Chandan-Nivedita: ಅಂಡರ್ ವಾಟರ್‌ನಲ್ಲಿ ನಿವಿ-ಚಂದನ್ ರೋಮ್ಯಾನ್ಸ್‌ ವಿಡಿಯೋ ವೈರಲ್‌

Nivedita Gowda and Chandan Shetty : ಸೆಲೆಬ್ರಿಟಿ ಕಪಲ್‌ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಯಾವಾಗಲೂ ವಿವಿಧ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಬಿಗ್ ಬಾಸ್ ಮನೆಯೊಳಗೆ ಶುರುವಾದ ಅವರ ಸ್ನೇಹ ದಾಂಪತ್ಯ ಜೀವನವಾಗಿ ಸಾಗುತ್ತಿದೆ. ದಂಪತಿಗಳು ಪರಸ್ಪರ ತುಂಬಾ ಪ್ರೀತಿಸುತ್ತಾರೆ ಎಂಬುದನ್ನು ಅನೇಕ ಬಾರಿ ವಿಶೇಷ ರೀತಿಯಲ್ಲಿ ಸಾಬೀತು ಪಡಿಸಿದ್ದಾರೆ.  

Written by - Chetana Devarmani | Last Updated : Jun 1, 2023, 05:33 PM IST
  • ಸೆಲೆಬ್ರಿಟಿ ಕಪಲ್‌ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ
  • ಅಂಡರ್ ವಾಟರ್‌ನಲ್ಲಿ ನಿವಿ-ಚಂದನ್ ರೋಮ್ಯಾನ್ಸ್‌
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Chandan-Nivedita: ಅಂಡರ್ ವಾಟರ್‌ನಲ್ಲಿ ನಿವಿ-ಚಂದನ್ ರೋಮ್ಯಾನ್ಸ್‌ ವಿಡಿಯೋ  ವೈರಲ್‌  title=
Nivedita Gowda and Chandan Shetty

Nivedita Gowda and Chandan Shetty: ಸೆಲೆಬ್ರಿಟಿ ಜೋಡಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಯಾವಾಗಲೂ ವಿವಿಧ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 5 ನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿಯನ್ನು ಗಳಿಸಿದರು. ಅವರು ಮತ್ತು ರಾಪರ್ ಚಂದನ್ ಶೆಟ್ಟಿ ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಶೇರ್‌ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಇವರಿಬ್ಬರ ರೋಮ್ಯಾಂಟಿಕ್‌ ವಿಡಿಯೋವೊಂದು ಸಖತ್‌ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಆಲಿಯಾ ಭಟ್ ತಾತ ನರೇಂದ್ರನಾಥ್ ರಜ್ದಾನ್ ನಿಧನ

ಚಂದನ್ ಶೆಟ್ಟಿ ಅವರು ತಮ್ಮ ಪ್ರೋಫರಷನಲ್‌ ಮತ್ತು ಪರ್ಸನಲ್‌ ಜೀವನದ  ವಿಚಾರಗಳನ್ನು ಹಂಚಿಕೊಳ್ಳಲು ತಮ್ಮ Instagram ಅನ್ನು ಹೆಚ್ಚಾಗಿ ಬಳಸುತ್ತಾರೆ. ಕನ್ನಡದ ಮಾಡೆಲ್ ನಿವೇದಿತಾ ಗೌಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದಲ್ಲಿ ಕಾಣಿಸಿಕೊಂಡ ನಂತರ ಎಲ್ಲರ ಗಮನ ಸೆಳೆದರು. ನಿವೇದಿತಾ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಫ್ಯಾನ್ಸ್‌ಗೆ ಅನೇಕ ಅಪ್‌ಡೇಟ್ಸ್‌ ನೀಡುತ್ತಾರೆ. ನಿವೇದಿತಾ ತನ್ನ ಪತಿ ಚಂದನ್ ಶೆಟ್ಟಿಯೊಂದಿಗೆ ಇನ್ಸ್ಟಾಗ್ರಾಮ್‌ನಲ್ಲಿ ರೋಮ್ಯಾಂಟಿಕ್ ಫೋಟೋ, ರೀಲ್ಸ್‌ಗಳನ್ನ ಶೇರ್‌ ಮಾಡುತ್ತಾರೆ. ಇದೀಗ ಇವರಿಬ್ಬರೂ ಅಂಡರ್‌ ವಾಟರ್‌ನಲ್ಲಿ ಕಿಸ್ ಮಾಡುವ ವಿಡಿಯೋವನ್ನು ಶೇರ್‌ ಮಾಡಿದ್ದು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

 

 

ಚಂದನ್ ಮತ್ತು ನಿವೇದಿತಾ ಬಿಗ್ ಬಾಸ್ ಕನ್ನಡ 5 ರಲ್ಲಿ ಭೇಟಿಯಾದರು. 2020 ರಲ್ಲಿ ಮದುವೆಯಾದರು. ನಿವೇದಿತಾ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿ ಸೀಸನ್ 2 ನಲ್ಲಿ ಸಹ ಭಾಗಿಯಾಗಿದ್ದಾರೆ. ನಿವೇದಿತಾ ಅವರು Vidyuth and Zingbi  ಮೈಸೂರು ಫ್ಯಾಶನ್ ವೀಕ್‌ನಂತಹ ಫ್ಯಾಷನ್ ಶೋಗಳಲ್ಲಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ನಟಿ ಯೂಟ್ಯೂಬ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿಯೂ ಖ್ಯಾತಿಯನ್ನು ಗಳಿಸಿದ್ದಾರೆ. 

ಇದನ್ನೂ ಓದಿ: ದೀಪಿಕಾ - ಐಶ್ವರ್ಯ ಅಲ್ಲ, ಈ ಚೆಲುವೆ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News