Rachitha Ram: ಹೋಳಿ ಹಬ್ಬದಂದು ಗುಡ್‌ ನ್ಯೂಸ್‌ ಕೊಟ್ಟ ಡಿಂಪಲ್‌ ಕ್ವೀನ್: ರಚಿತಾ ಹೇಳಿದ್ದೇನು?

Rachitha Ram Good News: ಚಂದನವನದ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ನಿನ್ನೆ ಹೋಳಿ ಹಬ್ಬದಂದು ತಮ್ಮ ಫ್ಯಾನ್ಸ್‌ಗೆ ಸೋಶಿಯಲ್‌ ಮಿಡಿಯಾದ ಮೂಲಕ ಗುಡ್‌ ನ್ಯೂಸ್‌ ನೀಡಿದ್ದಾರೆ. ಹಾಗಾದರೆ ಈ ನಟಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Mar 26, 2024, 11:37 AM IST
  • ರಚಿತಾ ರಾಮ್‌ ವಿಡಿಯೋದಲ್ಲಿ ಇದೇ ಮಾರ್ಚ್‌ 27 ರಂದು ಬುಧವಾರ ಸಂಜೆ 6.30 ಕ್ಕೆ ಮಂತ್ರಿ ಮಾಲ್‌ನಲ್ಲಿ ಮ್ಯಾಟ್ನಿ ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ ಎಂದು ತಿಳಿಸಿದ್ದಾರೆ.
  • ಮ್ಯಾಟ್ನಿ ಇದೊಂದು ಹಾರರ್ ಜಾನರ್‌ ಸಿನಿಮಾವಾಗಿದ್ದು, ಇದರಲ್ಲಿ ನಟಿ ಅದಿತಿ ಪ್ರಭುದೇವ ಹಾಗೂ ರಚಿತ ರಾಮ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
  • ಬಹುನಿರೀಕ್ಷಿತ ಮ್ಯಾಟ್ನಿ ಚಿತ್ರ ಇದೇ ಏಪ್ರಿಲ್-5 ರಂದು ರಾಜ್ಯಾದ್ಯಂತ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ.
Rachitha Ram: ಹೋಳಿ ಹಬ್ಬದಂದು ಗುಡ್‌ ನ್ಯೂಸ್‌ ಕೊಟ್ಟ ಡಿಂಪಲ್‌ ಕ್ವೀನ್: ರಚಿತಾ ಹೇಳಿದ್ದೇನು?  title=

Rachitha Ram Talked About Good News: ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌ ಹೋಳಿ ಹಬ್ಬದಂದು ಸಿಹಿ ಸುದ್ದಿಯೊಂದು ನೀಡಿದ್ದಾರೆ. ಈ ನಟಿ ತಮ್ಮ ಮುಂದಿನ  ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ನಟಿ ಸೋಶಿಯಲ್‌ ವಿಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸತೀಶ್ ನೀನಾಸಂ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಮ್ಯಾಟ್ನಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ನಟಿ ರಚಿತಾ ರಾಮ್‌ ವಿಡಿಯೋದಲ್ಲಿ ಇದೇ ಮಾರ್ಚ್‌ 27 ರಂದು ಬುಧವಾರ ಸಂಜೆ 6.30 ಕ್ಕೆ ಮಂತ್ರಿ ಮಾಲ್‌ನಲ್ಲಿ ಮ್ಯಾಟ್ನಿ ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ಡಾಲಿ ಧನಂಜಯ್‌ ಆಗಮಿಸುತ್ತಿದ್ದಾರೆ. ಈ ಚಿತ್ರದ ಟ್ರೇಲರ್‌ ಅನ್ನು ನಟ ದರ್ಶನ್‌ ಬಿಡುಗಡೆ ಮಾಡಲಿದ್ದಾರೆ. ಕೊನೆಯಲ್ಲಿ ಈ ನಟಿ ನಾನು ಮತ್ತು ನಮ್ಮ ಚಿತ್ರತಂಡ ನಿಮಗಾಗಿ ಕಾಯುತ್ತಿರುತ್ತೇವೆ ಎಂದು ಹೇಳಿದ್ದಾರೆ.

 
 
 
 

 
 
 
 
 
 
 
 
 
 
 

A post shared by Rachita Ram (@rachita_instaofficial)

ಇದನ್ನೂ ಓದಿ: Radhika Kumarswamy: ಕಡಲ ತೀರದ ಹತ್ತಿರ ಸ್ಯಾಂಡಲ್‌ವುಡ್‌ ಸ್ವೀಟಿಯ ಮಸ್ತ್ ಹೋಳಿ ಸೆಲೆಬ್ರೇಷನ್!!

ಮ್ಯಾಟ್ನಿ ಇದೊಂದು ಹಾರರ್ ಜಾನರ್‌ ಸಿನಿಮಾವಾಗಿದ್ದು, ಇದರಲ್ಲಿ ನಟಿ ಅದಿತಿ ಪ್ರಭುದೇವ ಹಾಗೂ ರಚಿತ ರಾಮ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಡೈರೆಕ್ಟರ್‌ ಮನೋಹರ್ ಕಂಪ್ಲಿ ಆಕ್ಷನ್‌ ಕಟ್‌ ಹೇಳಿದ್ದು,  ನಿರ್ಮಾಪಕಿ  ಪಾರ್ವತಿ ಎಸ್ ಗೌಡ ಚಿತ್ರಕ್ಕೆ ಎಫ್ ಥ್ರೀ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ ಈ ಸಿನಿಮಾಗ ಹಾಡುಗಳಿಗೆ ಸಂಗೀತಾ ಸಂಯೋಜಕ ಪೂರ್ಣಚಂದ್ರ ತೇಜಸ್ವಿ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ.

ಬಹುನಿರೀಕ್ಷಿತ ಮ್ಯಾಟ್ನಿ ಚಿತ್ರ ಇದೇ ಏಪ್ರಿಲ್-5 ರಂದು ರಾಜ್ಯಾದ್ಯಂತ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಸತೀಶ್ ನಿನಾಸಂ , ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವಾ ಸೇರಿದಂತೆ ದೊಡ್ಡ ತಾರಾಂಗಣವೇ ಇದ್ದು, ಶಿವರಾಜ್ ಕೆ ಆರ್ ಪೇಟೆ, ನಾಗಭೂಷನ್ , ಪೂರ್ಣ ಮೈಸೂರು, ದಿಗಂತ್ , ತಬಲ ನಾಣಿ, ಪ್ರಕಾಶ್ ತುಂಬಿನಾಡು, ಗೋಪಿ ಮಿಮಿಕ್ರಿ, ತುಳಸಿ ಶಿವಮಣಿ  ಇನ್ನು ಅನೇಕರು ಬಣ್ಣ ಹಚ್ಚಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News