ಒಂದು ಕಾಲದಲ್ಲಿ ಸ್ಟಾರ್‌ ಹಿರೋಯಿನ್‌ ಆಗಿದ್ದ ನಟಿ ಇಂದು ಬಿಕ್ಷುಕಿ, ಹುಚ್ಚಿ..! ಯಾರು ಆ ನಟಿ..?

ಬಣ್ಣದ ಲೋಕ ಯಾರನ್ನ ಯಾವಾಗ ಹೇಗೆ ಬದಲಾಯಿಸುತ್ತೆ ಎನ್ನುವುದೇ ಅರ್ಥವಾಗುವುದಿಲ್ಲ. ಒಂದು ಕಾಲದಲ್ಲಿ ಮಾಡೆಲ್, ಹೀರೋಯಿನ್ ಆಗಿ ಮಿಂಚಿದ್ದ ನಟಿ, ನಂತರ ಅವಕಾಶಗಳನ್ನು ಕಳೆದುಕೊಂಡು, ಭಿಕ್ಷುಕಿಯಾದಳು. ಹಸಿವು ನೀಗಿಸಲು ಕಳ್ಳತನ ಮಾಡಿ ಜೈಲು ಪಾಲಾದಳು. ಯಾರು ಆ ನಟಿ.. ಏನಾಯ್ತು..? ಇಲ್ಲಿದೆ ಹೃದಯವಿದ್ರಾಹಕ ಕಹಾನಿ..

Written by - Krishna N K | Last Updated : Oct 25, 2023, 07:25 PM IST
  • ಸೋಷಿಯಲ್‌ ಮೀಡಿಯಾದಿಂದ ರಾತ್ರೋರಾತ್ರಿ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ.
  • ಅಲ್ಲದೆ, ರಾತ್ರೋರಾತ್ರಿ ಸ್ಟಾರ್ ನಟರು, ನಿರ್ಮಾಪಕರು ನಡುರಸ್ತೆಗೂ ಬಂದಿದ್ದಾರೆ.
  • ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ನಟಿ ಇಂದು ಬಿಕ್ಷುಕಿ.
ಒಂದು ಕಾಲದಲ್ಲಿ ಸ್ಟಾರ್‌ ಹಿರೋಯಿನ್‌ ಆಗಿದ್ದ ನಟಿ ಇಂದು ಬಿಕ್ಷುಕಿ, ಹುಚ್ಚಿ..! ಯಾರು ಆ ನಟಿ..? title=

Mitali Sharma : ಸಿನಿಮಾ ಇಂಡಸ್ಟ್ರಿ ಯಾರನ್ನ, ಯಾವಾಗ ಹೇಗೆ ಬದಲಾಗುತ್ತೆ ಅಂತ ಹೇಳುವುದು ಕಷ್ಟ. ಈಗಂತೂ ಸೋಷಿಯಲ್‌ ಮೀಡಿಯಾದಿಂದ ರಾತ್ರೋರಾತ್ರಿ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಅಲ್ಲದೆ, ರಾತ್ರೋರಾತ್ರಿ ಸ್ಟಾರ್ ನಟರು, ನಿರ್ದೇಶಕರು, ನಿರ್ಮಾಪಕರು ನಡುರಸ್ತೆಗೆ ಬಂದ ಘಟನೆಗಳೂ ಸಹ ನಮ್ಮ ಮುಂದಿವೆ. 

ಅದೇ ರೀತಿ ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ನಟಿ ನಡು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾ ಜೀವನ ಕಳೆದರು. ಕಳ್ಳತನ ಮಾಡಿ ಜೈಲಿಗೆ ಹೋದಳು, ಕೊನೆಗೆ ಹುಚ್ಚಾಸ್ಪತ್ರೆಗೆ ದಾಖಲೆಯಾದಳು. ಈಗ ಹೇಗಿದ್ದಾಳೆ, ಎಲ್ಲಿದ್ದಾಳೆ ಎನ್ನುವ ಮಾಹಿತಿಯೇ ಇಲ್ಲ.. ಹಾಗಾದರೆ ಯಾರು ಆ ನಟಿ..? ಏನಾಯ್ತು ಅವಳಿಗೆ ಅಂತ ನೋಡೋಣ..

ಇದನ್ನೂ ಓದಿ:ನಾನು ಧರಿಸಿದ್ದ ಹುಲಿ ಉಗುರು ನಕಲಿ, ನೈಜವಾದುದ್ದಲ್ಲ : ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟನೆ

ಹೌದು.. ಅನೇಕ ಯುವಕರು ಚಿತ್ರರಂಗಕ್ಕೆ ಬರಲು ಹಾತೊರೆಯುತ್ತಿರುತ್ತಾರೆ. ಆದರೆ, ಎಲ್ಲರೂ ಈ ಮಾಹಾನಗರಿಯಲ್ಲಿ ಮಿಂಚಲು ಸಾಧ್ಯವಿಲ್ಲ. ಸಿನಿಮಾ ಅವಕಾಶಗಳಿಗಾಗಿ ಹಲವರು ಮುಂಬೈಗೆ ಹೋಗುತ್ತಾರೆ. ಆದರೆ, ನಟರಾಗಿ ಯಶಸ್ಸು ಗಳಿಸುವವರು ಕೆಲವರು ಮಾತ್ರ. ಎಷ್ಟೇ ಪ್ರಯತ್ನ ಪಟ್ಟರೂ ಕೆಲವರಿಗೆ ಸಾಧ್ಯವಾಗುವುದೇ ಇಲ್ಲ. ಅಂತಹ ಜನರ ಜೀವನ ಕೆಲವೊಮ್ಮೆ ಊಹಿಸಲಾಗದ ಹಂತಕ್ಕೆ ಹೋಗುತ್ತದೆ.

Open photo

ನಟಿ ಮಿಥಾಲಿ ಶರ್ಮಾ, ಭೋಜ್‌ಪುರಿ ಚಿತ್ರರಂಗದಲ್ಲಿ ಅಗ್ರ ನಾಯಕಿಯಾಗಿ ಮಿಂಚಿದ ಸುಂದರಿ. ಒಂದು ಕಾಲದಲ್ಲಿ ಸಿನಿಮಾ ಮಾಡಲು ಮುಂದಾಗುವ ಭೋಜ್‌ಪುರಿ ನಿರ್ದೇಶಕರು ಮತ್ತು ನಿರ್ಮಾಪಕರ ಮೊದಲ ಆಯ್ಕೆ ಮಿಥಾಲಿ. ಆದರೆ, ಈ ನಟಿ ನಟಿಸಿದ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋತ ನಂತರ ಅವರ ಜೀವನವೇ ಬದಲಾಯಿತು. ಅವಕಾಶಗಳು ಸಂಪೂರ್ಣ ಕೈ ಬಿಟ್ಟವು.

ಇದನ್ನೂ ಓದಿ:ವಿಜಯ್‌ 'ಲಿಯೋ' ಪ್ರಚಾರದಲ್ಲಿ ಕಾಲ್ತುಳಿತ : ನಿರ್ದೇಶಕ ಲೋಕೇಶ್ ಕನಕರಾಜ್‌ಗೆ ಗಾಯ

ಇದರಿಂದಾಗಿ ನಟಿ ಬೀದಿಗೆ ಬಂದಳು. ಅಲ್ಲದೆ, ಬದುಕಲು ಸಾಗಿಸಲು ಮುಂಬೈನ ಲೋಖಂಡವಾಲಾ ಬೀದಿಗಳಲ್ಲಿ ತಿರುಗುತ್ತಾ ಭಿಕ್ಷೆ ಬೇಡಲು ಪ್ರಾರಂಭಿಸಿದಳು. ಆಹಾರಕ್ಕಾಗಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಆಕೆಯನ್ನು ಮುಂಬೈ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ವಿಚಾರ ಬಹು ದೊಡ್ಡ ಸುದ್ದಿಯಾಗಿತ್ತು.

ಮಿಥಾಲಿ ಶರ್ಮಾ ದೆಹಲಿಯ ಹುಡುಗಿ. ಮೊದಲು ಮಾಡೆಲಿಂಗ್‌ಗೆ ಕಾಲಿಟ್ಟರು. ಆ ನಂತರ ನಟಿಯಾಗಬೇಕೆಂಬ ಆಸೆಯಿಂದ ಅದೃಷ್ಟ ಪರೀಕ್ಷೆಗೆಂದು ಮನೆ ಬಿಟ್ಟು ಮುಂಬೈಗೆ ಬಂದಳು. ಮಿಥಾಲಿ ಮುಂಬೈಗೆ ಹೋಗಿದ್ದು ಅವರ ಕುಟುಂಬಕ್ಕೆ ಇಷ್ಟವಾಗಿರಲಿಲ್ಲ. ಅದಕ್ಕೆ ಮನೆಗೆ ಬರಲೇಬೇಡ ಅಂತ ವಿರೋಧಿಸಿದ್ದರಂತೆ.

ಇದನ್ನೂ ಓದಿ:ನಟ ಧನುಷ್ ಮದುವೆಯಾಗ್ಬೇಕು ಅಂತ ತಲೆ ಕೆಡಿಸಿಕೊಂಡಿದ್ರಂತೆ ಈ ನಟಿ..! ಯಾರು ಗೊತ್ತಾ..?

ಹಾಗೂ ಹೀಗೂ ಮಾಡಿ ಕೆಲವೊಂದಿಷ್ಟು ಚಿತ್ರಗಳಲ್ಲಿ ಮಿಥಾಲಿ ನಟಿಸಿದರು, ಮಾಡೆಲಿಂಗ್ ನಲ್ಲೂ ಮಿಂಚಿದರು. ಆದರೆ ಈ ಕೀರ್ತಿ ಬಹಳ ದಿನಗಳ ಕಾಲು ಉಳಿಯಲಿಲ್ಲ, ಬರು ಬರುತ್ತಾ ಅವಕಾಶಗಳು ಕಡಿಮೆಯಾದವು, ಹಣದ ಕೊರತೆ ಅವಳನ್ನು ಖಿನ್ನತೆಗೆ ತಳ್ಳಿತು. ಕಳ್ಳತನದ ಆರೋಪದ ಮೇಲೆ ಮಿಥಾಲಿ ಶರ್ಮಾಳನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಾಗ ಆಕೆ ಊಟ ನೀಡುವಂತೆ ಕೇಳಿದ್ದು ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು.

ನಂತರ ಪೊಲೀಸರು ಆಕೆಯನ್ನು ಥಾಣೆಯ ಮಾನಸಿಕ ಆಶ್ರಯಕ್ಕೆ ಸೇರಿಸಿದ್ದಾರೆ. ಸಧ್ಯ ಮಿಥಾಲಿ ಎಲ್ಲಿದ್ದಾಳೆ... ಹೇಗಿದ್ದಾಳೆ? ಈಗ ಅದೇ ಆಶ್ರಮದಲ್ಲಿ ಇದ್ದಾಳಾ? ಅಥವಾ? ಮುಂತಾದ ವಿಷಯಗಳು ತಿಳಿದಿಲ್ಲ. ಒಮ್ಮೊಮ್ಮೆ ಉತ್ತಮ ನಟಿಯಾಗಿ ಗುರುತಿಸಿಕೊಂಡ ಆಕೆಯ ಬದುಕು ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಎಲ್ಲರನ್ನೂ ದುಃಖಿಸುವಂತೆ ಮಾಡಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News