾಗಿ ಸಿನಿಮಾ ನಿರ್ಮಿಸಲಿದ್ದಾರೆ ಎಂ.ಎಸ್‌.ಧೋನಿ!  title=
ಎಂ.ಎಸ್.ಧೋನಿ

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಈಗ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ತಮಿಳು ಚಿತ್ರರಂಗದ ಮೂಲಗಳು ತಿಳಿಸಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಚಿತ್ರರಂಗದ ಮೇಲೆ ಕಣ್ಣಿಟ್ಟಿರುವ ಧೋನಿ ತಮಿಳಿನಲ್ಲಿ ನಯನತಾರಾ ನಾಯಕಿಯಾಗಿರುವ ಚಿತ್ರವನ್ನು ನಿರ್ಮಿಸಲಿದ್ದಾರೆ. 

ಮೂಲಗಳ ಪ್ರಕಾರ, ಧೋನಿ ಈಗಾಗಲೇ ಮೆಗಾಸ್ಟಾರ್ ರಜನಿಕಾಂತ್ ಅವರ ಆಪ್ತರಲ್ಲಿ ಒಬ್ಬರಾದ ಸಂಜಯ್ ಅವರನ್ನು ಸಂಪರ್ಕಿಸಿದ್ದಾರೆ. ಧೋನಿ ಅವರ ನಿರ್ಮಾಣದ ಚೊಚ್ಚಲ ಚಿತ್ರಕ್ಕೆ ನಯನತಾರಾ ನಾಯಕಿಯಾಗಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮೇ 20ಕ್ಕೆ 'ಸಕುಟುಂಬ ಸಮೇತ' ಚಿತ್ರಮಂದಿರಕ್ಕೆ ಬನ್ನಿ

ನಯನತಾರಾ ಅವರ ಪತಿ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರು ಧೋನಿಯ ಕಟ್ಟಾ ಅಭಿಮಾನಿಯಾಗಿದ್ದು, ಚಿತ್ರದಲ್ಲಿ ಮಾಜಿ ಭಾರತೀಯ ನಾಯಕ ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಸಹ ಹೇಳಲಾಗುತ್ತಿದೆ.

ನಯನತಾರಾ ಪ್ರಸ್ತುತ ಅಟ್ಲಿ ನಿರ್ದೇಶನದ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಈಗಾಗಲೇ ಮಲಯಾಳಂ ನಿರ್ದೇಶಕ ಅಲ್ಫೋನ್ಸ್ ಪುತ್ರನ್ ಅವರ 'ಪಾಟು' ಮತ್ತು ಅಶ್ವಿನ್ ಸರವಣನ್ ನಿರ್ದೇಶನದ 'ಕನೆಕ್ಟ್' ಚಿತ್ರಕ್ಕಾಗಿ ಕಮಿಟ್ ಆಗಿದ್ದಾರೆ. 

ಭಾರತದ ಮಾಜಿ ಕ್ರಿಕೆಟಿಗ ಹರ್ಬಜನ್ ಸಿಂಗ್ ಅವರು ತಮಿಳಿನ 'ಡಿಕ್ಕಿಲೋನಾ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. 'ಫ್ರೆಂಡ್‌ಶಿಪ್' ಎಂಬ ಮತ್ತೊಂದು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಇದನ್ನೂ ಓದಿ: ವಿದ್ಯುತ್‌ ಸ್ಪರ್ಶಿಸಿ ಜ್ಯೂ. ರವಿಚಂದ್ರನ್‌ ನಿಧನ

ಮಾಜಿ ವೇಗಿ ಎಸ್.ಶ್ರೀಶಾಂತ್ ಅವರು ನಯನತಾರಾ ಅಭಿನಯದ 'ಕಾದು ವಾಕುಲ ರೆಂಡು ಕಾದಲ್' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಅಜಯ್ ಜ್ಞಾನಮುತ್ತು ನಿರ್ದೇಶನದ ವಿಕ್ರಮ್ ನಾಯಕನಾಗಿರುವ ತಮಿಳಿನ 'ಕೋಬ್ರಾ' ಚಿತ್ರದಲ್ಲಿ ಭಾರತದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ನಟಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News