ಪುಷ್ಪಾ 2 ಡಿಜಿಟಲ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟ

Pushpa 2 Movie : ಅಲ್ಲು ಅರ್ಜುನ್ ಪುಷ್ಪ 2: ದಿ ರೂಲ್ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜನಪ್ರಿಯ OTT ಪ್ಲಾಟ್‌ಫಾರ್ಮ್ ಭಾರಿ ಬೆಲೆಗೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.  

Written by - Chetana Devarmani | Last Updated : Sep 25, 2023, 09:13 PM IST
  • ಅಲ್ಲು ಅರ್ಜುನ್ ನಟನೆಯ ಪುಷ್ಪ 2: ದಿ ರೂಲ್
  • ಡಿಜಿಟಲ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟ
  • ಜನಪ್ರಿಯ OTT ಪ್ಲಾಟ್‌ಫಾರ್ಮ್ ಗೆ ಹಕ್ಕು ಮಾರಾಟ
ಪುಷ್ಪಾ 2 ಡಿಜಿಟಲ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟ   title=

Pushpa 2 OTT Rights: ಪುಷ್ಪ 2: ದಿ ರೂಲ್ ಸಿನಿಮಾ ಪ್ರೇಮಿಗಳ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಪುಷ್ಪಾ ಚಿತ್ರದ ಮುಂದುವರಿದ ಭಾಗವಾಗಿರಲಿದೆ. ಮುಂದಿನ ವರ್ಷ ಜನವರಿ ವೇಳೆಗೆ ಪುಷ್ಪ 2 ಚಿತ್ರೀಕರಣ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅದಾದ ನಂತರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ. ಚಿತ್ರವು ಆಗಸ್ಟ್ 15, 2024 ರಂದು ಬಿಡುಗಡೆಯಾಗಲಿದೆ. 

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು, ಫಹಾದ್ ಫಾಜಿಲ್ ವಿಲನ್ ಆಗಿ ನಟಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರಕ್ಕೆ ದೇವಿ ಶ್ರೀಪ್ರಸಾದ್ ಸಂಗೀತ ನೀಡಿದ್ದಾರೆ. ಭಾಗ 1 ಶ್ರೀಗಂಧದ ಕಳ್ಳಸಾಗಣೆಯ ಬಗ್ಗೆ, ಆದರೆ ಎರಡನೇ ಭಾಗವು ಪುಷ್ಪ ಆಡಳಿತವನ್ನು ತೋರಿಸುತ್ತದೆ. ಸದ್ಯ ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ.

ಇದನ್ನೂ ಓದಿ : ಅದ್ಧೂರಿಯಾಗಿ ಸಪ್ತಪದಿ ತುಳಿದ ಪರಿಣಿತಿ- ರಾಘವ್‌ ಚಡ್ಡಾ..! ಗ್ರ್ಯಾಂಡ್‌ ಮದುವೆ ಬಜೆಟ್ ಎಷ್ಟು ಗೊತ್ತಾ..? 

ಪುಷ್ಪ 2 ಚಿತ್ರಕ್ಕೆ ಸಂಬಂಧಿಸಿದ ಒಂದು ಕುತೂಹಲಕಾರಿ ಅಪ್‌ಡೇಟ್‌ ಹರಿದಾಡುತ್ತಿದೆ. ಪುಷ್ಪ 2: ರೂಲ್ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳು ಅಂತಿಮಗೊಂಡಂತೆ ತೋರುತ್ತಿದೆ. ಈ ಚಿತ್ರದ OTT ಹಕ್ಕುಗಳನ್ನು ಜನಪ್ರಿಯ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ದಾಖಲೆ ಬೆಲೆಗೆ ಪಡೆದುಕೊಂಡಿದೆ ಎಂದು ವರದಿಯಾಗಿದೆ. 

ಥಿಯೇಟ್ರಿಕಲ್ ರನ್ ಪೂರ್ಣಗೊಂಡ ನಂತರ ನೆಟ್‌ಫ್ಲಿಕ್ಸ್ ಈ ಚಲನಚಿತ್ರವನ್ನು ತಮ್ಮ ವೇದಿಕೆಯಲ್ಲಿ ಸ್ಟ್ರೀಮ್ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಲಾಗುತ್ತಿದೆ. ಪುಷ್ಪ ಭಾಗ 1 ರ ಮೂಲಕ ಅಲ್ಲು ಅರ್ಜುನ್ ಪ್ರಪಂಚದಾದ್ಯಂತ ಪ್ರಸಿದ್ಧರಾದರು. ಅನೇಕ ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಅವರ ಮ್ಯಾನರಿಸಂ ಅನ್ನು ಅನುಕರಿಸುವ ವೀಡಿಯೊಗಳನ್ನು ಮಾಡಿದ್ದಾರೆ. ಇದರೊಂದಿಗೆ ಪುಷ್ಪ 2: ದಿ ರೂಲ್ ಚಿತ್ರದ ಬಗ್ಗೆ ಫುಲ್ ಬಝ್ ಇದೆ.

ಇದನ್ನೂ ಓದಿ : ತಮಿಳಿನ ಆ ಖ್ಯಾತ ನಟನ ವಿರುದ್ಧ ಕಿಡಿಕಾರಿದ ದರ್ಶನ್‌.. ಕಾವೇರಿ ಕಿಚ್ಚಿನ ಮಧ್ಯೆ ದಚ್ಚು ಆಕ್ರೋಶ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News