Director P.C. Shekhar: ‘ಲವ್​ ಬರ್ಡ್ಸ್​’ ಚಿತ್ರತಂಡದ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ಪಿ.ಸಿ. ಶೇಖರ್ ​!

The director of the movie 'Love Birds' P.C. Shekhar: ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಟನೆಯ ‘ಲವ್ ಬರ್ಡ್ಸ್’ ಸಿನಿಮಾ ಬಾರಿ ಮೆಚ್ಚುಗೆಗಳಿಸಿತ್ತು. ಇದೀಗ ಈ ಸಿನಿಮಾದ ನಿರ್ದೇಶಕ ಪಿಸಿ ಶೇಖರ್ ‘ಕಡ್ಡಿಪುಡಿ’ ಚಂದ್ರು ವಿರುದ್ಧ ಹಣಕಾಸಿನ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Written by - Zee Kannada News Desk | Last Updated : May 21, 2023, 01:58 PM IST
  • ಪೊಲೀಸ್ ಠಾಣೆ ಮೆಟ್ಟಿಲೇರಿದ ಡಾರ್ಲಿಂಗ್ ‘ಲವ್ ಬರ್ಡ್ಸ್’ ಸಿನಿಮಾ ನಿರ್ದೇಶಕ
  • ಕಡ್ಡಿಪುಡಿ’ ಚಂದ್ರು ವಿರುದ್ಧ ಠಾಣೆ ಮೋರೆ ಹೋದ ಪಿಸಿ ಶೇಖರ್
  • ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಟನೆಯ ‘ಲವ್ ಬರ್ಡ್ಸ್’ ಸಿನಿಮಾ
Director P.C. Shekhar: ‘ಲವ್​ ಬರ್ಡ್ಸ್​’ ಚಿತ್ರತಂಡದ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ಪಿ.ಸಿ. ಶೇಖರ್ ​! title=

ಬೆಂಗಳೂರು: ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಟನೆಯ ‘ಲವ್ ಬರ್ಡ್ಸ್’ ಸಿನಿಮಾ ಬಾರಿ ಮೆಚ್ಚುಗೆ ಗಳಿಸಿತ್ತು. ಇದೀಗ ಈ ಸಿನಿಮಾದ ನಿರ್ದೇಶಕ ಪಿಸಿ ಶೇಖರ್ ‘ಕಡ್ಡಿಪುಡಿ’ ಚಂದ್ರು ವಿರುದ್ಧ ಹಣಕಾಸಿನ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಈ ಸಿನಿಮಾಕ್ಕಾಗಿ ಪಿಸಿ ಶೇಕರ್‌ ಹಾಗೂ ನಿರ್ಮಾಪಕ ಕಡ್ಡಿಪುಡಿ ಚಂದ್ರು ನಡುವೆ  20 ಲಕ್ಷ ರೂಪಾಯಿಗೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತಂತೆ. ಅಗ್ರಿಮೆಂಟ್‌ಗೆ ತಕ್ಕಂತೆ ಪಿಸಿ ಶೇಖರ್ ಕೆಲಸ ಮಾಡಿದ್ದಾರೆ. ಆದರೆ  ಸಿನಿಮಾ ಎಡಿಟಿಂಗ್ ಸಲುವಾಗಿ ನೀರಿಕ್ಷೆ ಮೀರಿ ಐದು ಲಕ್ಷ ರೂಪಾಯಿ ಹೆಚ್ಚುವರಿ ಖರ್ಚು ಆಗಿತ್ತು.

ಇದನ್ನೂ ಓದಿ: Vivek Agnihotri - Aishwarya Rai: ‘ಕಾನ್​ ಅಂದ್ರೆ ಚಿತ್ರೋತ್ಸವವೇ ಹೊರತು ಫ್ಯಾಷನ್​ ಶೋ ಅಲ್ಲ-​ ವಿವೇಕ್​ ಅಗ್ನಿಹೋತ್ರಿ ಟೀಕೆ

ಸಿನಿಮಾ ಸಲುವಾಗಿ  25 ಲಕ್ಷ ರೂಪಾಯಿ ಹಣವನ್ನು ಕಡ್ಡಿಪುಡಿ ಚಂದ್ರು, ನಿರ್ದೇಶಕ ಪಿಸಿ ಶೇಖರ್ ಅವರಿಗೆ  ನೀಡಬೇಕಿತ್ತು.  ಆದರೆ ಈಗ ಬಂದ ಮಾಹಿತಿ ಪ್ರಕಾರ ಕಡ್ಡಿಪುಡಿ ಚಂದ್ರು,  ಶೇಖರ್ ಗೆ  6.5 ಲಕ್ಷ ರೂಪಾಯಿ ಮಾತ್ರ ನೀಡಿದ್ದಾರೆ. ಉಳಿದ ಹಣವನ್ನು ಕೇಳಿದರೇ ಕೆಟ್ಟ ಪದಗಳಿಂದ ನಿಂದಿಸಿದ್ದಾರೆಂದು  ಪಿಸಿ. ಶೇಖರ್ ದೂರು ನೀಡಿದ್ದಾರೆ.

ಅದಲ್ಲದೇ ತಮ್ಮಿಂದ ಕ್ಲಿಯರೆನ್ಸ್ ಪಡೆದಿರುವುದಾಗಿ ಚಂದ್ರು ನಕಲಿ ಸಹಿ ಮಾಡಿದ್ದಾರೆ ಎಂದು ನಿರ್ದೇಶಕ ಪಿಸಿ ಶೇಖರ್ ಆರೋಪ ಮಾಡಿದ್ದಾರೆ. ದೂರಿನಲ್ಲಿ ಹದಿನೆಂಟೂವರೆ ಲಕ್ಷ ರೂಪಾಯಿ ಹಣ ಕೊಟ್ಟಿಲ್ಲ.

ಇದನ್ನೂ ಓದಿ: Rakshit Shetty: ಟೊವಿನೋ ಥಾಮಸ್ ʼARMʼ ಟೀಸರ್ ರಿಲೀಸ್ ಮಾಡಿದ  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 

ನಕಲಿ ಸಹಿ ಮಾಡಿ ನನಗೆ ಕೊಡಬೇಕಿದ್ದ ಹಣ ನೀಡಿಲ್ಲ. ನನ್ನ ಬಗ್ಗೆಯೇ ಕೆಟ್ಟದಾಗಿ ಚಿತ್ರರಂಗದಲ್ಲಿ ಮಾತನಾಡಿದ್ದಾರೆ. ಹಲವಾರು ನಿರ್ಮಾಪಕರ ಬಳಿ ಸಿನಿಮಾದಲ್ಲಿ ಅವಕಾಶ ನೀಡದಂತೆ ಬೆದರಿಸಿದ್ದಾರೆ ಎಂದು ಪಿ.ಸಿ. ಶೇಖರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News