Pathaan : ಬ್ಯಾನ್‌, ಬಾಯ್ಕಾಟ್‌ಗೆ ಬಗ್ಗದ ʼಪಠಾಣ್‌ʼ.. ನಾಳೆ‌ ಕಿಂಗ್‌ ಖಾನ್‌ ಚಿತ್ರದ ಟ್ರೇಲರ್‌ ರಿಲೀಸ್‌..!

ಸಾಕಷ್ಟು ಸಮಯದ ನಂತರ ಭರ್ಜರಿಯಾಗಿ ತೆರೆ ಮೇಲೆ ಮಿಂಚಲು ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ ಸಿದ್ಧರಾಗಿದ್ದಾರೆ. ಈಗಾಗಲೇ ʼಪಠಾಣ್‌ʼ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಬಹುನಿರೀಕ್ಷಿತ ಟ್ರೇಲರ್‌ ಬಿಡುಗಡೆಗೆ ದಿನಾಂಕ್‌ ಫಿಕ್ಸ್‌ ಆಗಿದ್ದು, ನಾಳೆ ಅಂದ್ರೆ ಜ.10 ರಂದು ಪಠಾಣ್‌ ಟ್ರೇಲರ್‌ ರಿಲೀಸ್‌ ಆಗಲಿದೆ. ಇದರ ಬೆನ್ನಲ್ಲೆ, ಎಸ್‌ಆರ್‌ಕೆ ಸಿನಿಮಾಗೆ ಬಾಯ್ಕಾಟ್‌, ಬ್ಯಾನ್‌ ಬಿಸಿ ಶುರುವಾಗಿದೆ.

Written by - Krishna N K | Last Updated : Jan 9, 2023, 06:52 PM IST
  • ಲಾಂಗ್‌ ಗ್ಯಾಪ್‌ ನಂತರ ತೆರೆ ಮೇಲೆ ಮಿಂಚಲು ಶಾರುಖ್‌ ಖಾನ್‌ ಸಿದ್ಧರಾಗಿದ್ದಾರೆ.
  • ಈಗಾಗಲೇ ʼಪಠಾಣ್‌ʼ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.
  • ನಾಳೆ ಅಂದ್ರೆ ಜ.10 ರಂದು ಪಠಾಣ್‌ ಟ್ರೇಲರ್‌ ರಿಲೀಸ್‌ ಆಗಲಿದೆ.
Pathaan : ಬ್ಯಾನ್‌, ಬಾಯ್ಕಾಟ್‌ಗೆ ಬಗ್ಗದ ʼಪಠಾಣ್‌ʼ.. ನಾಳೆ‌ ಕಿಂಗ್‌ ಖಾನ್‌ ಚಿತ್ರದ ಟ್ರೇಲರ್‌ ರಿಲೀಸ್‌..! title=

Pathaan trailer : ಸಾಕಷ್ಟು ಸಮಯದ ನಂತರ ಭರ್ಜರಿಯಾಗಿ ತೆರೆ ಮೇಲೆ ಮಿಂಚಲು ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ ಸಿದ್ಧರಾಗಿದ್ದಾರೆ. ಈಗಾಗಲೇ ʼಪಠಾಣ್‌ʼ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಬಹುನಿರೀಕ್ಷಿತ ಟ್ರೇಲರ್‌ ಬಿಡುಗಡೆಗೆ ದಿನಾಂಕ್‌ ಫಿಕ್ಸ್‌ ಆಗಿದ್ದು, ನಾಳೆ ಅಂದ್ರೆ ಜ.10 ರಂದು ಪಠಾಣ್‌ ಟ್ರೇಲರ್‌ ರಿಲೀಸ್‌ ಆಗಲಿದೆ. ಇದರ ಬೆನ್ನಲ್ಲೆ, ಎಸ್‌ಆರ್‌ಕೆ ಸಿನಿಮಾಗೆ ಬಾಯ್ಕಾಟ್‌, ಬ್ಯಾನ್‌ ಬಿಸಿ ಶುರುವಾಗಿದೆ.

ʼಭೇಷರಂ ರಂಗ್‌ʼ ಹಾಡು ಬಿಡುಗಡೆಯಾದಾಗಿನಿಂದಲೇ ಪಠಾಣ್‌ಗೆ ಸಂಕಷ್ಟ ಶುರುವಾಯಿತು. ಭಾರೀ ವಿವಾದಕ್ಕೆ ಶಾರುಖ್​ ಖಾನ್ ಮತ್ತು ದೀಪಿಕಾ ಪಡುಕೊಣೆ ಅಭಿನಯದ ಪಠಾಣ್ ಗುರಿಯಾಗಿತ್ತು. ನಾಳೆ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಹಿಂದಿ, ತೆಲುಗು, ತಮಿಳುನಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ. ಎಸ್‌ಆರ್‌ಕೆ ಅಭಿಮಾನಿಗಳಿಗೆ ಟ್ರೈಲರ್ ಹೇಗಿರುತ್ತೇ ಎನ್ನುವ ಕುತೂಹಲ ಹೆಚ್ಚಾಗಿದೆ. ಇದರ ನಡುವೆ ಚಿತ್ರ ತಂಡ ಟ್ರೈಲರ್​ ಮೂಲಕ ಮತ್ತೆ ಏನಾದರೂ ವಿವಾದ ಎಬ್ಬಿಸುತ್ತಾ? ಎಂಬ ಪ್ರಶ್ನೆ ನೆಟ್ಟಿಗರನ್ನು ಕಾಡಲು ಪ್ರಾರಂಭಿಸಿದೆ.

ಇದನ್ನೂ ಓದಿ: Rachita Ram : ಗಣರಾಜ್ಯೋತ್ಸವ ಮರೆತುಬಿಡಿ ಎಂದ ರಚಿತಾಗೆ ಚಳಿ ಬಿಡಿಸಿದ ನೆಟ್ಟಿಗರು

ಪ್ರಾರಂಭದಿಂದಲೂ ವಿರೋಧ ಎದುರಿಸಿರುವ ಚಿತ್ರಕ್ಕೆ ಈ ಬಾರಿ ಟ್ರೈಲರ್ ಬಿಡುಗಡೆಗೂ ಮುನ್ನವೇ ಸಂಕಷ್ಟ ಶುರುವಾಗಿದೆ.​ ಸೋಶಿಯಲ್ ಮೀಡಿಯಾದಲ್ಲಿ ಬಾಯ್​ಕಾಟ್ ಪಠಾಣ್‌, ಬ್ಯಾನ್‌ ಪಠಾಣ್‌ ಎಂಬ ಅಭಿಯಾನ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ತಲುಪುತ್ತದೆ ಎಂದು ಕಾಯ್ದು ನೋಡಬೇಕಿದೆ. ಇಂಟ್ರಸ್ಟಿಂಗ್‌ ಅಂದ್ರೆ, ಇಷ್ಟು ದಿನ ಪಠಾಣ್ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿತ್ತು. ಆದ್ರೆ ಈಗ, ಬಾಯ್ಕಾಟ್‌ ಬಾಲಿವುಡ್​ ಎಂಬ ಕೂಗು ಶುರುವಾಗಿದ್ದು, ಇದು ಹಿಂದಿ ಮಂದಿಗೆ ದೊಡ್ಡ ತಲೆನೋವಾಗಿದೆ.

ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ #BoycottBollywood #BoycottPathaan ಎಂಬ ಹ್ಯಾಶ್​ ಟ್ಯಾಗ್ ಟ್ರೆಂಡ್‌ ಕ್ರಿಯೇಟ್‌ ಆಗುತ್ತಿದೆ. ಪಠಾಣ್ ಚಿತ್ರ ಬೇಷರಂ ಹಾಡಿನಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದ ʼಕೇಸರಿ ಬಿಕಿನಿʼ ವಿವಾದಕ್ಕೆ ಕಾರಣವಾಗಿತ್ತು. ಕೆಲವರು ಹಾಡು ಅಶ್ಲೀಲವಾಗಿದೆ ಎಂದು ದೂರಿದ್ದರು. ರಾಜಕೀಯ ಅಂಗಳಕ್ಕೂ ಈ ವಿವಾದ ತಲುಪಿತ್ತು. ಅಲ್ಲದೆ, ಸೆನ್ಸಾರ್‌ ಮಂಡಳಿ ಚಿತ್ರದಲ್ಲಿನ ಕೆಲವೊಂದಿಷ್ಟು ದೃಶ್ಯಗಳನ್ನು ತೆರೆಯುವಂತೆ ಆದೇಶ ನೀಡಿತ್ತು. ಇನ್ನು ನಾಳೆ ಟ್ರೇಲರ್‌ ರಿಲೀಸ್‌ ಆಗಲಿದ್ದು, ಮತ್ತ್ಯಾವ ವಿವಾದಕ್ಕೆ ಪಠಾಣ್‌ ಗುರಿಯಾಗುತ್ತೆ ಅಂತ ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News