ʼಕಲ್ಕಿ 2898 ADʼಗೆ 5ನೇ ಸೂಪರ್ ಸ್ಟಾರ್ ಎಂಟ್ರಿ..! ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿ ಲುಕ್‌ ಔಟ್‌

Kalki 2898 AD Movie : ‘ಪ್ಯಾನ್‍ ಇಂಡಿಯಾ ಸೂಪರ್‍ ಸ್ಟಾರ್‍’ ಪ್ರಭಾಸ್‍ ಅಭಿನಯದ ‘ಕಲ್ಕಿ 2898 AD’ ಬಿಡುಗಡೆಗೆ ಇನ್ನು ಕೇವಲ ಎರಡು ತಿಂಗಳಷ್ಟೇ ಬಾಕಿ ಇದೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಮತ್ತು ಕುತೂಹಲವಿದೆ. ಈಗ ಚಿತ್ರದ ಐದನೇ ಸೂಪರ್‍ ಸ್ಟಾರ್ ಅನ್ನು ಇದೇ ಮೇ 22ರಂದು ಅನಾವರಣಗೊಳಿಸುವುದಾಗಿ ಚಿತ್ರತಂಡ ಘೋಷಿಸಿದ್ದು, ಆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ.

Written by - Krishna N K | Last Updated : May 19, 2024, 06:04 PM IST
    • ಪ್ರಭಾಸ್‍ ಅಭಿನಯದ ‘ಕಲ್ಕಿ 2898 AD’ ಬಿಡುಗಡೆಗೆ ಇನ್ನು ಕೇವಲ ಎರಡು ತಿಂಗಳಷ್ಟೇ ಬಾಕಿ ಇದೆ.
    • ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಮತ್ತು ಕುತೂಹಲವಿದೆ.
    • ಐದನೇ ಸೂಪರ್‍ ಸ್ಟಾರ್ ಅನ್ನು ಇದೇ ಮೇ 22ರಂದು ಅನಾವರಣಗೊಳಿಸಿದೆ.
ʼಕಲ್ಕಿ 2898 ADʼಗೆ 5ನೇ ಸೂಪರ್ ಸ್ಟಾರ್ ಎಂಟ್ರಿ..! ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿ ಲುಕ್‌ ಔಟ್‌ title=

Prabhas Kalki 2898 AD : ಸಲಾರ್‌ 2ದಲ್ಲಿರುವ ಐದನೇ ಸೂಪರ್‍ ಸ್ಟಾರ್‍ ಯಾರು? ಈ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಹೆಸರು ಬುಜ್ಜಿ ಮತ್ತು ಈತ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯನಂತೆ. ಈ ಗೆಳೆಯನ ಕುರಿತು ಯೂಟ್ಯೂಬ್‍ನ ವೈಜಯಂತಿ ನೆಟ್‍ವರ್ಕ್ ಚಾನಲ್‍ನಲ್ಲಿ ಹೊಸ ವೀಡಿಯೋ ಬಿಡುಗಡೆ ಮಾಡಲಾಗಿದೆ.

‘From Skratch: Building A Superstar’ ಹೆಸರಿನ ಈ ವೀಡಿಯೋದಲ್ಲಿ ಬುಜ್ಜಿಯ ಕುರಿತು ಪರಿಚಯ ಮಾಡಿಕೊಡಲಾಗಿದೆ. 2020ರ ಜೂನ್‍ನಲ್ಲಿ ಅಂಥದ್ದೊಂದು ಪಾತ್ರದ ಸೃಷ್ಠಿ ಹೇಗಾಯಿತು ಎಂದು ಪ್ರಾರಂಭವಾಗುವುದರಿಂದ, ಅಂತಿಮವಾಗಿ ಅದು ಹೇಗೆ ರೂಪುಗೊಂಡಿತು ಎಂಬುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ:ಸಲಾರ್ 2 ಗೆ ಹೊಸ ವಿಲನ್ ಎಂಟ್ರಿ..! ಮತ್ತೊಬ್ಬ ಪ್ಯಾನ್ ಇಂಡಿಯನ್ ನಟನೊಂದಿಗೆ ಪ್ರಭಾಸ್..

ಭೈರವನ ಅಚ್ಚುಮೆಚ್ಚಿನ ಗೆಳೆಯನ ಕುರಿತು ಸಾಕಷ್ಟು ಬಿಲ್ಡಪ್‍ ನೀಡಲಾಗಿದ್ದು, ಈ ಐದನೇ ಸೂಪರ್‍ ಸ್ಟಾರ್‍ ಯಾರಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ. ಬುಜ್ಜಿ ಯಾರು ಎಂಬ ಪ್ರಶ್ನೆಗೆ, ಎರಡು ನಿಮಿಷ 22 ಸೆಕೆಂಡ್‍ನ ಈ ವೀಡಿಯೋದಲ್ಲಿ ಚಿತ್ರಕ್ಕೆ ದುಡಿದ ಹಲವು ತಂತ್ರಜ್ಞರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಇಷ್ಟಕ್ಕೂ ಬುಜ್ಜಿ ಯಾರು? ಉತ್ತರಕ್ಕಾಗಿ ಮೇ 22ರವರೆಗೂ ಕಾಯಬೇಕು.

ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‍ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್‍ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್‍ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲೀಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಇದನ್ನೂ ಓದಿ:ಹಾಸಿಗೆಯ ಮೇಲೆ ಬೆಳದಿಂಗಳ ಬಾಲೆ..! ʼಖುಷಿʼ ಫೊಟೋಸ್‌ ನೋಡಿ

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‍ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News