ಮೊಸರಿಗೆ ಒಂದು ಚಮಚ ಈ ಪುಡಿ ಬೆರೆಸಿ ಸೇವಿಸಿದರೆ ಒಂದೇ ವಾರದಲ್ಲಿ ದುಂಡಗಿರುವ ಹೊಟ್ಟೆ ಚಪ್ಪಟೆಯಾಗುವುದು !ದಪ್ಪಗಿರುವವರು ಒಮ್ಮೆ ಟ್ರೈ ಮಾಡಲೇಬೇಕು

 ಮೊಸರನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸೇವಿಸುತ್ತಾ ಬಂದರೆ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಬೊಜ್ಜು ಕರಗುವುದು ನಿಮ್ಮ ಗಮನಕ್ಕೆ ಬರುತ್ತದೆ. 

Written by - Ranjitha R K | Last Updated : Nov 7, 2024, 02:31 PM IST
  • ಪ್ರತಿ ಮನೆಯಲ್ಲಿಯೂ ಮೊಸರನ್ನು ಬಳಸಿಯೇ ಬಳಸುತ್ತಾರೆ.
  • ಮೊಸರು ತೂಕವನ್ನು ಕಡಿಮೆ ಮಾಡುವಲ್ಲಿ ಕೂಡಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ
  • ಮೊಸರು ಹೊಟ್ಟೆ ಮತ್ತು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಮೊಸರಿಗೆ ಒಂದು ಚಮಚ ಈ ಪುಡಿ ಬೆರೆಸಿ ಸೇವಿಸಿದರೆ ಒಂದೇ ವಾರದಲ್ಲಿ ದುಂಡಗಿರುವ ಹೊಟ್ಟೆ ಚಪ್ಪಟೆಯಾಗುವುದು !ದಪ್ಪಗಿರುವವರು ಒಮ್ಮೆ ಟ್ರೈ ಮಾಡಲೇಬೇಕು

ಬೆಂಗಳೂರು : ಪ್ರತಿ ಮನೆಯಲ್ಲಿಯೂ ಮೊಸರನ್ನು ಬಳಸಿಯೇ ಬಳಸುತ್ತಾರೆ. ಕೆಲವರಿಗೆ ಮೂರೂ ಹೊತ್ತು ಮೊಸರು ಬೇಕೇ ಬೇಕು. ಊಟ ಮುಗಿಸುವುದಕ್ಕೆ ಮುನ್ನ ಒಂದು ಚಮಚವಾದರೂ ಮೊಸರು ತಿನ್ನದೇ ಹೋದರೆ ಭೋಜನ ಪೂರ್ಣವಾಗುವುದೇ ಇಲ್ಲ. ಮೊಸರಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಇದ್ದು, ದೇಹವನ್ನು ಡಿಹೈಡ್ರೆಟ್ ಆಗದಂತೆ ತಡೆಯುತ್ತದೆ. ಇನ್ನು ಕೊಸರನ್ನು ವರ್ಷ ಪೂರ್ತಿ ತಿನ್ನಬಹುದು. ಬೇಸಿಗೆಯಲ್ಲಿ ಮೊಸರು ಸೇವನೆ ದೇಹಕ್ಕೆ ಎಷ್ಟು ಅಗತ್ಯವೋ, ಚಳಿಗಾಲದಲ್ಲಿ ಕೂಡಾ ಮೊಸರು ದೇಹಕ್ಕೆ ಅಷ್ಟೇ ಮುಖ್ಯ. ಇನ್ನು ಹಿರಿಯರು ಕಿರಿಯರು ಎನ್ನದೇ ಪ್ರತಿಯೊಬ್ಬರೂ ನಿತ್ಯ ಒಂದು ಕಪ್ ಮೊಸರು ತಿಂದರೆ ಒಳ್ಳೆಯದು. ಮೊಸರು ಹೊಟ್ಟೆ ಮತ್ತು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. 

Add Zee News as a Preferred Source

ಇದೆಲ್ಲದರ ಜೊತೆಗೆ ಮೊಸರು ತೂಕವನ್ನು ಕಡಿಮೆ ಮಾಡುವಲ್ಲಿ ಕೂಡಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಏನೇ ಮಾಡಿದರೂ ಕರಗದ ಹಠಮಾರಿ ಬೊಜ್ಜನ್ನು ಕರಗಿಸುವ ಶಕ್ತಿ ಮೊಸರಿಗಿದೆ. ಮೊಸರನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸೇವಿಸುತ್ತಾ ಬಂದರೆ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಬೊಜ್ಜು ಕರಗುವುದು ನಿಮ್ಮ ಗಮನಕ್ಕೆ ಬರುತ್ತದೆ.  

ಇದನ್ನೂ ಓದಿ : ಮಧುಮೇಹವನ್ನು ಥಟ್ ಅಂತ ಕಡಿಮೆ ಮಾಡುತ್ತೆ ಈ ಎಲೆ...!

ತೂಕ ಇಳಿಸುವಲ್ಲಿ ಮೊಸರು ಹೇಗೆ ಸಹಕಾರಿ: 
ಚಯಾಪಚಯವನ್ನು ಸುಧಾರಿಸುತ್ತದೆ :

ಮೊಸರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆಯ ಹೆಚ್ಚಳ ಎಂದರೆ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯ ಪ್ರಮುಖ ಹಂತ. ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆ ಸರಿಯಾಗಿದ್ದರೆ ದೇಹ ಸಾಕಷ್ಟು ಪೋಷಕಾಂಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. 

ಹಸಿವನ್ನು ತಡೆಯುವ ಶಕ್ತಿ : 
ಪ್ರೋಟೀನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಕಾರ್ಬೋಹೈಡ್ರೇಟ್ ಅನ್ನು ಕಡಿಮೆ ಸೇವಿಸಿ, ಪ್ರೋಟಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಕಳೆದುಕೊಳ್ಳುವ ಪ್ರಕ್ರಿಯೆ ಸುಲಭವಾಗಲಿದೆ. ಮೊಸರಿನಲ್ಲಿ ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ. ಹಾಗಾಗಿ ಇದು ತೂಕ ನಷ್ಟ ಮಾಡಲು ಬಯಸುವವರಿಗೆ ಬೆಸ್ಟ್  ಆಹಾರವಾಗಿದೆ.  

ಇದನ್ನೂ ಓದಿ : ದೇಹದಲ್ಲಿನ ಕೊಲೆಸ್ಟ್ರಾಲ್‌ ಅನ್ನು ತೆಗೆದು ಹಾಕಿ.. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು, ಈ ಮೂರು ಆಹಾರ ಪದಾರ್ಥಗಳನ್ನು ಸೇವಿಸಿ ಸಾಕು..!

ಈ ರೀತಿಯಾಗಿ ಮೊಸರನ್ನು ಆಹಾರದಲ್ಲಿ ಸೇರಿಸಿ : 
1.ಬೆಳಗಿನ ಉಪಾಹಾರದಲ್ಲಿ ಸ್ಮೂಥಿಯಾಗಿ ತೆಗೆದುಕೊಳ್ಳಿ.
2.ಮೊಸರು ಬಜ್ಜಿ ರೂಪದಲ್ಲಿ ಸೇವಿಸಬಹುದು 
3.ಮೊಸರು ತಿನ್ನುವಾಗ ಸಕ್ಕರೆ ಬದಲು ಜೀರಿಗೆ ಮೆಂತ್ಯೆ ಪುಡಿ ಸೇರಿಸಿದ ಮಸಾಲೆಯುಕ್ತ ಮೊಸರನ್ನು ತಿಂದರೆ ಹೆಚ್ಚು ಪರಿಣಾಮಕಾರಿ. 
4.ಮೊಸರಿಗೆ ಡ್ರೈ ಫ್ರುಟ್ಸ್ ಗಳನ್ನು ಸೇವಿಸಿ ತಿಂದರೂ ಸಹಾಯಕ. 

(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದುಗಳನ್ನು ಆಧರಿಸಿ ಬರೆಯಲಾಗಿದೆ. ಈ ಮಾಹಿತಿಯನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News