Pawan Kalyan : ಭರ್ಜರಿ ಗೆಲುವಿನ ನಂತರ ಮೊದಲ ಬಾರಿಗೆ ಮನೆಗೆ ಬಂದ ತಮ್ಮನಿಗೆ ಚಿರು ಅದ್ಧೂರಿ ಸ್ವಾಗತ..!

Chiranjeevi welcomes Pawan Kalyan : ಆಂಧ್ರ ಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅದ್ಧೂರಿ ಜಯಗಳಿಸಿ ಮೊದಲ ಬಾರಿಗೆ ಮನೆಗೆ ಬಂದ ತಮ್ಮನನ್ನು ಮೆಗಾ ಸ್ಟಾರ್‌ ಚಿರಂಜೀವಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..

Written by - Krishna N K | Last Updated : Jun 6, 2024, 07:54 PM IST
    • ಮೆಗಾ ಕುಟುಂಬದಿಂದ ಪವನ್‌ ಕಲ್ಯಾಣ್‌ಗೆ ಅದ್ಧೂರಿ ಸ್ವಾಗತ
    • ತಮ್ಮನನ್ನು ಬಿಗಿದಪ್ಪಿಕೊಂಡು ಶುಭ ಕೋರಿದ ನಟ ಚಿರಂಜೀವಿ
    • ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
Pawan Kalyan : ಭರ್ಜರಿ ಗೆಲುವಿನ ನಂತರ ಮೊದಲ ಬಾರಿಗೆ ಮನೆಗೆ ಬಂದ ತಮ್ಮನಿಗೆ ಚಿರು ಅದ್ಧೂರಿ ಸ್ವಾಗತ..! title=

Pawan Kalyan : ಸುಧೀರ್ಘ ಸಮಯದ ನಂತರ ರಾಜಕೀಯವಾಗಿ ಶಕ್ತಿ ಪ್ರದರ್ಶಿಸಿದ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರಿಗೆ ಕುಟುಂಬಸ್ಥರಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.. ಪವರ್‌ ಸ್ಟಾರ್‌ ಕಾರು ಮೆಗಾ ಕಂಪೌಂಡ್‌ ಮುಖ್ಯ ದ್ವಾರ ಪ್ರವೇಶಿಸುತ್ತಿದ್ದಂತೆ... ಅಭಿಮಾನಿಗಳಿಂದ ಜಯಘೋಷಗಳು.. ಗುಲಾಬಿ ಹೂಗಳಿಂದ ಸ್ವಾಗತ.. ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಸಡಗರ ಮನೆ ಮಾಡಿತು.. ಈ ಕುರಿತು ವಿಡಿಯೋ ವೈರಲ್‌ ಆಗಿದೆ..

ಹೌದು.. ಆಂಧ್ರ ಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅದ್ಧೂರಿ ಜಯಗಳಿಸಿ ಮೊದಲ ಬಾರಿಗೆ ಮನೆಗೆ ಬಂದ ತಮ್ಮನನ್ನು ಮೆಗಾ ಸ್ಟಾರ್‌ ಚಿರಂಜೀವಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ವಿರೋಚಿತ ಗೆಲುವು ಸಾಧಿಸಿ ಮೆಗಾ ಕಂಪೌಂಡ್‌ ಪ್ರವೇಶಿಸುತ್ತಿದ್ದಂತೆ, ಚಿರು ಕುಟುಂಬದ ಸದಸ್ಯರೆಲ್ಲರೂ ಪವನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. 

ಇದನ್ನೂ ಓದಿ: ಶಾರ್ಟ್‌ ಡ್ರೇಸ್‌ನಲ್ಲಿ ಮಿಂಚಿದ ʼಕಾಂತಾರʼ ಸಿಂಗಾರ ಸಿರಿ..! ಫೋಟೋಸ್‌ ಇಲ್ಲಿವೆ

ಚಿರು ತಮ್ಮನನ್ನು ಅಪ್ಪಿಕೊಂಡು ಗೆಲುವುವನ್ನು ಶ್ಲಾಘಿಸಿದರು. ನಟರಾದ ರಾಮ್ ಚರಣ್, ವರುಣ್ ತೇಜ್ ಮತ್ತು ಸಾಯಿಧರಮ್ ತೇಜ್ ಖುಷಿಯಲ್ಲಿ ಮುಳುಗಿದ್ದರು. ಜನಸೇನಾನಿಗೆ ಅಪ್ಪುಗೆ ಮತ್ತು ಹಾರೈಕೆಗಳ ಸುರಿಮಳೆಗೈದರು. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಪವನ್ ಅಣ್ಣ ಚಿರಂಜೀವಿ ಪಾದಗಳಿಗೆ ನಮಸ್ಕರಿಸಿದರು. 

ಜನಸೇನೆಯ ಅದ್ಭುತ ಗೆಲುವು ಚಿರು ಮನೆಯಲ್ಲಿ ಸಂತಸವನ್ನು ತುಂದಿದೆ. ಚಿರು ಅಭಿಮಾನಿಗಳು ಹಾಗೂ ಜನಸೇನಾ ಕಾರ್ಯಕರ್ತರು ಚಿರಂಜೀವಿ ಮನೆಗೆ ಆಗಮಿಸಿ ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿ ಸಿಹಿ ಹಂಚಿ ಗೆಲುವನ್ನು ಸಂಭ್ರಮಿಸಿದರು. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News