Singer Rakshita Suresh : ರಸ್ತೆ ಅಪಘಾತಕ್ಕೀಡಾದ ಪೊನ್ನಿಯನ್‌ ಸೆಲ್ವನ್‌ ಸಿಂಗರ್‌ ರಕ್ಷಿತಾ..! ಆ 10 ಸೆಕೆಂಡ್‌...

Singer rakshita suresh : ಪೊನ್ನಿಯನ್‌ ಸೆಲ್ವನ್‌ ಗಾಯಕಿ ರಕ್ಷಿತಾ ಸುರೇಶ್‌ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಬಿದ್ದು, ಭಾರಿ ಅಪಘಾತ ಸಂಭವಿಸಿದೆ. ಮಲೇಷ್ಯಾದಿಂದ ಹೊರಡಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಜರುಗಿದೆ.

Written by - Krishna N K | Last Updated : May 7, 2023, 09:20 PM IST
  • ಪೊನ್ನಿಯನ್‌ ಸೆಲ್ವನ್‌ ಗಾಯಕಿ ಕಾರು ಅಪಘಾತ.
  • ಡಿವೈಡರ್‌ಗೆ ಡಿಕ್ಕಿ ಹೊಡೆದ ಗಾಯಕಿ ರಕ್ಷಿತಾ ಸುರೇಶ್‌ ಪ್ರಯಾಣಿಸುತ್ತಿದ್ದ ಕಾರು.
  • ಮಲೇಷ್ಯಾದಿಂದ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
Singer Rakshita Suresh : ರಸ್ತೆ ಅಪಘಾತಕ್ಕೀಡಾದ ಪೊನ್ನಿಯನ್‌ ಸೆಲ್ವನ್‌ ಸಿಂಗರ್‌ ರಕ್ಷಿತಾ..! ಆ 10 ಸೆಕೆಂಡ್‌... title=

Singer rakshita suresh accident : ಖ್ಯಾತ ಗಾಯಕಿ ರಕ್ಷಿತಾ ಸುರೇಶ್‌ ಅವರು ರಸ್ತೆ ಅಪಘಾತಕ್ಕೀಡಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನು ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಕ್ಷಿತಾ ಸುರೇಶ್ 2015 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು ಮತ್ತು ಪ್ರಸ್ತುತ ಇಂಡಿಯನ್‌ ಟಾಪ್ ಸಿಂಗರ್‌ಗಳಲ್ಲಿ ಅವರು ಒಬ್ಬರು. ಇತ್ತೀಚೆಗೆ, ಅವರು ಪೊನ್ನಿಯನ್ ಸೆಲ್ವನ್ 2 ಚಿತ್ರಕ್ಕಾಗಿ ಹಾಡು ಹಾಡಿದ್ದರು. ಸದ್ಯ ರಕ್ಷಿತಾ ರಸ್ತೆ ಅಪಘಾತಕ್ಕೆ ಒಳಗಾದ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ರಕ್ಷಿತಾ ಅವರು ಸ್ಟೆಟಸ್‌ ಹಾಕಿಮಾಹಿತಿ ನೀಡಿದ್ದಾರೆ. ಅವರೇ ಹೇಳಿಕೆ ನೀಡಿರುವಂತೆ, ಅವರು ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಬಿದ್ದು, ಭಾರಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ. ಮಲೇಷ್ಯಾದಿಂದ ಹೊರಡಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಆ 10 ಸೆಕೆಂಡ್‌ಗಳಲ್ಲಿ ಇಡೀ ಜೀವನ ನನ್ನ ಕಣ್ಣೆದುರು ಬಂತು ಅಂತ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹೇಗಿದೆ ನೋಡಿ ಕಾಂತಾರ ನಾಯಕನ ಫ್ಯಾಮಿಲಿ ಪೋಟೋ ಶೂಟ್‌..!

ಕಾರಿನ ಏರ್ ಬ್ಯಾಗ್‌ಗಳಿಗೆ ಸಿಂಗರ್‌ ಧನ್ಯವಾದ ಅರ್ಪಿಸಿದ್ದಾರೆ. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು ಎಂದು ತಿಳಿಸಿದ್ದಾರೆ. ಒಂದು ಕ್ಷಣ ಏನಾಯಿತು ಎಂದು ನೆನಪಿಸಿಕೊಂಡಾಗ ಇನ್ನೂ ಮೈ ನಡುಗುತ್ತಿದೆ. ಆದರೆ, ಚಾಲಕ ಹಾಗೂ ಇತರೆ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಎಲ್ಲರೂ ಸುರಕ್ಷಿತವಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

ಅವರ ಪೋಸ್ಟ್‌ಗೆ ಸಂಗೀತ ಲೋಕದ ಸೆಲೆಬ್ರಿಟಿಗಳೆಲ್ಲಾ ಪ್ರತಿಕ್ರಿಯಿಸುತ್ತಿದ್ದಾರೆ. ತೆಲುಗು ಖ್ಯಾತ ಗಾಯಕಿ ಗೀತಾ ಮಾಧುರಿ ಕಾಮೆಂಟ್ ಮಾಡಿ, ನೀವು ಶೀಘ್ರವಾಗಿ ಚೇತರಿಸಿಕೊಂಡಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು ಎಂದಿದ್ದಾರೆ. ಪೊನ್ನಿಯನ್ ಸೆಲ್ವನ್ ಚಿತ್ರದ ಎರಡನೇ ಭಾಗದ ತಮಿಳು ಸಾಂಗ್‌ಗೆ ರಕ್ಷಿತಾ ಸುರೇಶ್ ಧ್ವನಿ ನೀಡಿದ್ದರು. ಅಲ್ಲದೆ, ತೆಲುಗಿನಲ್ಲೂ ಅನೇಕ ಹಾಡುಗಳನ್ನು ಹಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News