ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ಭಾವನಾತ್ಮಕ ಪೋಸ್ಟ್!

Chiranjeevi Sarja Birthday: ತಮ್ಮ Instagram ಖಾತೆಯಲ್ಲಿ ಚಿರಂಜೀವಿ ಸರ್ಜಾರ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಮೇಘನಾ ಸರ್ಜಾ ಅವರು ‘We CHOOSE to CELEBRATE and only CELEBRATE you CHIRU! Happy Birthday Husband!’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

Written by - Puttaraj K Alur | Last Updated : Oct 17, 2023, 02:38 PM IST
  • ಇಂದು ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಹುಟ್ಟಹಬ್ಬ
  • ಪತಿ ನೆನೆದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಮೇಘನಾ ರಾಜ್
  • ಸಹೋದರ ಚಿರಂಜೀವಿ ಸರ್ಜಾರನ್ನು ನೆನೆದ ನಟ ಧ್ರುವ ಸರ್ಜಾ
ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ಭಾವನಾತ್ಮಕ ಪೋಸ್ಟ್! title=
ನಟ ಚಿರಂಜೀವಿ ಸರ್ಜಾ ಹುಟ್ಟಹಬ್ಬ

ಬೆಂಗಳೂರು: ಇಂದು ನಟ ದಿ.ಚಿರಂಜೀವಿ ಸರ್ಜಾರ ಹುಟ್ಟು ಹಬ್ಬ. ಈ ವಿಶೇಷ ಸಂದರ್ಭದಲ್ಲಿ ಚಿರು ಪತ್ನಿ ಮೇಘನಾ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಸಾವಿರಾರು ಅಭಿಮಾನಿಗಳು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ Instagram ಖಾತೆಯಲ್ಲಿ ಚಿರಂಜೀವಿ ಸರ್ಜಾರ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಮೇಘನಾ ಸರ್ಜಾ ಅವರು ‘We CHOOSE to CELEBRATE and only CELEBRATE you CHIRU! Happy Birthday Husband!’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ಪ್ರೇಮ ಕತೆ: ಸಂಗೀತಾ - ಕಾರ್ತಿಕ್ ಮಧ್ಯೆ ಅನುರಾಗ ಅರಳೋ ಸಮಯ! ಸ್ನೇಹನಾ ಪ್ರೀತಿನಾ?

 
 
 
 

 
 
 
 
 
 
 
 
 
 
 

A post shared by Meghana Raj Sarja (@megsraj)

2020ರ ಜೂನ್ ತಿಂಗಳಿನಲ್ಲಿ ಹೃದಯಾಘಾತದಿಂದ ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ತಮ್ಮ 36ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಆ ಸಂದರ್ಭದಲ್ಲಿ ನಟಿ ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ದರು. ಈ ಸಂದರ್ಭದಲ್ಲಿಯೇ ಚಿರು ಬಾರದ ಲೋಕಕ್ಕೆ ಪಯಣಿಸಿ ಶಾಕ್ ನೀಡಿದ್ದರು.

ಚಿರಂಜೀವಿ ಸರ್ಜಾ ಬದುಕಿದ್ದರೆ ಕುಟುಂಬದ ಜೊತೆಗೆ ಖುಷಿಯಿಂದ ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ಸಣ್ಣ ವಯಸ್ಸಿನಲ್ಲಿಯೇ ಚಿರಂಜೀವಿ ಸರ್ಜಾ ಅವರು ಬದುಕಿನ ಪಯಣ ಮುಗಿಸಿದ್ದು ದುರಂತ.   

ಇದನ್ನೂ ಓದಿ: Keerthy Suresh: ಒಂದು ಚಿತ್ರಕ್ಕೆ 4 ಕೋಟಿ ಸಂಭಾವನೆ.. ಕೀರ್ತಿ ಸುರೇಶ್ ಒಟ್ಟು ಆಸ್ತಿ ಎಷ್ಟು?

ಸಹೋದರ ಧ್ರುವ ಸರ್ಜಾ ಸಹ ಚಿರಂಜೀವಿ ಸರ್ಜಾರ ಹುಟ್ಟುಹಬ್ಬದ ದಿನ ಸಹೋದರನನ್ನು ನೆನೆದು ಸ್ಮರಿಸಿಕೊಂಡಿದ್ದಾರೆ. ಸಮಯ ಸಿಕ್ಕಾಗ ನಟ ಧ್ರುವ ಸರ್ಜಾ ಅವರು ಚಿರು ಪುತ್ರ ರಾಯನ್ ಜೊತೆ ಕಾಲ ಕಳೆಯುತ್ತಾರೆ. ಅವರ ಜೊತೆಗೆ ಆಟವಾಡುತ್ತಾ ಖುಷಿಯಿಂದ ಇರುತ್ತಾರೆ. ಇತ್ತೀಚೆಗೆ ರಾಯನ್ ಜೊತೆಗೆ ಧ್ರುವ ಅವರು ಆಟವಾಡುತ್ತಿರುವ ವಿಡಿಯೋವನ್ನು ಮೇಘನಾ ರಾಜ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News