ʼಯಾವುದಾದ್ರೂ ಹುಡುಗಿನ ಕ್ಯಾಚ್‌ ಹಾಕೊಂಡ್ರೆ ಒಳ್ಳೆಯದುʼ

ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಆರ್ಯವರ್ಧನ್ ಗುರೂಜಿ‌ ಟಿಪ್ಸ್‌ ನೀಡುತ್ತಿದ್ದಾರೆ. ದರ್ಶ್‌ ಚಂದಪ್ಪ ಅವರಿಗೆ ಯಾವುದಾದ್ರೂ ಹುಡುಗಿನ ಕ್ಯಾಚ್‌ ಹಾಕೊಂಡ್ರೆ ನೀನು ಮನೆಯಲ್ಲಿ ಉಳಿತಿಯಾ ಎಂದು ಕಿವಿಮಾತು ಹೇಳಿದ್ದು, ಬಿಗ್‌ಬಾಸ್‌ ವಾರದ ಕತೆ ಕಿಚ್ಚನ ಜೊತೆ ಪ್ರೋಮೋದಲ್ಲಿದೆ. ಅಲ್ಲದೆ, ಗುರೂಜಿ ಇನ್ನೂ ಯಾರ್ಯಾರಿಗೆ ಏನೇನು ಹೇಳಿದ್ದಾರೆ ಅನ್ನೋದು ರಾತ್ರಿ 9:30 ರಿವಿಲ್‌ ಆಗಲಿದೆ.

Written by - Krishna N K | Last Updated : Oct 1, 2022, 06:11 PM IST
  • ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಆರ್ಯವರ್ಧನ್ ಗುರೂಜಿ‌ ಟಿಪ್ಸ್‌
  • ಯಾವುದಾದ್ರೂ ಹುಡುಗಿನ ಕ್ಯಾಚ್‌ ಹಾಕೊಂಡ್ರೆ ನೀನು ಮನೆಯಲ್ಲಿ ಉಳಿತಿಯಾ ಎಂದು ಕಿವಿಮಾತು
  • ಯಾರ್ಯಾರಿಗೆ ಏನೇನು ಹೇಳಿದ್ದಾರೆ ಅನ್ನೋದು ರಾತ್ರಿ 9:30ಕ್ಕೆ ರಿವಿಲ್‌
ʼಯಾವುದಾದ್ರೂ ಹುಡುಗಿನ ಕ್ಯಾಚ್‌ ಹಾಕೊಂಡ್ರೆ ಒಳ್ಳೆಯದುʼ title=

BBKS 9 : ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಆರ್ಯವರ್ಧನ್ ಗುರೂಜಿ‌ ಟಿಪ್ಸ್‌ ನೀಡುತ್ತಿದ್ದಾರೆ. ದರ್ಶ್‌ ಚಂದಪ್ಪ ಅವರಿಗೆ ಯಾವುದಾದ್ರೂ ಹುಡುಗಿನ ಕ್ಯಾಚ್‌ ಹಾಕೊಂಡ್ರೆ ನೀನು ಮನೆಯಲ್ಲಿ ಉಳಿತಿಯಾ ಎಂದು ಕಿವಿಮಾತು ಹೇಳಿದ್ದು, ಬಿಗ್‌ಬಾಸ್‌ ವಾರದ ಕತೆ ಕಿಚ್ಚನ ಜೊತೆ ಪ್ರೋಮೋದಲ್ಲಿದೆ. ಅಲ್ಲದೆ, ಗುರೂಜಿ ಇನ್ನೂ ಯಾರ್ಯಾರಿಗೆ ಏನೇನು ಹೇಳಿದ್ದಾರೆ ಅನ್ನೋದು ರಾತ್ರಿ 9:30 ರಿವಿಲ್‌ ಆಗಲಿದೆ.

ದರ್ಶ್‌ ಚಂದಪ್ಪ ಅವರಿಗೆ ಆರ್ಯವರ್ಧನ್‌ ಗುರೂಜಿ ಟಿಪ್ಸ್‌ ನೀಡಿದ್ದಾರೆ. ನೀನು ಚನ್ನಾಗಿದ್ದಿಯಾ, ನಿಂಗೆ ಹುಡುಗಿರು ಬಿಳ್ತಾರೆ. ಕ್ಯಾಚ್‌ ಹಾಕ್ಕೊಂಡ್ರೆ ಜಾಸ್ತಿ ದಿನಾ ಉಳಿತಿಯಾ ಎಂದು ದರ್ಶ್‌ ಹೇಳುತ್ತಿದ್ದಂತೆ ಸುದೀಪ್‌ ಅವರು ಅದಾದ ನಂತ್ರ ಹಾಗೇ ಹುಡ್ಗೀರು ಕೈ ಕೊಡ್ತಾರೆ ಅಂತ ಹೇಳಿದ್ರು ಅಲ್ವಾ ಎಂದಾಗ ದರ್ಶ್‌ ಹೌದೌದು ಹೇಳಿದರು. ಆಗ ಮನೆಯಲ್ಲಿದ್ದ ಸದಸ್ಯರೆಲ್ಲರೂ ಜೋರಾಗಿ ನಕ್ಕರೆ ಹೆಣ್ಮಕ್ಳು ಮೂಗುಮುರಿದರು.

ಇದನ್ನೂ ಓದಿ: Congress President Election: ಖರ್ಗೆ-ತರೂರ್ ಮಧ್ಯೆ ನೇರ ಹಣಾಹಣಿ, ತ್ರಿಪಾಠಿ ನಾಮಪತ್ರ ರದ್ದು  

ಇಷ್ಟೇ ಅಲ್ಲದೆ, ಕಾವ್ಯಾಶ್ರೀ ಗೌಡ, ರೂಪೇಶ್‌ ಮತ್ತು ಸಾನಿಯಾ ಮಾತಾಡ್ಬೇಕಾದ್ರೆ ಇವರು ನನ್ನ ಹತ್ರ ಬಂದ್ಬಿಟ್ಟು, ನೀನು ಹಂಗೆ ಬಿಟ್ಟು ಕೊಡ್ಬೇಡ ಉರಿಸ್ಬೇಕು ಎಂದ್ರು ಆಗ ರೂಪೇಶ್‌ ಶೆಟ್ಟಿ ಸುದೀಪ್‌ ಅವರಿಗೆ ಸರ್‌ ಇವಾಗ ನಾನು ಕನ್ಪೂಸ್‌ನಲ್ಲಿ ಇದಿನಿ ಎನ್ನುತ್ತಾರೆ ಆಗ ಕನ್ಪೂಸ್‌ ಯಾಕೆ ಆರ್ಯವರ್ಧನ್‌ ಅವರು ಕರೆಕ್ಟಾಗಿ ಹೇಳಿದ್ದಾರಲ್ಲ ಎಂದು ಕಾಲೆಳೆದರು.

ಸದ್ಯ ಮನೆಯ ಸದಸ್ಯರ ಒಂದೊಂದೆ ಕುತೂಹಲ ಸಂಗತಿಯ ತುಣುಕುಗಳು ವಾರನ ಕತೆ ಕಿಚ್ಚನ ಜೊತೆ ಪ್ರೋಮೋದಲ್ಲಿದೆ. ಫುಲ್‌ ಸ್ಟೋರಿ ಗೊತ್ತಾಗ್ಬೇಕು ಅಂದ್ರೆ ಕಾರ್ಯಕ್ರಮವನ್ನು ನೋಡಲೇ ಬೇಕು. ಒಟ್ಟಾರೆಯಾಗಿ ಪ್ರೋಮೋ ನೋಡಿದ್ರೆ ಬಿಗ್‌ ಹೌಸ್‌ನಲ್ಲಿ ಆರ್ಯವರ್ಧನ್‌ ಗುರೂಜಿ ಅವರು ಟಿಪ್ಸ್‌ಗಳು ಹೊರಗೆ ಬರುತ್ತಿದ್ದು, ಇನ್ನು ಯಾರ್ಯಾರಿಗೆ ಏನೇನೂ ಹೇಳಿದ್ದಾರೋ ಎಂಬ ಕುತೂಹಲ ವೀಕ್ಷಕರಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News