ಪ್ರಭಾಸ್ ಅನುಷ್ಕಾ ಮದುವೆಗೆ ಕುಟುಂಬದವರ ಸಮ್ಮತಿ!! ಡೇಟ್‌ ಕೂಡ ಫಿಕ್ಸ್? ‌

Prabhas to marry Anushka Shetty: ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಮದುವೆ ವದಂತಿಗಳು ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಇಬ್ಬರ ಮದುವೆಗೆ ಕುಟುಂಬದವರು ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ.    

Written by - Chetana Devarmani | Last Updated : Nov 2, 2023, 09:27 AM IST
  • ಮೋಸ್ಟ್‌ ಎಲಿಜೆಬಲ್‌ ಬ್ಯಾಚುಲರ್‌ ಪ್ರಭಾಸ್
  • ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಮದುವೆ
  • ಪ್ರಭಾಸ್ ಅನುಷ್ಕಾ ಮದುವೆಗೆ ಕುಟುಂಬದವರ ಒಪ್ಪಿಗೆ?
ಪ್ರಭಾಸ್ ಅನುಷ್ಕಾ ಮದುವೆಗೆ ಕುಟುಂಬದವರ ಸಮ್ಮತಿ!! ಡೇಟ್‌ ಕೂಡ ಫಿಕ್ಸ್? ‌  title=
Prabhas Anushka Shetty

Prabhas Anushka Shetty Marriage : ಪ್ರಭಾಸ್ ಸದ್ಯ ಮೋಸ್ಟ್‌ ಎಲಿಜೆಬಲ್‌ ಬ್ಯಾಚುಲರ್‌ಗಳಲ್ಲಿ ಒಬ್ಬರು. ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬವು ಸದಾ ಅವರ ಮದುವೆ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ಪ್ರಭಾಸ್ ಅವರ ಬಾಹುಬಲಿ ಸಹ-ನಟಿ ಅನುಷ್ಕಾ ಶೆಟ್ಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿಗಳಿವೆ. ರಾಜಮೌಳಿ ಅವರ ಬಾಹುಬಲಿ ಸಿನಿಮಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ ಅವರ ಸಂಬಂಧದ ವದಂತಿಗಳು ಮುನ್ನೆಲೆಗೆ ಬಂದವು. 

ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ಮದುವೆಯ ವಿಚಾರ ಸದಾ ಚರ್ಚೆಯಲ್ಲಿರುತ್ತದೆ. ಇದೀಗ ಪ್ರಭಾಸ್ ಮತ್ತು ಅನುಷ್ಕಾ ಅವರ ಕುಟುಂಬಗಳು ಸಹ ಇದಕ್ಕೆ ಸಮ್ಮತಿ ನೀಡಿವೆ ಎನ್ನಲಾಗಿದೆ. ಪ್ರಭಾಸ್‌ ಜೊತೆ ಅನುಷ್ಕಾ ಮದುವೆಗೆ ಎರಡೂ ಕುಟುಂಬಗಳು ಸಹಮತ ಸೂಚಿಸಿವೆ ಎಂದು ಹೇಳಲಾಗ್ತಿದೆ. ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ : ದೇವರ ಲುಕ್‌ನಲ್ಲಿ ಶ್ರೀದೇವಿಯನ್ನು ನೆನಪಿಸಿದ ಜಾನ್ವಿ ಕಪೂರ್ 

ವರದಿಗಳ ಪ್ರಕಾರ, ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರ ಕುಟುಂಬಗಳು ತಮ್ಮ ಮಕ್ಕಳ ತಮ್ಮ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಅವರ ಸಂಬಂಧವನ್ನು ಇನ್ನಷ್ಟು ಗಾಢವಾಗಿಸಲು ಬಯಸುತ್ತಾರೆ ಎನ್ನಲಾಗಿದೆ. ಆದರೆ ಅನುಷ್ಕಾ ಮತ್ತು ಪ್ರಭಾಸ್ ಇಬ್ಬರೂ ಸದ್ಯ ಮದುವೆ ಸಿದ್ಧವಿಲ್ಲ ಎನ್ನಲಾಗಿದೆ. ಅವರು ಕೇವಲ ಸ್ನೇಹಿತರಾಗಿ ಸಂತೋಷವಾಗಿದ್ದಾರೆ ಎಂದು ಮತ್ತೆ ಕೆಲವು ವರದಗಳು ಹೇಳುತ್ತಿವೆ. 

ಪ್ರಸ್ತುತ ಪ್ರಭಾಸ್ ಅವರು ಅನುಷ್ಕಾ ಜೊತೆ ಡೇಟಿಂಗ್ ಮಾಡುತ್ತಿಲ್ಲ. ಅವರು ತುಂಬಾ ಆತ್ಮೀಯ ಸ್ನೇಹಿತರು ಮತ್ತು ಅವರ ಕುಟುಂಬ ಸದಸ್ಯರು ಅದನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತಿದ್ದಾರೆ. ಆದರೆ ಅವರು ಸದ್ಯಕ್ಕೆ ಮದುವೆಗೆ ಸಿದ್ಧರಿಲ್ಲ. ಅದಕ್ಕಾಗಿ ಅವರು ಈ ಕ್ಷಣದಲ್ಲಿ ಆಪ್ತ ಸ್ನೇಹಿತರಾಗಿದ್ದಾರೆ ಮತ್ತು ಅದು ನಂತರ ಪ್ರೀತಿಯಾಗಿ ಬೆಳೆಯುತ್ತದೆಯೇ ಎಂದು ನಮಗೆ ಖಚಿತವಾಗಿಲ್ಲ ಎಂದು ಕೆಲವು ಮೂಲಗಳು ಹೇಳಿವೆ ಎಂದು ವರದಿಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : Tyler Christopher: ಖ್ಯಾತ ಹಾಲಿವುಡ್‌ ನಟ ಟೈಲರ್ ಕ್ರಿಸ್ಟೋಫರ್ ನಿಧನ 

ಪ್ರಭಾಸ್ ಇತ್ತೀಚೆಗಷ್ಟೇ ಆದಿಪುರುಷ ಸಹನಟಿ ಕೃತಿ ಸನೋನ್ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ನಂತರ ನಟಿ ಅದನ್ನು ನಿರಾಕರಿಸಿದರು. ಇದು ಆಧಾರರಹಿತ ಊಹಾಪೋಹ ಎಂದು ಕರೆದರು. ಅನುಷ್ಕಾ ಮತ್ತು ಪ್ರಭಾಸ್ ಮದುವೆಯ ಕನಸನ್ನು ಅವರ ಅಭಿಮಾನಿಗಳು ಸಹ ಕಾಣುತ್ತಿದ್ದಾರೆ. ಅದೊಂದು ವೇಳೆ ಎಲ್ಲವೂ ಅಂದುಕೊಂಡಂತಾದರೆ, ಪ್ರಭಾಸ್‌ ಅಜ್ಜಿ ಹೇಳಿದಂತೆ ಮುಂದಿನ ದಸರಾ ಹಬ್ಬದೊಳಗೆ ಅನುಷ್ಕಾ ಜೊತೆ ಸಪ್ತಪದಿ ತುಳಿಯುವರಾ ಕಾದುನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News