ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ ʼನಾ ನಿನ್ನ ಬಿಡಲಾರೆʼ ಚಿತ್ರತಂಡ..! 

ನಾ ನಿನ್ನ ಬಿಡಲಾರೆ ಚಿತ್ರದ ಫಸ್ಟ್ ಲುಕ್, ಒಂದು ಮಟ್ಟದ ಸುದ್ದಿ ಮಾಡಿದ್ದು ಟೈಟಲ್ ತುಂಬಾ ಕುತೂಹಲವನ್ನ ಕೆರಳಿಸಿದೆ. ಮೇಲಾಗಿ ನಾ ನಿನ್ನ ಬಿಡಲಾರೆ ಅನ್ನುವಂತಹ ಒಂದು ಶೀರ್ಷಿಕೆ ಬಗ್ಗೆ ನಾವು ಮಾತನಾಡಿದರೆ ಬಹಳ ವರ್ಷಗಳಿಂದ ಇದೇ ಶೀರ್ಷಿಕೆಯಲ್ಲಿ ಬರುವಂತಹ ಸಿನಿಮಾ ರೆಕಾರ್ಡ್ ಮಾಡಿದ್ದು ನೆನಪಿಸಿಕೊಳ್ಳಬಹುದು.

Written by - Krishna N K | Last Updated : Feb 18, 2024, 07:55 PM IST
  • ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಹಾವಳಿ ಜಾಸ್ತಿಯಾಗಿದೆ.
  • ಈಗ ಚಿತ್ರ ರಂಗದಲ್ಲಿ ಇರುವಂತವರು ಮೊದಲು ಬಂದಾಗ ಹೊಸಬರಾಗಿದ್ದರು.
  • ಈಗ ನಿಧಾನವಾಗಿ ತಮ್ಮ ಒಳ್ಳೆಯ ಸಿನಿಮಾಗಳ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ.
ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ ʼನಾ ನಿನ್ನ ಬಿಡಲಾರೆʼ ಚಿತ್ರತಂಡ..!  title=

Naa Ninna Bidalaare Movie : ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಹಾವಳಿ ಜಾಸ್ತಿಯಾಗಿದೆ, ವಿಭಿನ್ನವಾದ ಕಂಟೆಂಟು ಪ್ರತಿಭಾವಂತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ತಮ್ಮಲ್ಲಿರುವಂತಹ ವಿಭಿನ್ನವಾದಂತಹ ಪ್ರತಿಭೆ ಹಾಗೂ ಪ್ರಯತ್ನಗಳೊಂದಿಗೆ ಹೊಸ ರೀತಿಯ ಸಿನಿಮಾಗಳನ್ನ ಮಾಡುತ್ತಲೇ ಬಂದಿದ್ದಾರೆ.

ಈಗ ಚಿತ್ರ ರಂಗದಲ್ಲಿ ಇರುವಂತವರು ಮೊದಲು ಬಂದಾಗ ಹೊಸಬರಾಗಿದ್ದರು. ಈಗ ನಿಧಾನವಾಗಿ ತಮ್ಮ ಒಳ್ಳೆಯ ಸಿನಿಮಾಗಳ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ, ಈ ನಿಟ್ಟಿನಲ್ಲಿ ಸ್ಯಾಂಡಲ್ವುಡ್‌ಗೆ ಮತ್ತೊಂದು ಯುವ ತಂಡ, ಉತ್ಸಾಹಿ ಕಲಾವಿದರ ಬಳಗ ಬಂದು ನಿಂತಿದೆ ಅದುವೇ ನಾ ನಿನ್ನ ಬಿಡಲಾರೆ.

ಇದನ್ನೂ ಓದಿ:ಕಪ್ಪು ಬಟ್ಟೆಯಲ್ಲಿ ಬೋಲ್ಡ್ ಲುಕ್ : ಹೊಸ ಫೋಟೋಶೂಟ್

ಈಗಾಗಲೇ ಬಿಡುಗಡೆಯಾಗಿರುವ ನಾ ನಿನ್ನ ಬಿಡಲಾರೆ ಚಿತ್ರದ ಫಸ್ಟ್ ಲುಕ್, ಒಂದು ಮಟ್ಟದ ಸುದ್ದಿ ಮಾಡಿದ್ದು ಟೈಟಲ್ ತುಂಬಾ ಕುತೂಹಲವನ್ನ ಕೆರಳಿಸಿದೆ. ಮೇಲಾಗಿ ನಾ ನಿನ್ನ ಬಿಡಲಾರೆ ಅನ್ನುವಂತಹ ಒಂದು ಶೀರ್ಷಿಕೆ ಬಗ್ಗೆ ನಾವು ಮಾತನಾಡಿದರೆ ಬಹಳ ವರ್ಷಗಳಿಂದ ಇದೇ ಶೀರ್ಷಿಕೆಯಲ್ಲಿ ಬರುವಂತಹ ಸಿನಿಮಾ ರೆಕಾರ್ಡ್ ಮಾಡಿದ್ದು ನೆನಪಿಸಿಕೊಳ್ಳಬಹುದು.

ಆದರೆ ಹಿರಿಯ ನಟ ಅನಂತನಾಗ್ ಹಾಗೂ ಜ್ಯೂಲಿ ಲಕ್ಷ್ಮಿ ರವರ ಕಾಂಬಿನೇಷನಲ್ಲಿ ಬಂದಂತಹ ನಾ ನಿನ್ನ ಬಿಡಲಾರೆ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಇದು ಹೊಸ ರೀತಿಯ ಕಂಟೆಂಟ್ನ ಹೊಂದಿದೆ ಎನ್ನುವುದು ಚಿತ್ರತಂಡದ ಮಾತು. ಇತ್ತೀಚಿಗಷ್ಟೇ ನಾ ನಿನ್ನ ಬಿಡಲಾರೆ ಚಲನಚಿತ್ರದ ಚಿತ್ರಿಕರಣ ಮುಗಿದು ಕುಂಬಳಕಾಯಿಯನ್ನ ಒಡೆಯಲಾಗಿದೆ.

ಇದನ್ನೂ ಓದಿ:‘ಬಾಹುಬಲಿ’ಯಲ್ಲಿ ʼಕಟ್ಟಪ್ಪʼನ ಪಾತ್ರವನ್ನು ಮಿಸ್ ಮಾಡಿಕೊಂಡ ಬಾಲಿವುಡ್ ಹೀರೋ..!

ಕಮಲ ಉಮಾ ಭಾರತಿ ನಿರ್ಮಾಣ ಸಂಸ್ಥೆಯಲ್ಲಿ ಬರುತ್ತಿರುವಂತಹ, ಶ್ರೀಮತಿ ಭಾರತಿ ಬಾಳಿ ನಿರ್ಮಾಣದ, ನವೀನ್ ಜಿ ಎಸ್ ನಿರ್ದೇಶನದ, ಎಂ ಎಸ್ ತ್ಯಾಗರಾಜ ಸಂಗೀತ ನಿರ್ದೇಶನದ, ವೀರೇಶ್ ಛಾಯಾಗ್ರಣದ, ನಾ ನಿನ್ನ ಬಿಡಲಾರೆ ಚಿತ್ರದ ತಾರಾಗಣದಲ್ಲಿ ಪಂಚಿ ಮತ್ತು ಅಂಬಾಲಿ ಭಾರತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಷ್ಟೇ ಕುಂಬಳಕಾಯಿ ಒಡೆದಿರುವಂತಹ ನಾ ನಿನ್ನ ಬಿಡಲಾರೆ ಚಿತ್ರವು ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದೆ. ಪ್ರತಿ ಹೊಸಬರ ಚಿತ್ರವು ತನ್ನ ಕಂಟೆಂಟ್ ಮೂಲಕ ಎಲ್ಲರ ಮನಸ್ಸನ್ನು ಸೆಳೆಯುತ್ತಿರುವ, ಈ ಜಮಾನದಲ್ಲಿ ನಾ ನಿನ್ನ ಬಿಡಲಾರೆ ಚಿತ್ರವು ಸಹ ಎಲ್ಲರ ಮನಸ್ಸನ್ನು ಗೆಲ್ಲುವ ಭರವಸೆಯಲ್ಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News