Aamir Khan : ಹೊಸ ಅವತಾರದಲ್ಲಿ ಅಮಿರ್‌ ಖಾನ್.. ಅಭಿಮಾನಿಗಳಲ್ಲಿ ಹೆಚ್ಚಾಯ್ತು ಕುತೂಹಲ!

Aamir Khan New Look: ಇತ್ತೀಚೆಗೆ, 'ತಾರೆ ಜಮೀನ್ ಪರ್' ಚಿತ್ರದಲ್ಲಿ ಅಮೀರ್ ಖಾನ್ ಜೊತೆ ಕಾಣಿಸಿಕೊಂಡಿದ್ದ ದರ್ಶೀಲ್ ಸಫಾರಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 16 ವರ್ಷಗಳ ನಂತರ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. 

Written by - Chetana Devarmani | Last Updated : Mar 6, 2024, 07:44 AM IST
  • ಅಮೀರ್ ಖಾನ್ ಹೊಸ ಲುಕ್‌
  • ಅಮೀರ್ ಖಾನ್ ಮುಂದಿನ ಸಿನಿಮಾ
  • ದರ್ಶೀಲ್ ಸಫಾರಿ ಅವರ ಪೋಸ್ಟ್
Aamir Khan : ಹೊಸ ಅವತಾರದಲ್ಲಿ ಅಮಿರ್‌ ಖಾನ್.. ಅಭಿಮಾನಿಗಳಲ್ಲಿ ಹೆಚ್ಚಾಯ್ತು ಕುತೂಹಲ!   title=

Aamir Khan New Movie: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌  ಅಮೀರ್ ಖಾನ್ ಯಾವಾಗಲೂ ತಮ್ಮ ವಿಶಿಷ್ಟ ಪಾತ್ರಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಅಮೀರ್ ಖಾನ್ ಅನೇಕ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. 16 ವರ್ಷಗಳ ಹಿಂದೆ ಅಮಿರ್ ನಟನೆಯ ‘ತಾರೆ ಜಮೀನ್ ಪರ್’ ಸಿನಿಮಾ ತೆರೆಕಂಡಿತ್ತು. 2007 ರಲ್ಲಿ ಬಿಡುಗಡೆಯಾದ ಈ ಚಿತ್ರ ಎಲ್ಲರ ಮನಗೆದ್ದಿತ್ತು. ಈ ಸಿನಿಮಾವನ್ನು ದರ್ಶೀಲ್ ಸಫಾರಿ ನಿರ್ದೇಶಿಸಿದ್ದರು.  

ಈಗ 16 ವರ್ಷಗಳ ನಂತರ ದರ್ಶೀಲ್ ಮತ್ತು ಅಮಿರ್‌ ಖಾನ್ ಹೊಸ ಪ್ರಾಜೆಕ್ಟ್‌ನೊಂದಿಗೆ ಮತ್ತೊಮ್ಮೆ ಒಂದಾಗಲಿದ್ದಾರೆ.‌ ಈ ಸುದ್ದಿ ತಿಳಿದು ಅವರ ಅಭಿಮಾನಿಗಳು ಕೂಡ ತುಂಬಾ ಉತ್ಸುಕರಾಗಿದ್ದಾರೆ. ಇತ್ತೀಚೆಗೆ, ದರ್ಶೀಲ್ ಸಫಾರಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಾವು ಮತ್ತು ಅಮೀರ್ ಖಾನ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಮೂಡಿ ಬರಲಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ಬ್ಲ್ಯಾಕ್ ಡ್ರೆಸ್ ನಲ್ಲಿ ರಾ ರಾ ರಕ್ಕಮ್ಮ ಬೆಡಗಿ : ಫೋಟೋಸ್ ಇಲ್ಲಿವೆ

ಇದೀಗ ದರ್ಶೀಲ್ ಸಫಾರಿ ಮತ್ತೊಂದು ಪೋಸ್ಟ್ ಮಾಡಿದ್ದು, ಇದನ್ನು ನೋಡಿದ ನಂತರ ಅಮೀರ್ ಖಾನ್‌ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ಒಂದಿಷ್ಟು ವಿಶಿಷ್ಟ ಹಾಗೂ ಹೊಸ ಕಂಟೆಂಟ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂದು ಈ ಪೋಸ್ಟ್‌ ನೋಡಿದವರು ಊಹಿಸುತ್ತಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Darsheel Safary (@dsafary)

 

ದರ್ಶೀಲ್ ಸಫಾರಿ ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ, ಅಮೀರ್ ಮೂರು ವಿಭಿನ್ನ ಲುಕ್‌ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ, ಅಮೀರ್ ವಿಮಾನವನ್ನು ಹಾರಿಸುತ್ತಿರುವುದನ್ನು ಕಾಣಬಹುದು. ಎರಡನೇ ಫೋಟೋದಲ್ಲಿ ಅಮೀರ್ ಕೈಯಲ್ಲಿ ಟಾರ್ಚ್ ಹಿಡಿದಿರುವ ಆದಿಮಾನವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೂರನೇ ಫೋಟೋದಲ್ಲಿ ಅಮೀರ್ ಗಗನಯಾತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವದ ಬೆಸ್ಟ್ ಡೈರೆಕ್ಟರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ರಿಯಲ್ ಸ್ಟಾರ್!

'ಇದು ಅಮೀರ್ ಅವರ ಮಲ್ಟಿವರ್ಸ್' ಎಂದು ಈ ಪೋಸ್ಟ್‌ ಗೆ ಶೀರ್ಷಿಕೆ ನೀಡಲಾಗಿದೆ. ಈ ನೋಡಿ ಅಭಿಮಾನಿಗಳು ಸಹ ಉತ್ಸುಕರಾಗಿದ್ದಾರೆ. ಜನರು ಪೋಸ್ಟ್‌ಗೆ ಕಾಮೆಂಟ್ ಮಾಡುವ ಮೂಲಕ ಮತ್ತು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News