close

News WrapGet Handpicked Stories from our editors directly to your mailbox

ಅನುಷ್ಕಾ ಶೆಟ್ಟಿ ಜೊತೆಗಿನ ಪ್ರೇಮ ಕಹಾನಿ ಬಗ್ಗೆ 'ಬಾಹುಬಲಿ' ಏನಂತಾರೆ ?

ಸಾಹೋ ಚಿತ್ರದ ಬಿಡುಗಡೆ ಕಾಯುತ್ತಿರುವ ಬಾಹುಬಲಿ ಪ್ರಭಾಸ್, ನಟಿ ಅನುಷ್ಕಾ ಶೆಟ್ಟಿ ಅವರೊಂದಿಗೆ ಮದುವೆ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

Updated: Aug 18, 2019 , 07:13 PM IST
ಅನುಷ್ಕಾ ಶೆಟ್ಟಿ ಜೊತೆಗಿನ ಪ್ರೇಮ ಕಹಾನಿ ಬಗ್ಗೆ 'ಬಾಹುಬಲಿ' ಏನಂತಾರೆ ?
file photo

ನವದೆಹಲಿ: ಸಾಹೋ ಚಿತ್ರದ ಬಿಡುಗಡೆ ಕಾಯುತ್ತಿರುವ ಬಾಹುಬಲಿ ಪ್ರಭಾಸ್, ನಟಿ ಅನುಷ್ಕಾ ಶೆಟ್ಟಿ ಅವರೊಂದಿಗೆ ಮದುವೆ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

ತಮಿಳು ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಭಾಸ್ ಅವರು ಪ್ರತಿಕ್ರಿಯಿಸಿ ,ಅದಾಗೆ ಅದು ಆಗುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗೆ, ಪ್ರಭಾಸ್ ಮತ್ತು ಅನುಷ್ಕಾ ಲಾಸ್ ಏಂಜಲೀಸ್ನಲ್ಲಿ ಮನೆಗಾಗಿ ಹುಡುಕಾಟ ನಡೆಸಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದಾಗ್ಯೂ, ಪ್ರಭಾಸ್ ನಟಿ ಅನುಷ್ಕಾ ಅವರೊಂದಿಗಿನ ಸಂಪರ್ಕದ ಬಗ್ಗೆ ಯಾವುದೇ ಸುದ್ದಿಯನ್ನು ನಿರಾಕರಿಸಿಲ್ಲ ಎನ್ನಲಾಗಿದೆ.

ಈ ಹಿಂದೆ ಮುಂಬೈ ಮಿರರ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಭಾಸ್ ಅನುಷ್ಕಾ ಅವರೊಂದಿಗೆ ಡೇಟಿಂಗ್ ಮಾಡುವ ಬಗ್ಗೆ ಮಾತನಾಡಿದ್ದರು, 'ಅನುಷ್ಕಾ ಮತ್ತು ನಾನು ತುಂಬಾ ಒಳ್ಳೆಯ ಸ್ನೇಹಿತರು ಆದರೆ ಇನ್ನೇನಾದರೂ ಇದ್ದರೆ, ಕಳೆದ ಎರಡು ವರ್ಷಗಳಲ್ಲಿ ಯಾರಾದರೂ ನಮ್ಮನ್ನು ಒಟ್ಟಿಗೆ ಗುರುತಿಸುತ್ತಿರಲಿಲ್ಲವೇ? ಕರಣ್ ಜೋಹರ್ ಅವರ ಕಾರ್ಯಕ್ರಮದಲ್ಲೂ ಈ ಪ್ರಶ್ನೆ ನನಗೆ ಎದುರಾಗಿದೆ. ನಾನು ರಾಜಮೌಳಿ ಮತ್ತು ರಾಣಾ ಅವರಿಗೆ ಉತ್ತರಿಸಲು ಅವಕಾಶ ಮಾಡಿಕೊಟ್ಟೆ, ನಮ್ಮ ನಡುವೆ ಏನೂ ಇಲ್ಲ' ಎಂದು ಹೇಳಿದ್ದರು.

ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಸಾಹೋ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಎಂಬ ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಜಾಕಿ ಶ್ರಾಫ್, ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಚಂಕಿ ಪಾಂಡೆ, ಮಹೇಶ್ ಮಂಜ್ರೇಕರ್, ಅರುಣ್ ವಿಜಯ್, ಮುರಳಿ ಶರ್ಮಾ ಮುಂತಾದವರು ಸೇರಿದ್ದಾರೆ. ಆಗಸ್ಟ್ 30 ರಂದು ಈ ಚಿತ್ರ ತೆರೆಗೆ ಬರಲಿದೆ ಎನ್ನಲಾಗಿದೆ.