Pushpa The Rule: ಪುಷ್ಪ 2 ಟೀಸರ್‌ನಲ್ಲಿ ಇದನ್ನು ಗಮನಿಸಿದ್ದೀರಾ? ಅತಿದೊಡ್ಡ Clue ಬಿಟ್ಟು ಕೊಟ್ಟ ಡೈರೆಕ್ಟರ್‌!

Pushpa The Rule teaser: ವೇರ್ ಈಸ್ ಪುಷ್ಪಾ ಎಂಬ ಕಿರು ಟೀಸರ್ ವಿಡಿಯೋ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಈ ಟೀಸರ್ ವಿಡಿಯೋ ಎಲ್ಲಾ ಭಾಷೆಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ  ಅತಿದೊಡ್ಡ Clue ಬಿಟ್ಟು ಕೊಟ್ಟಿದ್ದಾರೆ. ಪುಷ್ಪ 2 ಟೀಸರ್‌ನಲ್ಲಿ ಇದನ್ನು ಗಮನಿಸಿದ್ದೀರಾ?  

Written by - Chetana Devarmani | Last Updated : Apr 10, 2023, 10:41 AM IST
  • ಎಲ್ಲೆಲ್ಲೂ ವೇರ್ ಈಸ್ ಪುಷ್ಪಾ ಹವಾ ಬಲು ಜೋರು
  • ಪುಷ್ಪ 2 ಟೀಸರ್‌ನಲ್ಲಿ ಇದನ್ನು ಗಮನಿಸಿದ್ದೀರಾ?
  • ಅತಿದೊಡ್ಡ Clue ಬಿಟ್ಟು ಕೊಟ್ಟ ಡೈರೆಕ್ಟರ್‌!
Pushpa The Rule: ಪುಷ್ಪ 2 ಟೀಸರ್‌ನಲ್ಲಿ ಇದನ್ನು ಗಮನಿಸಿದ್ದೀರಾ? ಅತಿದೊಡ್ಡ Clue ಬಿಟ್ಟು ಕೊಟ್ಟ ಡೈರೆಕ್ಟರ್‌! title=
Pushpa The Rule

Pushpa 2 teaser: ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್ ಕಳೆದ ಎರಡು ಮೂರು ದಿನಗಳಿಂದ ರಾಷ್ಟ್ರವ್ಯಾಪಿ ಟ್ರೆಂಡ್ ಆಗಿದ್ದಾರೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪುಷ್ಪರಾಜ್ ಬಗ್ಗೆ ಸುದ್ದಿಗಳು ಬರುತ್ತಿವೆ. ಸುಕುಮಾರ್ ನಿರ್ದೇಶನದ ಪುಷ್ಪ ಮೊದಲ ಭಾಗ ಸೂಪರ್ ಹಿಟ್ ಆಗಿದ್ದರಿಂದ ನಿರ್ಮಾಪಕರು ಎರಡನೇ ಭಾಗವನ್ನು ತುಂಬಾ ಶ್ರದ್ಧೆಯಿಂದ ಮಾಡುತ್ತಿದ್ದಾರೆ.

ಇತ್ತೀಚೆಗೆ ವೇರ್ ಈಸ್ ಪುಷ್ಪಾ ಎಂಬ ಕಿರು ಟೀಸರ್ ವಿಡಿಯೋ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಈ ಟೀಸರ್ ವಿಡಿಯೋ ಎಲ್ಲಾ ಭಾಷೆಗಳಲ್ಲಿ ಸಂಚಲನ ಮೂಡಿಸುತ್ತಿದೆ. ಮೂರು ನಿಮಿಷದ ಈ ಟೀಸರ್ ಮೂಲಕ ಸಿನಿಮಾದ ಎರಡನೇ ಭಾಗ ಹೇಗಿರಲಿದೆ? ಕಥೆ ಏನೆಂಬುದನ್ನು ಸುಕುಮಾರ್ ಸ್ಪಷ್ಟಪಡಿಸಿದ್ದಾರೆ. ಆ ವಿಡಿಯೋವನ್ನು ಸರಿಯಾಗಿ ನೋಡಿದರೆ ಸುಕುಮಾರ್ ಈ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ:  ಬಟ್ಟೆ ಬಿಟ್ಟು ಮಲ್ಲಿಗೆ ಧರಿಸಿದ ಉರ್ಫಿ ಹೊಸ ಗೆಟಪ್..!‌

ಮೊದಲ ಭಾಗದ ಶೀರ್ಷಿಕೆಗಳಲ್ಲಿ ಪುಷ್ಪ ಎಂಬ ಪದಗಳು ಕೆಂಪು ಬಣ್ಣದಲ್ಲಿದ್ದವು, ಆದರೆ ಈ ಇತ್ತೀಚಿನ ಟೀಸರ್ ಬಿಡುಗಡೆಯಾದಾಗ, ಆ ಕೆಂಪು ಅಕ್ಷರಗಳು ಚಿನ್ನದ ಬಣ್ಣಕ್ಕೆ ಬದಲಾಗುತ್ತಿವೆ ಎಂದು ಹೇಳಲಾಗಿದೆ. ಸುಕುಮಾರ್ ಅವರ ಸ್ಟೈಲ್ ನಲ್ಲಿ ಈ ಸುಳಿವು ನೀಡಿರಬಹುದು ಎಂಬ ಮಾತು ಟಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ. ವಾಸ್ತವವಾಗಿ, ಸುಕುಮಾರ್ ಲೆಕ್ಕಾಚಾರಗಳ ಮಾಸ್ಟರ್ ಆಗಿರುವುದರಿಂದ ಅವರ ಎಲ್ಲಾ ಚಲನಚಿತ್ರಗಳು ಕೆಲವು ಆಸಕ್ತಿದಾಯಕ ಪರಿಕಲ್ಪನೆಯೊಂದಿಗೆ ರೂಪುಗೊಂಡಿವೆ.

ಅದಕ್ಕಾಗಿಯೇ ಅವರು ತಮ್ಮ ಚಲನಚಿತ್ರಗಳಲ್ಲಿ ವಿಭಿನ್ನ ಶೀರ್ಷಿಕೆಗಳನ್ನು ರಚಿಸುತ್ತಾರೆ. ಇದೀಗ ಇತ್ತೀಚೆಗಷ್ಟೇ ಬಿಡುಗಡೆಯಾದ ಪುಷ್ಪಾ ಟೀಸರ್‌ನಲ್ಲಿ ಈ ಸುಳಿವನ್ನು ಹಲವರು ಗಮನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸುಕುಮಾರ್ ಏನು ಪ್ಲಾನ್ ಮಾಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ನೀವೂ ಆ ಟೀಸರ್ ನೋಡಿದ್ದೀರಾ? ಗಮನಿಸಿದರೆ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವೇನು? ನೀವು ಏನು ಹೇಳುತ್ತೀರಿ ಎಂಬುದನ್ನು ಕೆಳಗೆ ಕಾಮೆಂಟ್ ಮಾಡಿ.

ಇದನ್ನೂ ಓದಿ:  ಫಸ್ಟ್ ಕಿಸ್ ಬಗ್ಗೆ ಹೇಳುತ್ತಾ ನಾಚಿ ನೀರಾದ ಹರಿಪ್ರಿಯಾ! ತಮ್ಮ 12 ಸೀಕ್ರೆಟ್ ನಿಮ್ಮ ಮುಂದಿಡಲಿದ್ದಾರೆ ʻಸಿಂಹʼಪ್ರಿಯೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News