ಕಟೀಲು ಶ್ರೀದುರ್ಗಾಪರಮೇಶ್ವರಿ ದರ್ಶನ ಪಡೆದ ಪ್ರಭಾಸ್, ಶೀಘ್ರದಲ್ಲೇ ‌ಕೊಡ್ತಾರಾ ಗುಡ್‌ ನ್ಯೂಸ್!

Prabhas visits Katilu Sridurgaparameshwari Temple: ರೆಬೆಲ್ ಸ್ಟಾರ್ ಪ್ರಭಾಸ್ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆದರೆ ಯಾರೂ ಗುರುತಿಸದಂತೆ ಗೆಟಪ್ ಬದಲಾಯಿಸಿದ್ದಾರೆ. ಇದರಿಂಗಾಗಿ ಡಾರ್ಲಿಂಗ್‌ ಅಭಿಮಾನಿಗಳು ಶೀಘ್ರದಲ್ಲೇ ‌ಕೊಡ್ತಾರಾ ಗುಡ್‌ ನ್ಯೂಸ್ ಕೊಡುತ್ತಾರಾ ಎಂದು ನಿರೀಕ್ಷಿಸುತ್ತಿದ್ದಾರೆ.. 

Written by - Savita M B | Last Updated : Jan 13, 2024, 01:15 PM IST
  • ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಬ್ಯುಸಿಯಾಗಿರುವ ರೆಬೆಲ್ ಸ್ಟಾರ್ ಪ್ರಭಾಸ್ ಸಲಾರ್ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ
  • ಇದೇ ವೇಳೆ ನಟ ಕರ್ನಾಟಕದ ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ನೀಡಿ.. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ..
  • ನಟ ಪ್ರಭಾಸ್ ಕರ್ನಾಟಕದ ಮಂಗಳೂರು ಬಳಿಯ ಐತಿಹಾಸಿಕ ದೇವತೆ ದುರ್ಗಾ ಪರಮೇಶ್ವರಿಯ ದರ್ಶನ ಪಡೆದಿದ್ದಾರೆ
ಕಟೀಲು ಶ್ರೀದುರ್ಗಾಪರಮೇಶ್ವರಿ ದರ್ಶನ ಪಡೆದ ಪ್ರಭಾಸ್, ಶೀಘ್ರದಲ್ಲೇ ‌ಕೊಡ್ತಾರಾ ಗುಡ್‌ ನ್ಯೂಸ್!  title=

Darling Prabhas: ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಬ್ಯುಸಿಯಾಗಿರುವ ರೆಬೆಲ್ ಸ್ಟಾರ್ ಪ್ರಭಾಸ್ ಸಲಾರ್ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದೇ ವೇಳೆ ನಟ ಕರ್ನಾಟಕದ ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ನೀಡಿ.. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.. 

ನಟ ಪ್ರಭಾಸ್ ಕರ್ನಾಟಕದ ಮಂಗಳೂರು ಬಳಿಯ ಐತಿಹಾಸಿಕ ದೇವತೆ ದುರ್ಗಾ ಪರಮೇಶ್ವರಿಯ ದರ್ಶನ ಪಡೆದಿದ್ದಾರೆ.. ಇವರೊಂದಿಗೆ ‘ಸಲಾರ್’ ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಸಹ 
ಪ್ರಭಾಸ್‌ ಜೊತೆಯಾಗುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ..

ಇದನ್ನೂ ಓದಿ-ಕಂಗನಾ ಜೀವನದಲ್ಲಿ ಪ್ರೀತಿಯ ಸಿಂಚನ.. ಬಾಲಿವುಡ್‌ ಕ್ವೀನ್ ಕೈ ಹಿಡಿದು ನಿಂತ ಈ ಹುಡುಗ ಯಾರು ಗೊತ್ತೇ!

ಪ್ರಭಾಸ್ ತಲೆಗೆ ಟೋಪಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಯಾರೂ ಗುರುತಿಸದ ಹಾಗೆ ಕನ್ನಡಕ ಹಾಕಿಕೊಂಡು ದೇವಸ್ಥಾನಕ್ಕೆ ಹೋಗಿದ್ದಾರೆ. ಕೊನೆಯ ಕ್ಷಣದವರೆಗೂ ಅಲ್ಲಿರುವ ಭಕ್ತರು ಅವರನ್ನು ಗುರುತಿಸಿಲ್ಲ.. ಕೊನೆಗೆ ದರ್ಶನ ಪಡೆಯುವಾಗ ಅವರು ಪ್ರಭಾಸ್‌ ಎಂದು ಗೊತ್ತಾಗಿ ಪೋಟೋಗಳನ್ನು ತೆಗೆದಿದ್ದಾರೆ.. ಸದ್ಯ ಆ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ.. 

ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ...ಪ್ರಭಾಸ್ ಅಲ್ಲಿಯೇ ಕೆಲಕಾಲ ತಂಗಿದ್ದರು. ದೇವಸ್ತಾನದಲ್ಲಿ ಅವರನ್ನು ಸನ್ಮಾನಿಸಿ ದೇವಿಯ ಭಾವಚಿತ್ರವನ್ನು ನೀಡಲಾಯಿತು.. ಬಳಿಕ ತೀರ್ಥ ಪ್ರಸಾದವನ್ನು ಕೊಡಲಾಯಿತು.. 

ಸಲಾರ್ ನಿರ್ಮಾಪಕ ವಿಜಯ್ ಕಿರ್ಗಂದೂರು ದುರ್ಗಾ ಪರಮೇಶ್ವರಿಯ ಕಟ್ಟಾ ಭಕ್ತ. ಕಿರ್ಗಂದೂರು ದೇಶಾದ್ಯಂತ ಅನೇಕ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.. ಇದೀಗ ಪ್ರಭಾಸ್ ಅವರನ್ನು ಕರೆದುಕೊಂಡು ಬಂದು ದುರ್ಗಾ ಪರಮೇಶ್ವರಿ ಅಮ್ಮನವರ ದರ್ಶನ ಪಡೆದಿದ್ದಾರೆ.. 

ಇದನ್ನೂ ಓದಿ-ಮದುವೆಯಾಗದೇ ತಾಯಿಯಾದ ಖ್ಯಾತ ನಟಿ.. ಸಿನಿಮಾದಲ್ಲಿ ತುಂಡು ಬಟ್ಟೆ ಹಾಕದೇ ನಿಯಮ ಪಾಲಿಸಿದ್ದ ಬಾಲಿವುಡ್ ಬೆಡಗಿ!

ಸಲಾರ್ ಚಿತ್ರ ಬ್ಲಾಕ್ ಬಸ್ಟರ್ ಚಿತ್ರವಾಗುತ್ತಿದ್ದಂತೆ ಚಿತ್ರತಂಡ ಇತ್ತೀಚೆಗೆ ವಿಜಯೋತ್ಸವ ಆಚರಿಸಿದೆ. ಸಲಾರ್ ಚಿತ್ರದ ಯಶಸ್ಸಿನ ನಂತರ ಪ್ರಭಾಸ್ ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. 

ಪ್ರಭಾಸ್ ಅವರ ಹೊಸ ಚಿತ್ರ ಕಲ್ಕಿ 2898 AD ಕುರಿತು ಹೊಸ ಅಪ್‌ಡೇಟ್‌ಗಳು ಇತ್ತೀಚೆಗಷ್ಟೇ ಹೊರಬೀಳುತ್ತಿದ್ದು.. ಮೇ 9 ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News