ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳ ಆರೋಪಕ್ಕೆ ನಾನಾ ಪಟೇಕರ್ ನಿಂದ ಲೀಗಲ್ ನೋಟಿಸ್

10 ವರ್ಷಗಳ ಹಿಂದೆ ಚಿತ್ರೀಕರಣದ ಸೆಟ್ ನಲ್ಲಿ ನಾನಾ ಪಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಮಾಡಿದ ಆರೋಪಕ್ಕೆ ಈಗ ಹಿರಿಯ ನಟ ನಾನಾ ಪಟೇಕರ್ ಈಗ ನಟಿಗೆ ಕ್ಷಮೆಯಾಚುವಂತೆ ಕೋರಿ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ನೀಡಿದ್ದಾರೆ.

Last Updated : Sep 28, 2018, 06:20 PM IST
ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳ ಆರೋಪಕ್ಕೆ ನಾನಾ ಪಟೇಕರ್ ನಿಂದ ಲೀಗಲ್ ನೋಟಿಸ್   title=

ನವದೆಹಲಿ:10 ವರ್ಷಗಳ ಹಿಂದೆ ಚಿತ್ರೀಕರಣದ ಸೆಟ್ ನಲ್ಲಿ ನಾನಾ ಪಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಮಾಡಿದ ಆರೋಪಕ್ಕೆ ಈಗ ಹಿರಿಯ ನಟ ನಾನಾ ಪಟೇಕರ್ ಈಗ ನಟಿಗೆ ಕ್ಷಮೆಯಾಚುವಂತೆ ಕೋರಿ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ನೀಡಿದ್ದಾರೆ.

ನಿನ್ನೆ ಪಾಟೇಕರ್ ಅವರು ಟೈಮ್ಸ್ ನೌ ಗೆ ನೀಡಿದ ಸಂದರ್ಶನದಲ್ಲಿ ಲೈಂಗಿಕ ದೌರ್ಜನ್ಯ ಎಂದರೇನು? ನನ್ನೊಂದಿಗೆ ಸೆಟ್ನಲ್ಲಿ 50-100 ಜನರು ಇದ್ದರು ಎಂದು ಅವರು ನಟಿಯ ಆರೋಪವನ್ನು ಪ್ರಶ್ನಿಸಿದ್ದಾರೆ. 2008 ರ ಚಲನಚಿತ್ರಕ್ಕಾಗಿ ಒಂದು ಹಾಡನ್ನು ಚಿತ್ರೀಕರಿಸುವಾಗ ನಾನಾ ಪಾಟೇಕರ್ ಅವರು ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು  ತನುಶ್ರೀ ದತ್ತಾ ಆರೋಪಿಸಿದ್ದರು.

ನಾನಾ ಪಾಟೇಕರ್ ಅವರ ವಕೀಲ ಶಿರೋದ್ಕರ್ ಇಂದು ಸುದ್ದಿ ಸಂಸ್ಥೆ ಎಎನ್ಐ ಗೆ ಮಾತನಾಡುತ್ತಾ "ತನುಶ್ರೀ ದತ್ತಾ ಅವರು  ಸುಳ್ಳು ಆರೋಪಗಳನ್ನು ಮಾಡಿದ ಕಾರಣ ಅವರಿಗೆ ಕಾನೂನು ನೋಟಿಸ್ ನ್ನು ಕಳುಹಿಸಿದ್ದೇವೆ ಎಂದು ಅವರು ತಿಳಿಸಿದರು.ನೋಟಿಸ್ ನಲ್ಲಿ ಅವರು ನಟಿಯನ್ನು ಕ್ಷಮೆಯಾಚಿಸಬೇಕೆಂದು ಕೋರಿದ್ದಾರೆ.

Trending News