ಅರ್ಜುನ್ ಕಪೂರ್ ಬರ್ತ್ ಡೇ ಗೆ ಪ್ರೇಯಸಿ ಮಲೈಕಾ ಆರೋರಾ ಶುಭ ಹಾರೈಸಿದ್ದು ಹೀಗೆ...!

ಬಾಲಿವುಡ್ ನಲ್ಲಿ ಆಗಾಗ ಜೊತೆಯಾಗಿ ಕಾಣಿಸಿಕೊಂಡು ಸಾಕಷ್ಟು ವಂದತಿಗಳಿಗೆ ಕಾರಣರಾಗಿರುವ ಅರ್ಜುನ್ ಕಪೂರ್-ಮಲೈಕಾ ಆರೋರಾ ಜೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ

Updated: Jun 26, 2020 , 07:28 PM IST
ಅರ್ಜುನ್ ಕಪೂರ್ ಬರ್ತ್ ಡೇ ಗೆ ಪ್ರೇಯಸಿ ಮಲೈಕಾ ಆರೋರಾ ಶುಭ ಹಾರೈಸಿದ್ದು ಹೀಗೆ...!

ನವದೆಹಲಿ: ಬಾಲಿವುಡ್ ನಲ್ಲಿ ಆಗಾಗ ಜೊತೆಯಾಗಿ ಕಾಣಿಸಿಕೊಂಡು ಸಾಕಷ್ಟು ವಂದತಿಗಳಿಗೆ ಕಾರಣರಾಗಿರುವ ಅರ್ಜುನ್ ಕಪೂರ್-ಮಲೈಕಾ ಆರೋರಾ ಜೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ

.

ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅರ್ಜುನ್ ಕಪೂರ್ ಗೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಈ ಸಂದರ್ಭದಲ್ಲಿ ಎಲ್ಲರು ಈಗ ಪ್ರೇಯಸಿ ಮಲೈಕಾ ಆರೋರಾ ಶುಭಕೋರಿರುವುದನ್ನು ವಿಶೇಷವಾಗಿ ಪರಿಗಣಿಸಿದ್ದಾರೆ.ಸಾಮಾಜಿಕ ಮಾಧ್ಯಮದ ವೇದಿಕೆಯಾಗಿರುವ ಇನ್ಸ್ಟಾಗ್ರಾಂ ನಲ್ಲಿ ಮಲೈಕಾ ಆರೋರಾ ತಮ್ಮ ಸಖ ಅರ್ಜುನ್ ಕಪೂರ್ ಗೆ sunshine love ಮೂಲಕ ಶುಭ ಹಾರೈಸಿದ್ದಾರೆ.

ಇದನ್ನು ಓದಿ :ಅರ್ಜುನ್ ಕಪೂರ್ ಹುಟ್ಟುಹಬ್ಬದಂದು ಪ್ರೀತಿಯ ಮುದ್ರೆ ಒತ್ತಿದ ಮಲೈಕಾ ಆರೋರಾ..!

ಮುಖ್ಯವಾಗಿ ಫಿಟ್‌ನೆಸ್ ಮತ್ತು ಯೋಗದಲ್ಲಿ  ಹೆಚ್ಚಾಗಿ ತೊಡಗಿಸಿಕೊಂಡಿರುವ ಮಲೈಕಾ ಕಪೂರ್ ಅವರು ತಮ್ಮ 45 ರ ಹರೆಯದಲ್ಲೂ ಕೂಡ ಎಲ್ಲರೂ ನಾಚುವಂತೆ ಫಿಟ್ ನೆಸ್ ಕಾಪಾಡಿಕೊಂಡಿದ್ದಾರೆ. ಅವರು  ದಿವಾ ಯೋಗ ಕೇಂದ್ರದ ಹೆಸರಿನಿಂದ ಯೋಗ ಸ್ಟುಡಿಯೋವನ್ನು ನಡೆಸುತ್ತಾರೆ. ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನದಲ್ಲಿಡಲು ಯೋಗಕ್ಕೆ ಹೆಚ್ಚಿನ ಆಧ್ಯತೆ ನೀಡಲು ಅವರು ಆಗಾಗ ಕರೆ ನೀಡುತ್ತಾರೆ.