Preity Zinta: 6 ವರ್ಷಗಳ ನಂತರ ಮತ್ತೆ ಬಾಲಿವುಡ್‌ಗೆ ರಿ ಎಂಟ್ರಿ ಕೊಟ್ಟ ಡಿಂಪಲ್ ಗರ್ಲ್!! ಯಾವ ಸಿನಿಮಾ ಗೊತ್ತಾ?

Preity Zinta Comeback: ಒಂದು ಕಾಲದಲ್ಲಿ ಟಾಪ್‌ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಬಹುದಿನಗಳವರೆಗೆ ಚಲನಚಿತ್ರಗಳಿಂದ ದೂರವಿರದ್ದರು.. ಇದೀಗ ಡಿಂಪಲ್‌ ಗರ್ಲ್‌ ಮತ್ತೆ ಬಾಲಿವುಡ್‌ಗೆ ಕಂಬ್ಯಾಕ್‌ ಮಾಡಿದ್ದಾರೆ.. 

Written by - Savita M B | Last Updated : Apr 25, 2024, 11:29 AM IST
  • ನಟಿ ಪ್ರೀತಿ ಜಿಂಟಾ ಮದುವೆಯ ನಂತರ ಚಿತ್ರರಂಗದಿಂದ ದೂರ ಸರಿದಿದ್ದರು
  • ಪ್ರೀತಿ ಜಿಂಟಾ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ.
 Preity Zinta: 6 ವರ್ಷಗಳ ನಂತರ ಮತ್ತೆ ಬಾಲಿವುಡ್‌ಗೆ ರಿ ಎಂಟ್ರಿ ಕೊಟ್ಟ ಡಿಂಪಲ್ ಗರ್ಲ್!! ಯಾವ ಸಿನಿಮಾ ಗೊತ್ತಾ?  title=

Preity Zinta: ನಟಿ ಪ್ರೀತಿ ಜಿಂಟಾ ಮದುವೆಯ ನಂತರ ಚಿತ್ರರಂಗದಿಂದ ದೂರ ಸರಿದಿದ್ದರು.. ಆದರೆ ಅವರು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರು.. ಇದೆಲ್ಲದರ ಮಧ್ಯೆ ಶೀಘ್ರದಲ್ಲೇ ಪ್ರೀತಿ ಜಿಂಟಾ 'ಲಾಹೋರ್ 1947' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಈ ಮಾಹಿತಿಯನ್ನು ಅವರೇ ಸೋಷಿಯಲ್‌ ಮಿಡಿಯಾ ಮೂಲಕ ಅಭಿಮಾನಿಗಳಿಗೆ ನೀಡಿದ್ದಾರೆ.

ಪ್ರೀತಿ ಜಿಂಟಾ 'ಲಾಹೋರ್ 1947' ಚಿತ್ರದ ಶೂಟಿಂಗ್ ಆರಂಭಿಸಿದ್ದು.. ಚಿತ್ರದ ಸೆಟ್‌ನಲ್ಲಿರುವ ಕೆಲವು ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್‌ ವೈರಲ್‌ ಆಗುತ್ತಿದೆ.. 

ಇದನ್ನೂ ಓದಿ-Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿ

 ಹೌದು ಈ ಮೂಲಕ ಪ್ರೀತಿ ಜಿಂಟಾ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ.. ಇವರ ಜೊತೆಗೆ ನಟ ಸನ್ನಿ ಡಿಯೋಲ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ಹೊರಬಿದ್ದ ನಂತರ ಅಭಿಮಾನಿಗಳು ಮತ್ತಷ್ಟು ಸಂಭ್ರಮ ಪಟ್ಟಿದ್ದಾರೆ. 

ಇದಕ್ಕೂ ಮೊದಲು ಪ್ರೀತಿ ಮತ್ತು ಸನ್ನಿ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಸನ್ನಿ ಡಿಯೋಲ್ ಅವರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.. ಪ್ರೀತಿ ಜಿಂಟಾ ಕೊನೆಯದಾಗಿ 'ಭೈಯಾಜಿ ಸೂಪರ್‌ಹಿಟ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.. ನಟಿ ಸುಮಾರು 6 ವರ್ಷಗಳ ನಂತರ ಮತ್ತೆ ಮರಳುತ್ತಾರೆ. ಸದ್ಯಕ್ಕೆ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ-ಒಬ್ಬನ ತಪ್ಪಿಗೆ ʼಆʼ ಕೋಮಿನ ಮೇಲೆ ಅಪರಾಧ ಹೊರಿಸುವುದು ಸರಿಯಲ್ಲ..! ನಟ ಕಿಶೋರ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News