ಸಮಂತಾ ಜೊತೆ ಪ್ರಭಾಸ್ ಒಂದೇ ಒಂದು ಸಿನಿಮಾ ಕೂಡ ಮಾಡದಿರಲು ಇದೇ ರಿಯಲ್‌ ಕಾರಣ!

ಪ್ರಭಾಸ್ ಇದುವರೆಗೂ ಸಮಂತಾ ರುತ್ ಪ್ರಭು ಮಾತ್ರ ಜೊತೆ ಒಂದೂ ಸಿನಿಮಾ ಕೂಡ ಮಾಡಿಲ್ಲ.    

Written by - Chetana Devarmani | Last Updated : Oct 24, 2024, 12:11 PM IST
  • ಪ್ಯಾನ್ ಇಂಡಿಯನ್ ಸ್ಟಾರ್ ಪ್ರಭಾಸ್
  • ಸಮಂತಾ ಜೊತೆ ಪ್ರಭಾಸ್ ನಟಿಸದರಿಲು ಕಾರಣ
  • ಸೌತ್‌ ಸ್ಟಾರ್‌ಹೀರೋಯಿನ್‌ ಸಮಂತಾ ರುತ್ ಪ್ರಭು
ಸಮಂತಾ ಜೊತೆ ಪ್ರಭಾಸ್ ಒಂದೇ ಒಂದು ಸಿನಿಮಾ ಕೂಡ ಮಾಡದಿರಲು ಇದೇ ರಿಯಲ್‌ ಕಾರಣ!

ಪ್ಯಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ಭಾರತೀಯ ಚಲನಚಿತ್ರರಂಗದ ಹಲವಾರು ಸ್ಟಾರ್‌ ನಟಿಯರೊಂದಿಗೆ ಕೆಲಸ ಮಾಡಿದ್ದಾರೆ. ಅನುಷ್ಕಾ ಶೆಟ್ಟಿ, ನಯನತಾರಾ, ಶ್ರದ್ಧಾ ಅಥವಾ ಶ್ರುತಿ ಹಾಸನ್, ತಮನ್ನಾ ಭಾಟಿಯಾ ಹೀಗೆ ಬಹುತೇಕ ಎಲ್ಲ ಸ್ಟಾರ್‌ ನಟಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ, ಪ್ರಭಾಸ್ ಇದುವರೆಗೂ ಸಮಂತಾ ರುತ್ ಪ್ರಭು ಮಾತ್ರ ಜೊತೆ ಒಂದೂ ಸಿನಿಮಾ ಕೂಡ ಮಾಡಿಲ್ಲ.  

Add Zee News as a Preferred Source

ವರದಿಗಳ ಪ್ರಕಾರ, ಸಮಂತಾ ಒಟ್ಟಿಗೆ ಕೆಲಸ ಮಾಡದ ಕಾರಣದ ಕುರಿತು ಪ್ರಭಾಸ್ ಒಮ್ಮೆ ಮಾತನಾಡಿದ್ದರು. ಸಮಂತಾ ಕೂಡ ತೆಲಗು ಸ್ಟಾರ್‌ ನಟಿ. ಇವರಿಗೂ ಕೂಡ ಉತ್ತಮ ಫ್ಯಾನ್‌ ಬೇಸ್‌ ಇದೆ. ಪ್ರಭಾಸ್‌ ಜೊತೆ ಸಮಂತಾರನ್ನು ನೋಡಬೇಕೆಂಬುದು ಅಭಿಮಾನಿಗಳ ಒತ್ತಾಯವಾಗಿದ್ದು, ಇಬ್ಬರೂ ಇದುವರೆಗೆ ಒಂದು ಸಿನಿಮಾದಲ್ಲಿಯೂ ಸ್ಕ್ರೀನ್‌ ಶೇರ್‌ ಮಾಡಿಲ್ಲ. 

ಇದನ್ನೂ ಓದಿ: ಬಿಗ್ ಬಾಸ್‌ ಮನೆಗೆ ರಾಧಾ ಹಿರೇಗೌಡರ್ ಗ್ರ್ಯಾಂಡ್‌ ಎಂಟ್ರಿ.. ಸ್ಪರ್ಧಿನಾ? ಗೆಸ್ಟಾ!

ಸಮಂತಾ ಜೊತೆ ಪ್ರಭಾಸ್‌ ನಟಿಸದಿರಲು ಪ್ರಮುಖ ಕಾರಣ ಎತ್ತರ. ಪ್ರಭಾಸ್ ಆರು ಅಡಿ ಎತ್ತರವಾಗಿದ್ದಾರೆ. ಸಮಂತಾ 5.2 ಅಡಿ ಎತ್ತರವಿದ್ದಾರೆ. ಇಬ್ಬರ ಎತ್ತರದಲ್ಲಿ ಬಹು ದೊಡ್ಡ ವ್ಯತ್ಯಾಸ ಗೋಚರಿಸುತ್ತದೆ. ಈ ಕಾರಣದಿಂದಲೆ ಸಮಂತಾ ಜೊತೆ ಪ್ರಭಾಸ್‌ ನಟಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು, 

2018 ರಲ್ಲಿ ಬಿಡುಗಡೆಯಾದ ಬಹುಭಾಷಾ ಚಿತ್ರ ಸಾಹೋಗೆ ಸಮಂತಾ ರುತ್ ಪ್ರಭು ಪ್ರಭಾಸ್‌ ನಾಯಕಿ ಆಗಬಹುದೆಂದು ಸೇರುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗಿತ್ತು. ಆದರೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಈ ಪಾತ್ರ ಮಾಡಿದರು. 

ಸಮಂತಾ ರುತ್ ಪ್ರಭು ಮತ್ತು ಪ್ರಭಾಸ್ ಅವರ ಅಭಿಮಾನಿಗಳು ಇಬ್ಬರನ್ನೂ ಒಟ್ಟಿಗೆ ತೆರೆಯ ಮೇಲೆ ನೋಡುವ ಬಯಕೆಯನ್ನು ಅನೇಕ ಬಾರಿ ವ್ಯಕ್ತಪಡಿಸಿದ್ದಾರೆ. ಸಮಂತಾ ರುತ್ ಪ್ರಭು ಮತ್ತು ರೆಬೆಲ್ ಸ್ಟಾರ್ ಮುಂದಾದರೂ ಒಟ್ಟಿಗೆ ಸಿನಿಮಾ ಮಾಡಬಹುದೇ ಕಾದು ನೋಡಬೇಕಿದೆ. 

ಇದನ್ನೂ ಓದಿ:KGF ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಸಹೋದರಿ ಯಾರು ಗೊತ್ತೇ? ಅವರು ಬೇರಾರೂ ಅಲ್ಲ ಕನ್ನಡದ ಸ್ಟಾರ್‌ ನಟನ ಪತ್ನಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News