ಬೆಂಗಳೂರು: ರಾಜಕೀಯ, ಮತದಾನ.. ಒಂದು ರೀತಿಯಲ್ಲಿ ಫುಲ್ ಬಿಸಿನೆಸ್ ಆಗಿಬಿಟ್ಟಿದೆ. ಮತದಾನ ಎಷ್ಟು ಮಹತ್ವ ಅನ್ನೋದನ್ನು ನಾವೆಲ್ಲರೂ ಮರೆತಿದ್ದೇವೆ. ಆ ಮಹತ್ವ ಸಾರೋದಕ್ಕೆ ಇದೀಗ ‘ಪ್ರಭುತ್ವ’ ಅನ್ನೋ ಅದ್ಭುತ ಸಂದೇಶ ಇರೋ ಸಿನಿಮಾ ನಿಮ್ಮ ಮುಂದೆ ಬರಲು ಸಿದ್ಧವಾಗಿದೆ. ಮತವನ್ನು ಹಣಕ್ಕೆ ಮಾರಿಕೊಳ್ಳಬೇಡಿ, ಹಾಗೆ ಮಾಡಿದ್ರೆ ಮನೆ ಮಗಳನ್ನು ಮಾರಿಕೊಂಡ ಹಾಗೇ ಅನ್ನೋ ಮೇಸಜ್ ಕೊಡೋ ಪ್ರಯತ್ನ ಮಾಡಿದೆ ಚಿತ್ರತಂಡ.
ಮತದಾನದ ಮಹತ್ವ ಸಾರುವ 'ಪ್ರಭುತ್ವ' ಟ್ರೈಲರ್‍ಗೆ ಸಿನಿಪ್ರಿಯರಿಂದ ಮೆಚ್ಚುಗೆಯ ಮಹಾಪೂರವೇ ಸಿಕ್ಕಿದೆ. ಚಿತ್ರದ ಮೇಕಿಂಗ್ ವಿಡಿಯೋ ನೋಡಿದ್ರೆ ನಿಜಕ್ಕೂ ನಮ್ಮ ಕನ್ನಡ ಇಂಡಸ್ಟ್ರಿ ಎಷ್ಟು ಬೆಳೆದಿದೆ ಅನ್ನ್ನೋದು ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಪ್ರೂವ್ ಆಗುತ್ತಿದೆ. ದೇಶದ ನಾಗರೀಕರಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಲೇಬೇಕು. ಆದರೂ ಕೂಡ ಪ್ರತಿಬಾರಿ ಚುನಾವಣೆ ಬಂದಾಗಲೂ ಕೂಡ ಒಂದಷ್ಟು ಮಂದಿ ಮತದಾನ ಮಾಡದೇ ತಮಗಿರುವ ಹಕ್ಕನ್ನು ಚಲಾಯಿಸಲು ಮರೆತುಬಿಡುತ್ತಾರೆ. ಯಾಕೆ ಮತದಾನ ಮಾಡಬೇಕು? ರಾಜಕಾರಣಿಗಳು ಹೇಗೆ ಇರಬೇಕು? ಅನ್ನೋದು ಈ ಸಿನಿಮಾದಿಂದ ತಿಳಿಯುತ್ತದೆ.
ಇದನ್ನೂ ಓದಿ: Rani Mukherjee: 8 ವರ್ಷ ತನ್ನ ಮಗಳನ್ನು ಗೌಪ್ಯವಾಗಿಟ್ಟಿದ್ದೇಕೆ ಈ ಖ್ಯಾತ ನಟಿ?
ಇದರಲ್ಲಿರುವ ಒಂದು ಹಾಡಿನಲ್ಲಿ ಚುನಾವಣೆ ಮತ್ತು ಮತದಾನದ ಮಹತ್ವವನ್ನು ತಿಳಿಸಲಾಗಿದೆ. ಈ ಹಾಡನ್ನು ನಿರ್ದೇಶಕ ಹರಿ ಸಂತೋಷ್ ಅವರು ಬರೆದಿದ್ದು, ಕಾರ್ತಿಕ್ ಮತ್ತು ಸುಪ್ರಿಯಾ ರಾಮ್ ಹಾಡಿದ್ದಾರೆ. ಈ ಹಾಡಿನ ಸಂಗೀತ ಸಂಯೋಜನೆ ಎಮಿಲ್ ಅವರದ್ದು. ಈ ಸಿನಿಮಾದಲ್ಲಿ ಒಟ್ಟು 4 ಹಾಡುಗಳಿವೆ. ಛಾಯಾಗ್ರಾಹಕರಾಗಿ ಕೆ.ಎಸ್.ಚಂದ್ರಶೇಖರ್ ಕೆಲಸ ಮಾಡಿದ್ದಾರೆ. ಮೇಘಡಹಳ್ಳಿ ಡಾ.ಶಿವಕುಮಾರ್ ಅರ್ಪಿಸುವ 'ಪ್ರಭುತ್ವ' ಸಿನಿಮಾವನ್ನು ರವಿರಾಜ್ ಎಸ್ ಕುಮಾರ್ ನಿರ್ಮಿಸಿದ್ದಾರೆ.
ಪ್ರೇಮಿಸಂ, ರಾಜಧಾನಿ, ಜಾತ್ರೆ, ಪ್ಲಸ್ ಮುಂತಾದ ಸಿನಿಮಾಗಳ ಮೂಲಕ ಗಮನಸೆಳೆದ ನಟ ಚೇತನ್ ಚಂದ್ರ ಅವರು ಈಗ 'ಪ್ರಭುತ್ವ' ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿ ಪಾವನಾ ಗೌಡ ಕಾಣಿಸಿಕೊಂಡಿದ್ದು, ಏಪ್ರಿಲ್ 14ಕ್ಕೆ ಈ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: #Kiccha46 : ಹೊಂಬಾಳೆ ಫಿಲಂಸ್ ಜೊತೆ ಕಿಚ್ಚನ ಮುಂದಿನ ಆಕ್ಷನ್! ಖ್ಯಾತ ಮಹಿಳಾ ನಿರ್ದೇಶಕಿಯ ಡೈರೆಕ್ಷನ್?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.