ಮುಂಬೈ: ಬಾಲಿವುಡ್ ನ 'ದಂ ಮಾರೋ ದಂ' ಗ್ಯಾಂಗ್ ಅನ್ನು Decode ಮಾಡಲಾಗಿದೆ. ಶನಿವಾರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟಿ ಸಾರಾ ಅಲಿ ಖಾನ್ ಗೆ ಡ್ರಗ್ಸ್ ತಲುಪಿಸಿದ ಅನುಜ್ ಕೆಶವಾನಿನನ್ನು ಗುರಿಯಾಗಿಸಿ ಬಂಧನಕ್ಕೆ ಒಳಪಡಿಸಿದೆ. ಅಷ್ಟೇ ಅಲ್ಲ ಆತನ ಬಳಿಯಿಂದ ಅರ್ಧ ಕಿಲೋ ಗಾಂಜಾ ಕೂಡ ವಶಕ್ಕೆ ಪಡೆದಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಅನುಜ್ ಜೆಶವಾನಿ ಬಾಲಿವುಡ್ ನ ಖ್ಯಾತನಾಮರ ಜೊತೆಗೆ ಸಂಪರ್ಕ ಹೊಂದಿದ್ದಾನೆ. ಇತ್ತ NCB ಇದೀಗ ಡ್ರಗ್ ಸಿಂಡಿಕೇಟ್ ಗೆ ಸಂಬಂಧಿಸಿದ ಇತರೆ ವ್ಯಕ್ತಿಗಳ ಶೋಧಕಾರ್ಯದಲ್ಲಿ ತೊಡಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಮತ್ತೋರ್ವ ವ್ಯಕ್ತಿಯ ಬಂಧನ
NCB ಅಧಿಕಾರಿಗಳು ಶನಿವಾರ ಕರಣ್ ಜೀತ್ ಉರ್ಫ್ KGನನ್ನು ಕೂಡ ಬಂಧಿಸಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಕರಣ್ ಜೀತ್ ಓರ್ವ ಡ್ರಗ್ ಸಪ್ಲೈರ್ ಆಗಿದ್ದು, ಆಟ ಕೈಪರಿ ಹಾಗು ಲಿಟಲ್ ಹೈಟ್ಸ್ ನಲ್ಲಿ ಡ್ರಗ್ ಮಾರಾಟ ಮಾಡುತ್ತಾನೆ. ಇದೆ ಕರಣ್ ಜೀತ್ ಶೋವಿಕ್ ಹಾಗೂ ಸ್ಯಾಮ್ಯುಯೆಲ್ ಮಿರಾಂಡಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ.
ರಿಯಾ ಹೇಳಿಕೆಯಿಂದ ಬಾಲಿವುಡ್ ನಲ್ಲಿ ಹಲ್-ಚಲ್
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ರಿಯಾ ಚಕ್ರವರ್ತಿ ಹೇಳಿಕೆಯಿಂದ ಬಾಲಿವುಡ್ ನಲ್ಲಿ ಭಾರಿ ಹಲ್-ಚಲ ಸೃಷ್ಟಿಯಾಗಿದೆ. ಡ್ರಗ್ಸ್ ತೆಗೆದುಕೊಂಡಿರುವ ಬಗ್ಗೆ ರಿಯಾ ನೀಡಿರುವ ಹೌದು ಹಾಗೂ ಇಲ್ಲ ಹೇಳಿಕೆಯ ನಡುವೆ NCB ಗೆ ಡ್ರಗ್ಸ್ ಸಿಂಡಿಕೆಟ್ ನ ಒಟ್ಟು 25 ತಾರೆಯರ ಹೆಸರನ್ನು ಉಲ್ಲೇಖಿಸಿದ್ದಾಳೆ. ಇಂದು ಝೀ ನ್ಯೂಸ್ ನಿಮ್ಮ ಮುಂದೆ ಒಟ್ಟು ಐದು ತಾರೆಯರ ಹೆಸರನ್ನು ಬಹಿರಂಗಪಡಿಸಿದ್ದು, ಶೀಘ್ರದಲ್ಲಿಯೇ NCB ತಾರೆಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.