ಲೈಂಗಿಕ ಶಿಕ್ಷಣದಿಂದ ಏನ್‌ ಪ್ರಯೋಜನ, ಪ್ರಾಕ್ಟಿಕಲ್ ನಡಿಬೇಕು : ನಟಿ ಓವಿಯಾ

ಸ್ಯಾಂಡಲ್‌ವುಡ್‌ ಹಿಟ್‌ ಸಿನಿಮಾ ʼಕಿರಾತಕʼದಲ್ಲಿ ನಟಿಸಿದ್ದ ನಟಿ ಓವಿಯಾ ಲೈಂಗಿಕ ಶಿಕ್ಷಣದಿಂದ ಏನು ಪ್ರಯೋಜನ, ಪ್ರಾಯೋಗಿಕವಾಗಿ ನಡೆಯಬೇಕು ಎಂದು ಹೇಳಿರುವ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಈ ಕುರಿತ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ 

Written by - Krishna N K | Last Updated : Sep 22, 2023, 09:39 PM IST
  • ʼಕಿರಾತಕʼ ನಟಿ ಓವಿಯಾ ಲೈಂಗಿಕ ಶಿಕ್ಷಣ ಕುರಿತ ಹೇಳಿಕೆ ವೈರಲ್‌
  • ಲೈಂಗಿಕ ಶಿಕ್ಷಣದಿಂದ ಏನು ಪ್ರಯೋಜನ, ಪ್ರಾಯೋಗಿಕವಾಗಿ ನಡೆಯಬೇಕು ಎಂದ ನಟಿ
  • ಸೋಷಿಯಲ್‌ ಮೀಡಿಯಾದಲ್ಲಿ ಓವಿಯಾ ಬೋಲ್ಡ್‌ ಟಾಕ್‌ ವೈರಲ್‌
ಲೈಂಗಿಕ ಶಿಕ್ಷಣದಿಂದ ಏನ್‌ ಪ್ರಯೋಜನ, ಪ್ರಾಕ್ಟಿಕಲ್ ನಡಿಬೇಕು : ನಟಿ ಓವಿಯಾ title=

Oviya : ಕಿರಾತಕ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ನಟಿ ಓವಿಯಾ. ಬೋಲ್ಡ್‌ ನಟಿ ಆಗಾಗ ತಮ್ಮ ದಿಟ್ಟ ಮಾತುಗಳಿಂದ ಟ್ರೋಲ್‌ ಆಗುತ್ತಲೇ ಇರುತ್ತಾರೆ. ಇದೀಗ ಓವಿಯಾ ಲೈಂಗಿಕತೆಯ ಬಗ್ಗೆ ಹೇಳಿರುವ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಓವಿಯಾ ಭಾಗವಹಿಸಿದ್ದರು. ಆಗ ಅವರು, ಲೈಂಗಿಕ ಶಿಕ್ಷಣದಿಂದ ಏನು ಪ್ರಯೋಜನ, ಪ್ರಾಯೋಗಿಕವಾಗಿ ನಡೆಯಬೇಕು ಎಂದು ಹೇಳಿರುವ ಮಾತುಗಳು ಸಖತ್‌ ವೈರಲ್‌ ಆಗಿವೆ. ಅಲ್ಲದೆ, ಎಲ್ಲರೂ ಮುಖವಾಡ ಧರಿಸಿ ಬದುಕುತ್ತಿದ್ದಾರೆ. ಎಲ್ಲರಲ್ಲೂ ಆಸೆಗಳಿವೆ. ಹಾರ್ಮೋನ್‌ಗಳಿವೆ. ಹಲವರು ಸಂಸ್ಕೃತಿಯ ಹಿಂದೆ ಅಡಗಿದ್ದಾರೆ. ವೇಶ್ಯಾವಾಟಿಕೆ ಮಾಡಬೇಕು, ಅದನ್ನು ಕಾನೂನುಬದ್ಧಗೊಳಿಸಬೇಕು. ಹಾಗೆ ಮಾಡಿದರೆ ಅತ್ಯಾಚಾರ ಕಡಿಮೆಯಾಗುತ್ತವೆ ಅಂತ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮತ್ತೆ ಒಂದಾದ ʼʼಲವ್ ಸ್ಟೋರಿʼʼ ಜೋಡಿ..! ನಾಗಚೈತನ್ಯ ಮುಂದಿನ ಸಿನಿಮಾಗೆ ಸಾಯಿಪಲ್ಲವಿ ನಾಯಕಿ

ಇನ್ನು ಓವಿಯಾ ಈ ಮಾತುಗಳು ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಕೆಲವರು ಓವಿಯಾ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಹೆಣ್ಣಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಅಂತ ಕೆಲ ನಟ್ಟಿಗರು ನಟಿಗೆ ಪಾಠ ಮಾಡಿದ್ದಾರೆ.

ಅಂದಹಾಗೆ ಓವಿಯಾ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕಿರಾತಕ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದರು. ಈ ಸಿನಿಮಾದಲ್ಲಿನ ಓವಿಯಾ ನಟನೆಗೆ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದರು. 2007 ಕಂಗಾರೋ ಎಂಬ ಮಲಯಾಳಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕನ್ನಡ, ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News