Rachita Ram : ಗಣರಾಜ್ಯೋತ್ಸವ ಮರೆತುಬಿಡಿ ಎಂದ ರಚಿತಾಗೆ ಚಳಿ ಬಿಡಿಸಿದ ನೆಟ್ಟಿಗರು

Rachita Ram : ಚಿತ್ರದ ಪ್ರಮೋಷನ್‌ ವೇಳೆ ಮಾತನಾಡಿರುವ ನಟಿ ರಚಿತಾ ರಾಮ್‌, ಇಷ್ಟು ವರ್ಷ ಜನವರಿ 26 ಅಂದ್ರೆ ರಿಪಬ್ಲಿಕ್ ಡೇ. ಆದರೆ ಈ ವರ್ಷ ಗಣರಾಜ್ಯೋತ್ಸವ ಅನ್ನೋದನ್ನು ಮರೆತು ಬಿಡಿ, ಬರೀ ಕ್ರಾಂತಿ ಉತ್ಸವ ಅಷ್ಟೇ" ಎಂದು ನಟಿ ರಚಿತಾ ರಾಮ್‌ ಹೇಳಿದರು. 

Written by - Chetana Devarmani | Last Updated : Jan 9, 2023, 05:17 PM IST
  • ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ
  • ಜನವರಿ 26 ರಂದು ಗಣರಾಜ್ಯೋತ್ಸವದ ದಿನದಂದು ಬಿಡುಗಡೆ
  • ಗಣರಾಜ್ಯೋತ್ಸವ ಮರೆತುಬಿಡಿ ಎಂದ ರಚಿತಾಗೆ ಚಳಿ ಬಿಡಿಸಿದ ನೆಟ್ಟಿಗರು
Rachita Ram : ಗಣರಾಜ್ಯೋತ್ಸವ ಮರೆತುಬಿಡಿ ಎಂದ ರಚಿತಾಗೆ ಚಳಿ ಬಿಡಿಸಿದ ನೆಟ್ಟಿಗರು  title=
ರಚಿತಾ ರಾಮ್

Rachita Ram : ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ಜನವರಿ 26 ರಂದು ಗಣರಾಜ್ಯೋತ್ಸವದ ದಿನದಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರಮೋಷನ್‌ ವೇಳೆ ಮಾತನಾಡಿರುವ ನಟಿ ರಚಿತಾ ರಾಮ್‌, ಇಷ್ಟು ವರ್ಷ ಜನವರಿ 26 ಅಂದ್ರೆ ರಿಪಬ್ಲಿಕ್ ಡೇ. ಆದರೆ ಈ ವರ್ಷ ಗಣರಾಜ್ಯೋತ್ಸವ ಅನ್ನೋದನ್ನು ಮರೆತು ಬಿಡಿ, ಬರೀ ಕ್ರಾಂತಿ ಉತ್ಸವ ಅಷ್ಟೇ" ಎಂದು ನಟಿ ರಚಿತಾ ರಾಮ್‌ ಹೇಳಿದರು. ಇದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ರಚಿತಾ ನೀಡಿರುವ ಈ ವಿವಾದಾತ್ಮಕ ಹೇಳಿಕೆ ವೈರಲ್ ಆಗಿದೆ, ಟ್ವಿಟರ್‌ನಲ್ಲಿ ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : IMDB ಟಾಪ್ 20ರಲ್ಲಿ ʼಕಬ್ಜʼಗೆ 7ನೇ ಸ್ಥಾನ : ಉಪ್ಪಿ-ಕಿಚ್ಚನ ಚಿತ್ರದ ಮೇಲೆ ಭಾರಿ ನಿರೀಕ್ಷೆ

ನಿಮ್ಮ ಸಿನಿಮಾ ಬರುತ್ತಿದೆ ಎಂಬ ಕಾರಣಕ್ಕೆ ಗಣರಾಜ್ಯೋತ್ಸವ ಮರಿಬೇಕಾ? ಎಂದು ಪ್ರಶ್ನಿಸಿದ್ದಾರೆ. ಗಣರಾಜ್ಯೋತ್ಸವಕ್ಕಿಂತ ನಿಮ್ಮ ಚಿತ್ರ ದೊಡ್ಡದಾ, ಅನಕ್ಷರಸ್ಥೆ ಥರ ಮಾತನಾಡಬೇಡಿ ಮೊದಲು ದೇಶ ನಂತರ ಸಿನಿಮಾ  ಎಂದು ಹೇಳುವ ಮೂಲಕ ನೆಟ್ಟಿಗರು ರಚಿತಾ ರಾಮ್‌ ಚಳಿ ಬಿಡಿಸಿದ್ದಾರೆ. ಮತ್ತೊಬ್ಬ ಟ್ವಿಟರ್‌ ಬಳಕೆದಾರರು, "ಗಣರಾಜ್ಯೋತ್ಸವ ಮರೆತು ಕ್ರಾಂತಿ ನೋಡಬೇಕಾ? ನೀವು ಭಾರತೀಯರಾ? ಇಲ್ಲಿ ಇರಬೇಡಿ, ಪಾಕಿಸ್ತಾನಕ್ಕೆ ಹೋಗಿ" ಎಂದಿದ್ದಾರೆ. 

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಅಬ್ಬರಿಸುತ್ತಿದೆ. ಚಿತ್ರದಲ್ಲಿ ದರ್ಶನ್‌ಗೆ ಜೊತೆಯಾಗಿ ರಚಿತಾ ರಾಮ್‌ ನಟಿಸಿದ್ದಾರೆ. ವಿ. ರವಿಚಂದ್ರನ್‌, ರವಿಶಂಕರ್‌ ಮತ್ತು ಸಂಸದೆ ಸುಮತಲಾ ಸಿನಿಮಾದಲ್ಲಿದ್ದಾರೆ. ಜ.26 ರಂದು ಕ್ರಾಂತಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಆಲಿಯಾ ಮಗಳ ಮುಖ ರಿವೀಲ್‌ ಮಾಡೋಕೆ ಡೇಟ್‌ ಫಿಕ್ಸ್‌.. ಯಾವಾಗ ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News