ಬೆಂಗಳೂರು: ಮಾದಕ ದ್ರವ್ಯ ಸೇವನೆಯ ತನಿಖೆಗಾಗಿ ಶುಕ್ರವಾರ ಬೆಳಿಗ್ಗೆ ಅವರ ಮನೆಯಲ್ಲಿ ಶೋಧ ನಡೆಸಿದ ಕನ್ನಡ ನಟಿ ರಾಗಿಣಿ ದ್ವಿವೇದಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಂಟ್ರಲ್ ಕ್ರೈಮ್ ಬ್ರಾಂಚ್ (ಸಿಸಿಬಿ) ಬುಧವಾರ ನಟಿಗೆ ನೋಟಿಸ್ ನೀಡಿದ್ದು, ಗುರುವಾರ ಅವರ ಮುಂದೆ ಶರಣಾಗುವಂತೆ ಕೋರಿತ್ತು, ಆದರೆ ಅವರು ಸೋಮವಾರದವರೆಗೆ ಸಮಯ ಕೋರಿ ವಕೀಲರ ತಂಡವನ್ನು ಕಳುಹಿಸಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಶುಕ್ರವಾರ ಆಕೆಯ ಮನೆಯಲ್ಲಿ ಹುಡುಕಾಟ ನಡೆಸಿ, ಆಕೆಯನ್ನು ಪ್ರಶ್ನಿಸಲು ಮಧ್ಯಾಹ್ನ ಸಿಸಿಬಿ ಕಚೇರಿಗೆ ಕರೆದೊಯ್ದರು.
ನಾನು ಮತ್ತು ರಾಗಿಣಿ ಲೀವಿಂಗ್ ಟುಗೆದರ್ ನಲ್ಲಿದ್ದೇವೆ: ರವಿಶಂಕರ್
ನಂತರ ಸಂಜೆ, ಒಂದು ಹೇಳಿಕೆಯಲ್ಲಿ, ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್, "ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ" ಎಂದು ಹೇಳಿದರು. ಅಲ್ಲದೆ, ನಟಿ ಜೊತೆಗೆ ರಾಹುಲ್ ಮತ್ತು ವಿರೇನ್ ಖನ್ನಾ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಡ್ರಗ್ಸ್ ಧಂಧೆ ಹಿನ್ನಲೆಯಲ್ಲಿ ಚಿತ್ರನಟಿ ರಾಗಿಣಿ ಮನೆ ಮೇಲೆ ಪೊಲೀಸ್ ದಾಳಿ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರೋದ್ಯಮದೊಳಗೆ ಸಂಪರ್ಕ ಹೊಂದಿರುವ ಕೆ.ರವಿಶಂಕರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಈ ಹಿಂದೆ ತಿಳಿಸಿದ್ದರು ಮತ್ತು ನ್ಯಾಯಾಲಯ ಆತನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.ಕನ್ನಡ ಚಲನಚಿತ್ರೋದ್ಯಮದ ಗಾಯಕರು ಮತ್ತು ನಟರಿಗೆ ಮಾದಕ ದ್ರವ್ಯಗಳನ್ನು ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ನಗರದ ಮೂವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿದ ನಂತರ ಸಿಸಿಬಿ ಬೆಂಗಳೂರಿನಲ್ಲಿ ಡ್ರಗ್ಸ್ ಸಾಗಿಸುವ ಬಗ್ಗೆ ತನಿಖೆ ತೀವ್ರಗೊಳಿಸಿತ್ತು.
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಧಂಧೆ ಬಗ್ಗೆ ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲೇಬೇಕು ನಟಿ ರಾಗಿಣಿ
ರಾಗಿಣಿ ದ್ವಿವೇದಿ ಅವರ ಕುಟುಂಬ ಹರಿಯಾಣದ ರೇವಾರಿ ಮೂಲದವರು ಆದರೆ ನಟಿ ಬೆಂಗಳೂರಿನಲ್ಲಿ ಜನಿಸಿವರು. ಅವರು 2009 ರಲ್ಲಿ ವೀರ ಮಕರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.ಕೆಂಪೇ ಗೌಡ, ರಾಗಿಣಿ ಐಪಿಎಸ್, ಬಂಗಾರಿ ಮತ್ತು ಶಿವ ಚಿತ್ರಗಳಲ್ಲಿನ ಪಾತ್ರಕ್ಕಾಗಿ ಅವರು ಖ್ಯಾತಿಯನ್ನು ಗಳಿಸಿದರು.