ಬಚ್ಚನ್ ಕುಟುಂಬದಲ್ಲಿ ಆಸ್ತಿ ವಿವಾದ! ಅಮಿತಾಭ್ ಮೇಲೆ ಸೊಸೆ ಐಶ್ವರ್ಯಾ ರೈ ಕೋಪ?

Aishwarya Rai: ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ.. ಬಚ್ಚನ್ ಕುಟುಂಬದಲ್ಲಿ ಇದೀಗ ಆಸ್ತಿ ವಿವಾದ ಉಂಟಾಗಿದ್ದು ಅಮಿತಾಭ್ ಮೇಲೆ ಸೊಸೆ ಐಶ್ವರ್ಯಾ ರೈ ಕೋಪ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ..  

Written by - Savita M B | Last Updated : Dec 9, 2023, 12:45 PM IST
  • ಬಚ್ಚನ್ ಕುಟುಂಬದಲ್ಲಿ ಆಸ್ತಿ ವಿವಾದ
  • ಅಮಿತಾಭ್ ಮೇಲೆ ಸೊಸೆ ಐಶ್ವರ್ಯಾ ರೈ ಕೋಪ?
  • ಬಹುಶಃ ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಘರ್ಷಣೆ ಉಂಟಾಗಿರಬಹುದು ಎನ್ನಲಾಗುತ್ತಿದೆ
ಬಚ್ಚನ್ ಕುಟುಂಬದಲ್ಲಿ ಆಸ್ತಿ ವಿವಾದ! ಅಮಿತಾಭ್ ಮೇಲೆ ಸೊಸೆ ಐಶ್ವರ್ಯಾ ರೈ ಕೋಪ? title=

Aishwarya Rai-amitabh bachchan: ಇತ್ತೀಚೆಗೆ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಅವರ ಮೊದಲ ಚಿತ್ರ 'ದಿ ಆರ್ಚೀಸ್' ನ ಪ್ರಥಮ ಪ್ರದರ್ಶನದಲ್ಲಿ ಇಡೀ ಕುಟುಂಬ ಒಟ್ಟಿಗೆ ಕಾಣಿಸಿಕೊಂಡಿತ್ತು... ಆದರೆ ಇದರ ನಂತರ ಬಿಗ್ ಬಿ ಅವರ ಅಳಿಯನೊಂದಿಗೆ ಉತ್ತಮ ಸಂಭಂದ ಹೊಂದಿಲ್ಲ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ತಮ್ಮ ಬಲವಾದ ನಟನೆಯಿಂದ ಜನರ ಹೃದಯವನ್ನು ಕದ್ದಿದ್ದಾರೆ.. ಅವರ ವೃತ್ತಿಜೀವನದ ಹೊರತಾಗಿ, ಬಿಗ್ ಬಿ ಬಚ್ಚನ್ ಕುಟುಂಬದ ಒಗ್ಗಟ್ಟಿನಿಂದಾಗಿ ಪ್ರತಿದಿನ ಚರ್ಚೆಯ ವಿಷಯವಾಗುತ್ತಾರೆ. ಆದರೆ ಈಗ ಸಂಸಾರದಲ್ಲಿ ಏನೋ ಗಲಾಟೆ ನಡೆದಂತೆ ಕಾಣುತ್ತಿದ್ದು, ಇದರಿಂದ ಸೊಸೆ ಐಶ್ವರ್ಯಾ ರೈ ಬಚ್ಚನ್ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.. 

ಇದನ್ನೂ ಓದಿ-BBK 10: ಬಿಗ್‌ಬಾಸ್‌ನಲ್ಲಿ ಮಿನಿಟ್ಸ್‌ ಗೇಮ್‌ ಗೆದ್ದ ಹಳ್ಳಕಾರ್‌ : ದೊಡ್ಮನೆ ಕ್ಯಾಪ್ಟನಾದ ವರ್ತೂರ್‌ ಸಂತೋಷ್‌!

ಬಿಗ್ ಬಿ ತಮ್ಮ ಮನೆ 'ಪ್ರತೀಕ್ಷಾ'ವನ್ನು ತಮ್ಮ ಮಗಳು ಶ್ವೇತಾ ನಂದಾಗೆ ಉಡುಗೊರೆಯಾಗಿ ನೀಡಿದರು. ಬಹುಶಃ ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಘರ್ಷಣೆ ಉಂಟಾಗಿರಬಹುದು ಮತ್ತು ಇದರಿಂದ ಅಮಿತಾಬ್ ಹಾಗೂ ಐಶ್ವರ್ಯ ಅವರ ಮಧ್ಯ ವೈಮನಸ್ಯೆ ಉಂಟಾಗಿದೆ ಎಂದು ವರದಿಯಾಗಿದೆ.. 

ಇದನ್ನೂ ಓದಿ-ಕಾಮಿಡಿ ಅಂದ್ರೆ ಲೀಲಾವತಿಗೆ ಅಚ್ಚುಮೆಚ್ಚು: ಆದ್ರೇ ನಟಿಗೆ ಸಿಕ್ಕಿದೆಲ್ಲಾ ಕಣ್ಣೀರಿನ ರೋಲ್!

ಇನ್ನು ಅಮಿತಾಬ್ ಬಚ್ಚನ್ ತುಂಬಾ ಕ್ರಿಯಾಶೀಲರಾಗಿದ್ದು.. ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ 36.3 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. ಇದಲ್ಲದೆ, ಅಮಿತಾಬ್ 74 ಜನರನ್ನು ಫಾಲೋ ಮಾಡುತ್ತಿದ್ದಾರೆ.. ಈ ಪಟ್ಟಿಯಲ್ಲಿ ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ವಿರಾಟ್ ಕೊಹ್ಲಿ, ಮಗ ಅಭಿಷೇಕ್ ಬಚ್ಚನ್, ಮಗಳು ಶ್ವೇತಾ ಬಚ್ಚನ್ ನಂದಾ ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ ಮತ್ತು ಇತರರು ಇದ್ದಾರೆ. ಆದರೆ ಸೊಸೆ ಐಶ್ವರ್ಯಾ ರೈ ಬಚ್ಚನ್ ಈ ಪಟ್ಟಿಯಲ್ಲಿಲ್ಲ.

ಅಮಿತಾಭ್ ಬಚ್ಚನ್ ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ ಅನ್ನು ಫಾಲೋ ಮಾಡುತ್ತಿಲ್ಲ.. ಮತ್ತು ಐಶ್ವರ್ಯಾ ರೈ ಕೂಡ ತಮ್ಮ ಇನ್‌ಸ್ಟಾದಲ್ಲಿ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.. ಇದು ಮನೆಯಲ್ಲಿ ಉಂಟಾಗಿರುವ ಅಸಮಾಧಾನದ ಪರಿಣಾಮವಾಗಿರಬಹುದು ಅಥವಾ ಮೊದಲಿನಿಂದಲೂ ಐಶ್‌ ಯಾರನ್ನೂ ಫಾಲೋ ಮಾಡುತ್ತಿಲ್ಲವೇ ಎನ್ನುವುದು ತಿಳಿಯದ ಸಂಗತಿ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News