ಪದ್ಮವಿಭೂಷಣ ಚಿರಂಜೀವಿ ಅವರಿಗೆ ಅಮೆರಿಕದಲ್ಲಿ ಸನ್ಮಾನ.. ವಿಡಿಯೋ ವೈರಲ್!

Chiranjeevi: ಪದ್ಮವಿಭೂಷಣ ಚಿರಂಜೀವಿ ಅವರಿಗೆ ಅಮೆರಿಕದಲ್ಲಿರುವ ಅವರ ಅಭಿಮಾನಿಗಳಿಂದ ಅದ್ದೂರಿ ಆತ್ಮೀಯ ಸ್ವಾಗತ ದೊರೆತಿದೆ... ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Written by - Savita M B | Last Updated : Feb 19, 2024, 03:48 PM IST
  • ಪದ್ಮವಿಭೂಷಣ ಚಿರಂಜೀವಿ ಅವರಿಗೆ ಅಮೆರಿಕದಲ್ಲಿರುವ ಅವರ ಅಭಿಮಾನಿಗಳಿಂದ ಅದ್ದೂರಿ ಆತ್ಮೀಯ ಸ್ವಾಗತ ದೊರೆತಿದೆ
  • ಚಿತ್ರರಂಗದ ಮಂದಿ ಮತ್ತು ಅಭಿಮಾನಿಗಳು ಚಿರುಗೆ ಸನ್ಮಾನ ಮಾಡಲು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ
  • ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಪದ್ಮವಿಭೂಷಣ ಚಿರಂಜೀವಿ ಅವರಿಗೆ ಅಮೆರಿಕದಲ್ಲಿ ಸನ್ಮಾನ.. ವಿಡಿಯೋ ವೈರಲ್! title=

Padma Vibhushan Chiranjeevi: ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಪ್ರಶಸ್ತಿ ಪಡೆದು ತಮ್ಮ ಹಿರಿಮೆಯ ಗರಿಯನ್ನು ಹೆಚ್ಚಿಸಿಕೊಂಡಿದ್ದಾರೆ.. ಈ ಪ್ರಶಸ್ತಿ ಪಡೆದ ನಂತರ.. ಚಿತ್ರರಂಗದ ಮಂದಿ ಮತ್ತು ಅಭಿಮಾನಿಗಳು ಚಿರುಗೆ ಸನ್ಮಾನ ಮಾಡಲು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.. ಅದೇ ರೀತಿ ಸದ್ಯ ಅವರನ್ನು ಗೌರವಿಸಲು ಅಮೆರಿಕದಲ್ಲಿನ ಚಿರಂಜೀವಿ ಅಭಿಮಾನಿಗಳು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು..

ಟಾಲಿವುಡ್‌ನ ಪ್ರಮುಖ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯ ಮುಖ್ಯಸ್ಥ ಟಿಜಿ ವಿಶ್ವ ಪ್ರಸಾದ್ ಅವರ ಆಶ್ರಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿರಂಜೀವಿ "ನನಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದ್ದಕ್ಕೆ ತುಂಬಾ ಖುಷಿಯಾಗಿದೆ.. ಜೊತೆಗೆ ತನ್ನನ್ನು ತುಂಬಾ ಆಶೀರ್ವದಿಸುವ ಪ್ರೇಕ್ಷಕರ ಮೆಚ್ಚುಗೆಯನ್ನೂ ಪಡೆದಿದ್ದೇನೆ ಎಂದಿದ್ದಾರೆ.." ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ-Sangeetha Bhat: ಗಂಗೂಬಾಯಿ ಕಥಿಯಾವಾಡಿಯಂತೆ ಕ್ಲಾಂತ ಸುಂದರಿ ಹಾಟ್‌ ಫೋಟೋಶೂಟ್‌!

ಶೀಘ್ರದಲ್ಲೇ ಟಾಲಿವುಡ್ ಫಿಲ್ಮ್ ಕೌನ್ಸಿಲ್ ಅದ್ಧೂರಿಯಾಗಿ ಮತ್ತೊಂದು ಸನ್ಮಾನ ಕಾರ್ಯಕ್ರಮವೊಂದನ್ನು ನಡೆಸಲಿದೆ. ಈ ಕಾರ್ಯಕ್ರಮಕ್ಕೆ ಇಂಡಸ್ಟ್ರಿಯ ಎಲ್ಲಾ ಹೀರೋಗಳು ಮತ್ತು ಸ್ಟಾರ್ ಮೇಕರ್‌ಗಳು ಬರುವಂತೆ ನಿರ್ಮಾಪಕ ದಿಲ್ ರಾಜು ಪ್ಲಾನ್ ಮಾಡಿದ್ದಾರೆ ಎಂದು ವರದಿಯಾಗಿದೆ. ಆ ಕಾರ್ಯಕ್ರಮಕ್ಕಾಗಿ ಮೆಗಾ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಈ ಸಮಾರಂಭದಲ್ಲಿ ಮೆಗಾ ಹೀರೋಗಳ ಜೊತೆಗೆ ಇತರ ಹೀರೋಗಳನ್ನೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ..

ಇನ್ನು ಚಿರು ಅವರ ಚಿತ್ರಗಳ ವಿಷಯಕ್ಕೆ ಬಂದರೆ... ಸದ್ಯ 'ವಿಶ್ವಂಭರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಿಂಬಿಸಾರ ನಿರ್ದೇಶಕ ವಶಿಷ್ಠ ನಿರ್ದೇಶನದ ಈ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಬ್ಯಾನರ್ ದೊಡ್ಡ ಬಜೆಟ್‌ನಲ್ಲಿ ಗ್ರಾಫಿಕಲ್ ವಂಡರ್ ಆಗಿ ನಿರ್ಮಿಸಲಿದೆ. ಇದರಲ್ಲಿ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭಿಸಿರುವ ಈ ಚಿತ್ರ ಮುಂದಿನ ವರ್ಷ ಸಂಕ್ರಾಂತಿಗೆ ಸಿದ್ಧವಾಗಲಿದೆ.

ಇದನ್ನೂ ಓದಿ-Akshay Kumar: ಶೂಟಿಂಗ್ ವೇಳೆ ಅಕ್ಷಯ್ ಕುಮಾರ್‌ಗೆ ಕಚ್ಚಿದ್ದ ಶಾರ್ಕ್‌.. ಸಾವಿನ ಕದ ತಟ್ಟಿ ಬಂದ ಬಾಲಿವುಡ್ ಕಿಲಾಡಿ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News