Netflix You Season 4: ಖ್ಯಾತ ವೆಬ್ ಸರಣಿ "You" ನಾಲ್ಕನೇ ಸೀಸನ್ Netflixನಲ್ಲಿ ಬಿಡುಗಡೆ!

Netflix You Season 4 Released :  ಹಿಟ್ ಸೈಕಲಾಜಿಕಲ್ ಥ್ರಿಲ್ಲರ್‌ನ ಹೊಸ ಸಂಚಿಕೆಗಳು ಇಂದು ಅಂದರೆ ಫೆಬ್ರವರಿ 9 ರಂದು ನೆಟ್‌ಫ್ಲಿಕ್ಸ್‌ನಲ್ಲಿ  ಬಿಡುಗಡೆಯಾಗಿದೆ. ನಾಲ್ಕನೇ ಸೀಸನ್ ಎರಡು ಹಂತಗಳಲ್ಲಿ ಬಿಡುಗಡೆಯಾಗುತ್ತಿದೆ. 

Written by - Ranjitha R K | Last Updated : Feb 9, 2023, 05:22 PM IST
  • ನೆಟ್‌ಫ್ಲಿಕ್ಸ್‌ನ ಹಿಟ್ ವೆಬ್ ಸೀರೀಸ್ ಯುನ ಸೀಸನ್ 4 ಬಿಡುಗಡೆ
  • ಹೊಸ ಸಂಚಿಕೆಗಳು ಇಂದು ಅಂದರೆ ಫೆಬ್ರವರಿ 9 ರಂದು ಬಿಡುಗಡೆ
  • ಎರಡು ಹಂತಗಳಲ್ಲಿ ಸರಣಿ ಬಿಡುಗಡೆ
 Netflix You Season 4: ಖ್ಯಾತ ವೆಬ್ ಸರಣಿ "You" ನಾಲ್ಕನೇ ಸೀಸನ್  Netflixನಲ್ಲಿ ಬಿಡುಗಡೆ!      title=

ಬೆಂಗಳೂರು : ನೆಟ್‌ಫ್ಲಿಕ್ಸ್‌ನ ಹಿಟ್ ವೆಬ್ ಸೀರೀಸ್ ಯುನ  ಸೀಸನ್ 4  ಬಿಡುಗಡೆಯಾಗಿದೆ. ಹಿಟ್ ಸೈಕಲಾಜಿಕಲ್ ಥ್ರಿಲ್ಲರ್‌ನ ಹೊಸ ಸಂಚಿಕೆಗಳು ಇಂದು ಅಂದರೆ ಫೆಬ್ರವರಿ 9 ರಂದು ನೆಟ್‌ಫ್ಲಿಕ್ಸ್‌ನಲ್ಲಿ  ಬಿಡುಗಡೆಯಾಗಿದೆ. ನಾಲ್ಕನೇ ಸೀಸನ್ ಎರಡು ಹಂತಗಳಲ್ಲಿ ಬಿಡುಗಡೆಯಾಗುತ್ತಿದೆ. ಎರಡನೇ ಬ್ಯಾಚ್ ಎಪಿಸೋಡ್‌ಗಳು ಮಾರ್ಚ್ 9 ರಂದು ಪ್ರದರ್ಶನಗೊಳ್ಳಲಿವೆ.

ಈ  ಸೀರಿಸ್ ಸರಣಿ ಹಂತಕ ಪೆನ್ ಬ್ಯಾಡ್ಗ್ಲೇಯ ಜೋ ಗೋಲ್ಡ್ ಬರ್ಗ್ ಕತೆಯನ್ನು ಅನುಸರಿಸುತ್ತದೆ, ಮಹಿಳೆಯರ ಬಗೆಗಇನ್ ಆತನ ಗೊಂದಲ್, ಗೀಳು ಯಾವ  ಕ್ರೂರ ಹಿಂಸಾ ಕೃತ್ಯಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಬಿಚ್ಚಿಡುತ್ತದೆ.  ಸೀಸನ್ ಮೂರರ  ಆಘಾತಕಾರಿ ಟ್ವಿಸ್ಟ್ ಗಳನ್ನು ಅನುಸರಿಸಿ, ನಾಲ್ಕನೇ ಸೀಸನ್ ನಲ್ಲಿ ಜೋ ಲಂಡನ್‌ಗೆ ಪಲಾಯನವಾಗುತ್ತಾನೆ.  ಅಲ್ಲಿ ಪ್ರಾಧ್ಯಾಪಕನಾಗಿ ಮುಂದುವರೆಯುತ್ತಾನೆ. 

ಇದನ್ನೂ ಓದಿ : ವಾರಾಂತ್ಯದ ಮನರಂಜನೆಯ ಮಹಾಪೂರ ಕಾಮಿಡಿ ಕಿಲಾಡಿಗಳು ಸೀಸನ್‌ 4 ಗ್ರ್ಯಾಂಡ್‌ ಫಿನಾಲೆ

'ಯೂ' ಸೀಸನ್ 4 ಅನ್ನು ವೀಕ್ಷಿಸುವುದು ಹೇಗೆ?  
ನೀವು ನೆಟ್‌ಫ್ಲಿಕ್ಸ್‌ನಲ್ಲಿ "ಯು" ಸೀಸನ್ ನಾಲ್ಕನ್ನು ಎರಡು ಹಂತಗಳಲ್ಲಿ ವೀಕ್ಷಿಸಬಹುದು. ಸೀಸನ್ ನ ಮೊದಲ ಐದು ಸಂಚಿಕೆಗಳ ಸ್ಟ್ರೀಮಿಂಗ್  ಫೆಬ್ರವರಿ 9 ರಂದು ಪ್ರಾರಂಭವಾಗುತ್ತದೆ. ಉಳಿದ ಐದು ಸಂಚಿಕೆಗಳು ಮಾರ್ಚ್ 9 ರಂದು ಪ್ರೀಮಿಯರ್ ಆಗುತ್ತವೆ. ಹಿಂದಿನ ಸಂಚಿಕೆಗಳನ್ನು  ವೀಕ್ಷಿಸುವುದಾದರೆ ಮೊದಲ ಮೂರೂ ಸಂಚಿಕೆಗಳು ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿವೆ .

ಈ ಕತೆಯನ್ನು ಕ್ಯಾರೋಲಿನ್ ಕೆಪ್ನೆಸ್ ಅವರ ಅದೇ ಹೆಸರಿನ ಕಾದಂಬರಿ ಸರಣಿಯಿಂದ ಅಳವಡಿಸಲಾಗಿದೆ. ನೆಟ್‌ಫ್ಲಿಕ್ಸ್ ಸರಣಿಯ ನಾಲ್ಕನೇ ಸೀಸನ್‌ನ ನಂತರ, ಪುಸ್ತಕದ ನಾಲ್ಕನೇ ಆವೃತಿ ಫಾರ್ ಯೂ ಅಂಡ್ ಓನ್ಲಿ ಯು, ಏಪ್ರಿಲ್ 2023 ರಲ್ಲಿ ಬಿಡುಗಡೆಯಾಗಲಿದೆ.
 
ಇದನ್ನೂ ಓದಿ :
 ಜೀ ಕನ್ನಡದ ಬೃಹತ್ ರಿಯಾಲಿಟಿ ಶೋ DKD-7 ಹಾಗೂ ಛೋಟಾ ಚಾಂಪಿಯನ್-3 ಆಡಿಷನ್ : ಇಲ್ಲಿದೆ ಮಾಹಿತಿ

ಪೆನ್ ಬ್ಯಾಡ್ಗ್ಲಿ (ಗಾಸಿಪ್ ಗರ್ಲ್)  ಜೋ ಗೋಲ್ಡ್‌ಬರ್ಗ್ ಆಗಿ ನಟಿಸಿದ್ದಾರೆ. ಸೀಸನ್ ನಾಲ್ಕರ ಪಾತ್ರವರ್ಗದಲ್ಲಿ ಟಾಟಿ ಗೇಬ್ರಿಯಲ್ (ದಿ 100), ಲ್ಯೂಕಾಸ್ ಗೇಜ್ (ದಿ ವೈಟ್ ಲೋಟಸ್), ಷಾರ್ಲೆಟ್ ರಿಚಿ (ಘೋಸ್ಟ್ಸ್), ಮತ್ತು ಎಡ್ ಸ್ಪೆಲೀರ್ಸ್ (ಡೌನ್‌ಟನ್ ಅಬ್ಬೆ)  ಕೂಡಾ ಕಾಣಿಸಿಕೊಂಡಿದ್ದಾರೆ. 

 ಈ ಶೋನ್ ಸ್ವರೂಪವು ವೀಕ್ಷಕರು ಅಂದುಕೊಂದದ್ದಕ್ಕಿಂತ ಭಿನ್ನವಾಗಿರಲಿದೆ.    ಸೀರೀಸ್ ಬಿಡುಗಡೆಗೂ ಮುನ್ನ  ಪೆನ್ ಬ್ಯಾಡ್ಗ್ಲಿ, ತಮ್ಮ ಮನಸ್ಸಿನ ಭಾವನೆಯನ್ನು ಹಂಚಿಕೊಂಡಿದ್ದಾರೆ. ಸೀರೀಸ್ ಬಗೆಗಿನ ತಮ್ಮ ಅನುಭವವನ್ನು ಶೇರ್ ಮಾಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News