Abhi movie: ಅಭಿ ಸಿನಿಮಾಗೆ 20 ವರ್ಷ! ಅಪ್ಪು ನೆನೆದು ರಮ್ಯಾ ಭಾವುಕ ಪೋಸ್ಟ್

20 years for Abhi movie : ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಎರಡನೇ ಸಿನಿಮಾ ಅಭಿ ರಿಲೀಸ್‌ ಆಗಿ ಇಂದಿಗೆ ಬರೋಬ್ಬರಿ 20 ವರ್ಷ. ಈ ಚಿತ್ರದ ಮೂಲಕ ಮೋಹಕ ತಾರೆ ರಮ್ಯಾ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.   

Written by - Chetana Devarmani | Last Updated : Apr 25, 2023, 04:30 PM IST
  • ಅಭಿ ಸಿನಿಮಾ ಬಿಡುಗಡೆಯಾಗಿ ಇಂದಿಗೆ 20 ವರ್ಷ
  • ಪುನೀತ್‌ ರಾಜ್‌ಕುಮಾರ್‌ ಅಭಿನಯದ ಎರಡನೇ ಸಿನಿಮಾ
  • ರಮ್ಯಾ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಚಿತ್ರ
Abhi movie: ಅಭಿ ಸಿನಿಮಾಗೆ 20 ವರ್ಷ! ಅಪ್ಪು ನೆನೆದು ರಮ್ಯಾ ಭಾವುಕ ಪೋಸ್ಟ್ title=
ಅಭಿ ಸಿನಿಮಾ

Abhi movie : ಅಭಿ ಪುನೀತ್‌ ರಾಜ್‌ಕುಮಾರ್‌ ನಾಯಕನಾಗಿ ನಟಿಸಿದ್ದ ಎರಡನೇ ಸಿನಿಮಾ ಆಗಿದೆ. ಅಭಿ ಸಿನಿಮಾಗೆ 20 ವರ್ಷಗಳು ತುಂಬಿದ ಹಿನ್ನೆಲೆ ರಮ್ಯಾ ಎರಡು ದಶಕಗಳ ಹಿಂದಿನ ಕೆಲವು ಫೋಟೋಗಳನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ನಾಯಕ ನಟನಾಗಿ ಪುನೀತ್‌ ನಟಿಸಿದ ಮೊದಲ ಸಿನಿಮಾ ಅಪ್ಪು. ಅದರಲ್ಲಿ ರಕ್ಷಿತಾ ನಾಯಕಿಯಾಗಿದ್ದಾರೆ. ಪ್ರೇಮಕಥೆ ಜೊತೆಗೆ ಕೋಮ ಸೌಹಾರ್ದತೆಯ ಸಂದೇಶ ಹೊತ್ತು ಅಭಿ ಸಿನಿಮಾ ತೆರೆಗೆ ಬಂದಿತ್ತು. ಪಾರ್ವತಮ್ಮ ರಾಜ್‌ಕುಮಾರ್‌ ಈ ಸಿನಿಮಾ ನಿರ್ಮಿಸಿದ್ದರು. ಅಭಿ ಸಿನಿಮಾದಲ್ಲಿ ಪುನೀತ್‌ ರಾಜ್‌ ಅಭಿನಯಕ್ಕೆ ಜನ ಮನಸೋತಿದ್ದರು. 

ಮಾಮಾ ಮಾಮಾ ಮಜಾ ಮಾಡು... ಈ ನಿನ್ನ ಕಣ್ಣಾಣೆ... ವಿಧಿ ಬರಹ ಎಂತ ಘೋರ.. ಹೀಗೆ ಸಿನಿಮಾದಲ್ಲಿನ ಎಲ್ಲ ಸಾಂಗ್‌ಗಳು ಇಂದಿಗೂ ಜನರ ಹಾಟ್‌ ಫೆವರೇಟ್‌ ಆಗಿವೆ. ಕೆ. ಕಲ್ಯಾಣ್‌, ಹಂಸಲೇಖ, ವಿ ನಾಗೇಂದ್ರ ಪ್ರಸಾದ್‌ ಈ ಹಾಡುಗಳ ಸಾಹಿತ್ಯ ಬರೆದಿದ್ದರು. ಗುರುಕಿರಣ್‌ ಸಂಗೀತ ನಿರ್ದೇಶನದಲ್ಲಿ ಈ ಸಿನಿಮಾ ಮ್ಯೂಸಿಕಲ್‌ ಹಿಟ್‌ ಕೂಡ ಆಗಿತ್ತು. ಪೂರ್ಣಿಮಾ ಎಂಟರ್‌ಪ್ರೈಸಸ್‌ ಬ್ಯಾನರ್‌ ಅಡಿ ಪಾರ್ವತಮ್ಮ ರಾಜ್‌ಕುಮಾರ್‌ ನಿರ್ಮಿಸಿದ್ದ ಅಭಿ ಸಿನಿಮಾವನ್ನು ದಿನೇಶ್‌ ಬಾಬು ನಿರ್ದೇಶಿಸಿದ್ದರು. 25 ಏಪ್ರಿಲ್‌ 2003 ರಂದು ಅಭಿ ರಿಲೀಸ್‌ ಆಗಿತ್ತು. 

ಇದನ್ನೂ ಓದಿ: ಹೊಸ ಸಿನಿಮಾಗಾಗಿ ಅರೆಬೆತ್ತಲಾದ ಆರ್ ಎಕ್ಸ್‌ 100 ಚಿತ್ರದ ನಟಿ ..!

25 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಅಭಿ ಸಿನಿಮಾ ಪ್ರದರ್ಶನಗೊಂಡಿತ್ತು. ಬಾಕ್ಸ್‌ ಆಫೀಸ್‌ನಲ್ಲೂ ಉತ್ತಮ ಮೊತ್ತ ಕಲೆಹಾಕಿತ್ತು. ಇದೇ ಸಿನಿಮಾ ನಂತರ ತೆಲುಗಿನಲ್ಲಿ ಅಭಿಮನ್ಯು ಹೆಸರಿನಲ್ಲಿ ರಿಮೇಕ್‌ ಆಯಿತು. ಅಭಿಮನ್ಯುದಲ್ಲಿ ನಂದಮೂರಿ ಕಲ್ಯಾಣ್ ರಾಮ್ ನಾಯಕನಾದರೆ ನಾಯಕಿಯಾಗಿ ರಮ್ಯಾ ನಟಿಸಿದ್ದರು. 

 

 

ಇದೀಗ ಈ ಸಿನಿಮಾ ರಿಲೀಸ್‌ ಆಗಿ 20 ವರ್ಷ ಕಳೆದ ಹಿನ್ನೆಲೆ ರಮ್ಯಾ ಭಾವುಕ ಪೋಸ್ಟ್‌ ಹಚಿಕೊಂಡಿದ್ದಾರೆ. 20 ವರ್ಷಗಳ ಹಿಂದಿನ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. "ಇವು ನನ್ನ ಮೊದಲ ಸಿನಿಮಾ ಅಭಿ ರಿಲೀಸ್ ಆದ ಸಮಯದ ಫೋಟೋಗಳು. ಇವುಗಳನ್ನು ತೆಗೆದ ಕ್ಷಣಗಳ ನೆನಪು ಇಂದಿಗೂ ಹಚ್ಚ ಹಸಿರು" ಎಂದು ಬರೆದಿದ್ದಾರೆ. 

ಇದನ್ನೂ ಓದಿ: ನಟಿ ಪೂಜಾ ಹೆಗ್ಡೆಗೆ ಮಂಗಳೂರಿನ ಈ ಖಾದ್ಯ ಅಂದ್ರೆ ಪಂಚಪ್ರಾಣ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News