Head Bush Movie : ಡಾಲಿ ಧನಂಜಯ 'ಹೆಡ್ ಬುಶ್' ಸಿನಿಮಾ ಬಿಡುಗಡೆಗೆ ಎದುರಾಯ್ತು ಕಂಟಕ!

ನಮ್ಮ ತಂದೆ ಜಯರಾಜ್ ರನ್ನ ಚಿತ್ರದ ಟ್ರೈಲರ್ ನಲ್ಲಿ ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ. ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು.

Written by - Zee Kannada News Desk | Last Updated : May 4, 2022, 07:51 PM IST
  • ಹೆಡ್'ಬುಶ್ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಚಲನಚಿತ್ರ ವಾಣಿಜ್ಯಮಂಡಳಿಗೆ ದೂರು
  • ಎಂಪಿ ಜಯರಾಜ್ ಪುತ್ರ ಅಜಿತ್ ಜಯರಾಜ್ ದೂರು ನೀಡಿದ್ದಾರೆ.
  • ನಮ್ಮ ತಂದೆ ಜಯರಾಜ್ ರನ್ನ ಚಿತ್ರದ ಟ್ರೈಲರ್ ನಲ್ಲಿ ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ
Head Bush Movie : ಡಾಲಿ ಧನಂಜಯ 'ಹೆಡ್ ಬುಶ್' ಸಿನಿಮಾ ಬಿಡುಗಡೆಗೆ ಎದುರಾಯ್ತು ಕಂಟಕ! title=

ಬೆಂಗಳೂರು : ಹೆಡ್'ಬುಶ್ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಚಲನಚಿತ್ರ ವಾಣಿಜ್ಯಮಂಡಳಿಗೆ ಎಂಪಿ ಜಯರಾಜ್ ಪುತ್ರ ಅಜಿತ್ ಜಯರಾಜ್ ದೂರು ನೀಡಿದ್ದಾರೆ. 

ನಟ ಡಾಲಿ ಧನಂಜಯ ನಟಿಸಿ ನಿರ್ಮಾಣ ಮಾಡ್ತಿರುವ ಹೆಡ್ ಬುಶ್ ಸಿನಿಮಾ ಇದಾಗಿದೆ. ಇದು ಎಂಪಿ‌ ಜಯರಾಜ್ ಜೀವನಾಧಾರಿತ ಚಿತ್ರವಾಗಿದ್ದು, ಅಗ್ನಿಶ್ರೀಧರ್ ಕಥೆ ಬರೆದಿದ್ದಾರೆ. ಈ ಸಿನಿಮಾ ಡಾಲಿಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. 

ಇದನ್ನೂ ಓದಿ : ಮತ್ತೆ ತೆರೆ ಮೇಲೆ ಮೋಹಕ ತಾರೆ ರಮ್ಯಾ...ಯಾವುದು ಆ ಸಿನಿಮಾ..!?

ದೂರು ಕುರಿತು ಮಾತನಾಡಿರುವ ಅಜಿತ್ ಜಯರಾಜ್, ನಮ್ಮ ತಂದೆ ಜಯರಾಜ್ ರನ್ನ ಚಿತ್ರದ ಟ್ರೈಲರ್ ನಲ್ಲಿ ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ. ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು. ಪೊಲೀಸ್ ವ್ಯವಸ್ಥೆಯಲ್ಲಿನ ಅಕ್ರಮವನ್ನ ವಿರೋಧಿಸಿದವರು. ಕುಟುಂಬಸ್ಥರ ಅನುಮತಿ ಪಡೆಯದೇ ತಂದೆಯವರ ಜೀವನಾಧಾರಿತ ಕಥೆಯನ್ನ ಚಿತ್ರ ಮಾಡಲು ಹೊರಟ್ಟಿದ್ದಾರೆ. ಇದರಿಂದ ನಮ್ಮ ಕುಟುಂಬದವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಹೆಡ್'ಬುಶ್ ಚಿತ್ರದ ಬಿಡುಗಡೆಗೆ ಅವಕಾಶ ನೀಡಬೇಡಿ ಎಂದು ನಾನು ಚಲನಚಿತ್ರ ವಾಣಿಜ್ಯಮಂಡಳಿಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Virat Kohli: ಕಿಂಗ್‌ ಕೊಹ್ಲಿ ಫ್ಯಾನ್ಸ್‌ಗೆ ನಿರ್ದೇಶಕ ಸಿಂಪಲ್ ಸುನಿ ಭರ್ಜರಿ ಆಫರ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News