ಯೂಟ್ಯೂಬ್ನಲ್ಲಿ ಹವಾ ಕ್ರಿಯೇಟ್ ಮಾಡ್ತಿದೆ ಮೌನಿ ರಾಯ್ ಡ್ಯಾನ್ಸ್ ಸಾಂಗ್!

ಗಲಿ ಗಲಿ ಹಾಡಿಗೆ ಮಾದಕವಾಗಿ ಹೆಜ್ಜೆ ಹಾಕಿರುವ ಮೌನಿ ರಾಯ್ ನಿಜಕ್ಕೂ ಯುವಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. 

Last Updated : Jan 28, 2019, 04:54 PM IST
ಯೂಟ್ಯೂಬ್ನಲ್ಲಿ ಹವಾ ಕ್ರಿಯೇಟ್ ಮಾಡ್ತಿದೆ ಮೌನಿ ರಾಯ್ ಡ್ಯಾನ್ಸ್ ಸಾಂಗ್! title=

ನವದೆಹಲಿ: ಇತ್ತೀಚೆಗಷ್ಟೇ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಕೆಜಿಎಫ್' ನ ಹಿಂದಿ ಅವತರಣಿಕೆಯ 'ಗಲಿ ಗಲಿ...' ಹಾಡಿಗೆ ಹೆಜ್ಜೆ ಹಾಕಿ ಡ್ಯಾನ್ಸ್ ಮಾಡಿರುವ ಬಾಲಿವುಡ್ ನಟಿ ಮೌನಿ ರಾಯ್ ಇದೀಗ ಆ ಹಾಡಿನ ಮೂಲಕ ಕೊಟ್ಯಂತಾರಾ ವೀಕ್ಷಕರ ಮನ ಗೆದ್ದಿದ್ದಾರೆ. 

ಕಳೆದ ಡಿಸೆಂಬರ್ 12ರಂದು ಬಿಡುಗಡೆಯಾದ ಈ ಹಾಡನ್ನು ಇದುವರೆಗೆ 11 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದು, ಸದ್ಯ ಗಲಿ ಗಲಿ ಎಲ್ಲರ ಕಿವಿಯಲ್ಲಿ ಗುನುಗುಡುತ್ತಿದೆ. ಚಿತ್ರ ಬಿಡುಗಡೆಯಾಗಿ ತಿಂಗಳೇ ಕಳೆದಿದ್ದರೂ ಸಹ ಹಾಡಿನ ಮೇಲಿನ ಕ್ರೇಜ್ ಎಳ್ಳಷ್ಟೂ ಕಡಿಮೆಯಾಗಿಲ್ಲ. ಅಷ್ಟೇ ಅಲ್ಲ, ಈ ಹಾಡಿಗೆ ಮಾದಕವಾಗಿ ಹೆಜ್ಜೆ ಹಾಕಿರುವ ಮೌನಿ ರಾಯ್ ನಿಜಕ್ಕೂ ಯುವಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. 

Trending News