close

News WrapGet Handpicked Stories from our editors directly to your mailbox

ರೊಮ್ಯಾಂಟಿಕ್ ಸಾಂಗ್ ಹಾಡಿ ಸಿಂಗರ್ ಆದ ಪ್ರಿಯಾ ವಾರಿಯರ್! ವೀಡಿಯೊ ವೈರಲ್...

ಪಿ.ಆರ್.ಅರುಣ್ ಅವರ ಕ್ರೀಡಾ ಚಿತ್ರ 'ಫೈನಲ್ಸ್'ನ ರೊಮ್ಯಾಂಟಿಕ್ ಟ್ರ್ಯಾಕ್ 'ನೀ ಮಜವಿಲ್ಲು ಪೋಲೆ' ಹಾಡನ್ನು ನರೇಶ್ ಅಯ್ಯರ್ ಜೊತೆಗೆ ಪ್ರಿಯಾ ಪ್ರಕಾಶ್ ವಾರಿಯರ್ ಹಾಡಿದ್ದಾರೆ. 

Updated: Jun 26, 2019 , 06:23 PM IST
ರೊಮ್ಯಾಂಟಿಕ್ ಸಾಂಗ್ ಹಾಡಿ ಸಿಂಗರ್ ಆದ ಪ್ರಿಯಾ ವಾರಿಯರ್! ವೀಡಿಯೊ ವೈರಲ್...

ನವದೆಹಲಿ: ಕಣ್ಸನ್ನೆ ಬೆಡಗಿ ಎಂದೇ ಹೆಸರಾಗಿರುವ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ನಟಿಯಷ್ಟೇ ಅಲ್ಲ, ಗಾಯಕಿ ಕೂಡ ಹೌದು! ತಾವು ಹಾಡಿರುವ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು. ಇದಕ್ಕೆ ಅಭಿಮಾನಿಗಳೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ನನ್ನ ಮೊದಲ ಪ್ರಯತ್ನಕ್ಕೆ ಅದ್ಭುತವಾದ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು! ನನ್ನ ಹಾಡಿನ ಪೂರ್ಣ ವೀಡಿಯೊವನ್ನು ನೋಡಲು ನನ್ನ ಬಯೋ ಲಿಂಕ್ ಕ್ಲಿಕ್ ಮಾಡಿ" ಎಂದು ಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಪಿ.ಆರ್.ಅರುಣ್ ಅವರ ಕ್ರೀಡಾ ಚಿತ್ರ 'ಫೈನಲ್ಸ್'ನ ರೊಮ್ಯಾಂಟಿಕ್ ಟ್ರ್ಯಾಕ್ 'ನೀ ಮಜವಿಲ್ಲು ಪೋಲೆ' ಹಾಡನ್ನು ನರೇಶ್ ಅಯ್ಯರ್ ಜೊತೆಗೆ ಪ್ರಿಯಾ ಪ್ರಕಾಶ್ ವಾರಿಯರ್ ಹಾಡಿದ್ದಾರೆ. ಕೈಲಾಸ್ ಮೆನನ್ ಸಂಗೀತ ಸಂಯೋಜಿಸಿದ್ದು, ಶ್ರೀರೇಖಾ ಭಾಸ್ಕರನ್ ಸಾಹಿತ್ಯ ಬರೆದಿದ್ದಾರೆ.