Raj Kundra ಹೊಸ WhatsApp ಚಾಟ್ ನಲ್ಲಿ ಹಲವು ಸಂಗತಿಗಳು ಬಹಿರಂಗ

Raj Kundra WhatsApp Chat: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ (Shilpa Shetty) ಪತಿ ರಾಜ್ ಕುಂದ್ರಾ  (Raj Kundra) ಅವರ ಹೊಸ ವಾಟ್ಸಾಪ್ ಚಾಟ್ ಬಹಿರಂಗಗೊಂಡಿದೆ. ಈ ಚಾಟ್ ನಲ್ಲಿ ಪೊಲೀಸರು ಕ್ರಮಕೈಗೊಳ್ಳುವ ಕುರಿತು ರಾಜ್ ಕುಂದ್ರಾಗೆ ಮೊದಲೇ ತಿಳಿದಿತ್ತು ಮತ್ತು ಅವರು ಇದೇ ಕಾರಣದಿಂದ ಪ್ಲಾನ್ B ಸಿದ್ಧಪಡಿಸಿದ್ದರು ಎನ್ನಲಾಗಿದೆ.

Written by - Nitin Tabib | Last Updated : Jul 21, 2021, 12:04 PM IST
  • ಪ್ಲಾನ್ ಬಿ ಸಿದ್ಧಪಡಿಸಿದ್ದ ರಾಜ್ ಕುಂದ್ರಾ,
  • ಪೊಲೀಸ್ ಕಾರ್ಯಾಚರಣೆಯ ಕುರಿತು ಮೊದಲೇ ತಿಳಿದಿತ್ತು.
  • ಲೈವ್ ಕಂಟೆಂಟ್ ಬಿತ್ತರಿಸುವ ಸಿದ್ಧತೆ ನಡೆಸಲಾಗುತ್ತಿತ್ತು.
Raj Kundra ಹೊಸ WhatsApp ಚಾಟ್ ನಲ್ಲಿ ಹಲವು ಸಂಗತಿಗಳು ಬಹಿರಂಗ

ನವದೆಹಲಿ: Raj Kundra WhatsApp Chat - ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ (Shilpa Shetty) ಪತಿ ರಾಜ್ ಕುಂದ್ರಾ  (Raj Kundra) ಅವರನ್ನು ಜುಲೈ 19 ರಂದು ನೀಲಿ ಚಲನಚಿತ್ರಗಳನ್ನು ನಿರ್ಮಾಣದಲ್ಲಿ ತೊಡಗಿರುವ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದಾರೆ ಇದೀಗ ಅವರನ್ನು ಜುಲೈ 23ರವರೆಗೆ ಬಂಧನಕ್ಕೆ ಒಳಪಡಿಸಲಾಗಿದೆ. ನಿನ್ನೆಯಷ್ಟೇ ಎಚ್ ಅಕೌಂಟ್ಸ್ ಹೆಸರಿನ ವಾಟ್ಸಾಪ್ ಗುಂಪಿನ ಚಾಟ್‌ಗಳ ಚಿತ್ರಗಳು (Raj Kundra WhatsApp Chat) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ರಾಜ್ ಕುಂದ್ರಾ ಕೂಡ ಈ ಗುಂಪಿನೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಲಾಗಿತ್ತು. ಇಈಗ ಅಂತಹ ಮತ್ತೊಂದು ಚಾಟ್ ವಿವರಗಳು ಬಹಿರಂಗಗೊಂಡಿವೆ. ಇದರಲ್ಲಿ ಬಾಳಿ ಫೇಮ್ ಎಂಬ ಗುಂಪು ಸಹ ಕಾಣಿಸಿಕೊಂಡಿದೆ, ಇದನ್ನು ಅಕ್ಟೋಬರ್ 30 ರಂದು ರಚಿಸಲಾಗಿದೆ. Zee Newsಗೆ ದೊರೆತ ಮಾಹಿತಿಗಳ ಪ್ರಕಾರ ರಾಜ್ ಕುಂದ್ರಾ ಮತ್ತು ಅವರ ತಂಡಕ್ಕೆ ಪೋರ್ನೋಗ್ರಾಫಿ ಹಿನ್ನೆಲೆ ಪೋಲೀಸ ಹಾಗೂ ಇತರ ಅಪಾಯಗಳ ಕುರಿತು ಮೊದಲೇ ತಿಳಿದಿತ್ತು. ಇದೇ ಕಾರಣದಿಂದ ತಂಡ ಪ್ಲಾನ್ ಬಿ ರಚಿಸಿ ಸಂಪೂರ್ಣ ಸಿದ್ಧತೆಯಲ್ಲಿ ತೊಡಗಿತ್ತು ಎನ್ನಲಾಗಿದೆ.

ರಾಜ್ ಕುಂದ್ರಾ ಖುದ್ದು ಪ್ಲಾನ್ ಬಿ ರಚಿಸಿದ್ದರು
ಕಳೆದ ವರ್ಷ ನವೆಂಬರ್ 18 ರಂದು ಗೂಗಲ್ ಪ್ಲೇ ಸ್ಟೋರ್ ನೀತಿ ಉಲ್ಲಂಘನೆಯ ಹಿನ್ನೆಲೆ ರಾಜ್ ಕುಂದ್ರಾ ಅವರ ಆಪ್ Hotshots ಡಿಜಿಟಲ್ ಅನ್ನು ಸಸ್ಪೆಂಡ್ ಮಾಡಲಾಗಿತ್ತು. Zee Newsಗೆ ದೊರೆತ ಚಾಟ್ ಗಳ ಪ್ರಕಾರ ರಾಜ್ ಕುಂದ್ರಾ ಅವರಿಗೆ ಮೊದಲೇ ಸಂಗತಿ ಕುರಿತು ತಿಳಿದಿತ್ತು. ಇದೆ ಕಾರಣದಿಂದ ರಾಜ್ ಕುಂದ್ರಾ ಮತ್ತು ಅವರ ತಂಡ 'ಪ್ಲಾನ್ ಬಿ' ಸಿದ್ಧಪಡಿಸಿತ್ತು. ಇದೆ ಕಾರಣದಿಂದ ಅವರ ಅಪ್ಲಿಕೇಶನ್ ಸಸ್ಪೆಂಡ್ ಆದರೂ ಕೂಡ ರಾಜ್ ಕುಂದ್ರಾ ಅವರಿಗೆ ಹೆಚ್ಚಿನ ತೊಂದರೆಯಾಗಿರಲಿಲ್ಲ.

ನವೆಂಬರ್ 18ರ ಚಾಟ್ (Raj Kundra New WhatsApp Chat)
ಚಾಟ್ ನಲ್ಲಿ ಈ ಕುರಿತು ಉಲ್ಲೇಖಿಸಿರುವ ರಾಜ್ ಕುಂದ್ರಾ, ' Plan B ಆರಂಭಗೊಂಡ ಎರಡರಿಂದ ಮೂರು ವಾರಗಳ  ಹೊಸ App iOS ಹಾಗೂ Android ವೇದಿಕೆಗಳ ಮೇಲೆ ಲೈವ್ ಆಗಲಿದೆ' ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ Hotshots ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮಾಡುವ ರಾಬ್, ' ಹೊಸ ಆಪ್ ಬರುವವರೆಗೆ ನಾವು ನಮ್ಮೆಲ್ಲಾ ಬೋಲ್ಡ್ ಚಿತ್ರಗಳನ್ನು ಡಿಆಕ್ಟಿವೇಟ್ ಮಾಡೋಣ ಹಾಗೂ ಪ್ಲೇ ಸ್ಟೋರ್ ಗೆ ಆಪ್ ಅನ್ನು ರೀಸ್ಟೋರ್ ಮಾಡಲು ವಿನಂತಿಸೋಣ' ಎಂದಿದ್ದರು.

ನವೆಂಬರ್ 10ರ ಚಾಟ್ (Raj Kundra Leaked WhatsApp Chat)
ನವೆಂಬರ್ 10ರಂದು ನಡೆಸಲಾಗಿದ್ದ ಒಂದು ಚಾಟ್ ಕೂಡ ಬಹಿರಂಗಗೊಂಡಿದೆ. ಇದರಲ್ಲಿ ನ್ಯೂಸ್ ಆರ್ಟಿಕಲ್ ವೊಂದನ್ನು ಹಂಚಿಕೊಳ್ಳಲಾಗಿದೆ. ನ್ಯೂಸ್ ಆರ್ಟಿಕಲ್ ಪ್ರಕಾರ, ವಯಸ್ಕರ ಕಂಟೆಂಟ್ ಬಿತ್ತರಿಸಿದ ಹಿನ್ನೆಲೆ 7 OTT ವೇದಿಕೆಗಳಿಗೆ ಸಮನ್ ನೀಡಲಾಗಿದೆ. ಇದಕ್ಕೆ  'Thank God U planned BF' ಎಂದು ರಾಜ್ ಕುಂದ್ರಾ ಪ್ರತಿಕ್ರಿಯಿಸಿದ್ದಾರೆ. 'ಪ್ರಸ್ತುತ ಕೆಲ ಸಮಯದವರೆಗೆ OTT ಪ್ಲಾಟ್ಫಾರಂಗಳಿಂದ ಅತಿ ಹೆಚ್ಚು ಬೋಲ್ಡ್ ಆಗಿರುವ ಕಂಟೆಂಟ್ ಅನ್ನು ತೆಗೆದುಹಾಕಿ. ಕಚೇರಿಗೆ ಬಂದ ಬಳಿಕ ಈ ಕುರಿತು ಮತ್ತೆ ಚರ್ಚಿಸೋಣ. ನಾವು HS(Hotshots) ಉಳಿಸಿಕೊಳ್ಳುವ ಪ್ಲಾನ ಮಾಡಬೇಕಿದೆ' ಎನ್ನಲಾಗಿದೆ. 

ಪೊಲೀಸ್ ಕಾರ್ಯಾಚರಣೆಯ ಕುರಿತು ಕುಂದ್ರಾಗೆ ಮೊದಲೇ ತಿಳಿದಿತ್ತು
ಈ ಕುರಿತು ಚಾಟ್ ನಲ್ಲಿ ಮಾತನಾಡಿರುವ ರಾಜ್ ಕುಂದ್ರಾ ತಂಡದ ಸದಸ್ಯ ' ಪೊಲೀಸರು Alt Balajiಗೆ ಯಾವುದೇ ರೀತಿಯ ಹಾನಿ ತಲುಪಿಸುತ್ತಾರೆ ಎಂಬುದರ ಮೇಲೆ ನನಗೆ ಶಂಕೆ ಇದೆ' ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕುಂದ್ರಾ, ಇದು ಅಷ್ಟೊಂದು ಸಿರಿಯಸ್ ಆಗಿಲ್ಲ. ಅವರು ಕೇವಲ ಆಕ್ಷೇಪಾರ್ಹ ಕಂಟೆಂಟ್ ಅನ್ನು ಮಾತ್ರ ತೆಗೆದುಹಾಕಿಸಲಿದ್ದಾರೆ' ಎನ್ನುತ್ತಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿರುವ ಸದಸ್ಯ ' ಅತಿ ಹೆಚ್ಚಿನ ಬೋಲ್ಡ್ ಕಂಟೆಂಟ್ ಅನ್ನು ತೆಗೆದುಹಾಕುವುದರಿಂದ ಯಾವುದೇ ಲಾಭ ಸಿಗುವುದಿಲ್ಲ' ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಕುಂದ್ರಾ, 'ಇಂತಹುದರಲ್ಲಿ ಅತಿ ಹೆಚ್ಚಿನ ಬೋಲ್ಡ್ ಕಂಟೆಂಟ್ ಅನ್ನು ತೆಗೆದು ಹಾಕಿದರು ಕೂಡ ಯಾವುದೇ ಹೆಚ್ಚಿನ ಪ್ರಭಾವ ಬೀಳುವುದಿಲ್ಲ. ಏಕೆಂದರೆ, ಇಂದಿನ ದಿನಗಳಲ್ಲಿ ದಿನನಿತ್ಯದ ಲೆಕ್ಕಾಚಾರದಲ್ಲಿ ಮೂವಿ ರೆವೆನ್ಯೂ 15 ರಿಂದ 20 ಸಾವಿರರಷ್ಟು ಇದೆ. ಈ ಕುರಿತು ನಾನು ನಿನ್ನೊಂದಿಗೆ ಕಚೇರಿಗೆ ಬಂದ ಬಳಿಕ ಚರ್ಚಿಸುವೆ' ಎನ್ನುತ್ತಾರೆ. 

ಲೈವ್ ಕಂಟೆಂಟ್ ಆರಂಭಿಸುವ ಯೋಜನೆ
ರಾಜ್ ಕುಂದ್ರಾ ಮಾತಿಗೆ ಉತ್ತರ ನೀಡಿರುವ ವ್ಯಕ್ತಿಯೊಬ್ಬರು, 'ಲೈವ್ ಕಂಟೆಂಟ್ ಗೆ ಭವಿಷ್ಯ ಇದೆ. ಇದರಲ್ಲಿ ಸ್ಕ್ರೀನ್ ರಿಕಾರ್ಡ್ ಮಾಡದೆ ಹೋದಲ್ಲಿ, ಬೋಲ್ಡ್ ಚಿತ್ರ ನಡೆಸುವುದರಿಂದ ಯಾವುದೇ ಅಂತರ ಬೀಳುವುದಿಲ್ಲ. ಹಳೆ ಕಂಟೆಂಟ್ ಅನ್ನು ಮಾರಾಟ ಮಾಡಿ ಶೀಘ್ರದಲ್ಲಿಯೇ 50 L ರಿಕವರ್ ಮಾಡಿಕೊಳ್ಳೋಣ' ಎಂದಿದ್ದಾರೆ.

ಅಕ್ಟೋಬರ್ 11ರ ಚಾಟ್ ವಿವರ
ಇನ್ನೊಂದೆಡೆ ಅಕ್ಟೋಬರ್ 11ರ ಚಾಟ್ ವೊಂದು ಕೂಡ ಬಹಿರಂಗವಾಗಿದೆ. ಇದರಲ್ಲಿ ಅಂಕಿ-ಸಂಖ್ಯೆಗಳ ಮೇಲೆ ಚರ್ಚಿಸಲಾಗಿದೆ. ಜೊತೆಗೆ ಇರರಲ್ಲಿ ಪ್ರಿಯಾ ಸೆನ್ ಗುಪ್ತಾ ಹೆಸರಿನ ಆರ್ಟಿಸ್ಟ್ ಪೇಮೆಂಟ್ ಕುರಿತು ಚರ್ಚಿಸಲಾಗಿದೆ. ಈ ಪೇಮೆಂಟ್ ಅನ್ನು ಪ್ರದೀಪ್ ಬಕ್ಷಿ ಹೆಸರಿನ ವ್ಯಕ್ತಿಗೆ ನೀಡಲು ಹೇಳಲಾಗಿದೆ.

ಇದನ್ನೂ ಓದಿ-Video Viral: ಕಪಿಲ್ ಶರ್ಮಾ ಶೋನಲ್ಲಿ ತಮ್ಮ ಆದಾಯದ ಬಗ್ಗೆ ಶಿಲ್ಪಾ ಶೆಟ್ಟಿ ಪತಿ ಹೇಳಿದ್ದೇನು..?

ಅಕ್ಟೋಬರ್ 30ರ ಚಾಟ್ ವಿವರ (Raj Kundra Viral WhatsApp Chat)
ಅಕ್ಟೋಬರ್ 30ರ ಚಾಟ್ ಅನ್ನು ಬಾಲಿ ಫೇಮ್ ಹೆಸರಿನ ಗ್ರೂಪ್ ಮೂಲಕ ನಡೆಸಲಾಗಿದೆ. ಅಕ್ಟೋಬರ್  30ರಂದೇ ಈ ಹೊಸ ಗ್ರೂಪ್ ರಚಿಸಲಾಗಿದೆ. ಇದರ ಪ್ರಕಾರ ಪ್ಲಾನ್ B ಅಡಿ, ಗೂಗಲ್ ಪ್ಲೇನಿಂದ ಮೊದಲ ಅಪ್ಲಿಕೇಶನ್ ಹಾಟ್‌ಶಾಟ್‌ ಅನ್ನು ಸಸ್ಪೆಂಡ್ ಮಾಡುವ ಮೊದಲೇ ಈ ಬಾಲಿ ಫೇಮ್ ಹೆಸರಿನ ಮತ್ತೊಂದು ಅಪ್ಲಿಕೇಶನ್ ಅನ್ನು ಸಿದ್ಧಪಡಿಸಿದ್ದರು ಮತ್ತು ಅದರ  ಡೊಮೇನ್ ಸಹ ಈ ಜನರು ಖರೀದಿಸಲು ಸಿದ್ಧತೆ ನಡೆಸಿದ್ದರು. ರಾಜ್ ಕುಂದ್ರಾ ಸೇರಿದಂತೆ  ಎಚ್ ಖಾತೆಗೆ ಸಂಬಂಧಿಸಿದ ಜನರನ್ನು ಸಹ ಈ ಗುಂಪಿನಲ್ಲಿ ಸೇರಿಸಲಾಗಿದೆ. ಈ ಗುಂಪಿನಲ್ಲಿ, ರಾಜ್ ಕುಂದ್ರಾ ಅವರು ಡೊಮೇನ್ ಹುಡುಕಾಟದ ಬಗ್ಗೆ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ- ಅಶ್ಲೀಲ ಚಿತ್ರಗಳ ನಿರ್ಮಾಣ ವಿಚಾರವಾಗಿ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ

ರಾಜ್ ಕುಂದ್ರಾ ಅವರೊಂದಿಗೆ ಕೆಲ ಚಾಟ್ ಗಳನ್ನು ವೈಯಕ್ತಿಕವಾಗಿ ನಡೆಸಲಾಗಿದ್ದರೆ. ಉಳಿದ ಚಾಟ್ ಗಳು ಹೆಚ್ ಅಕೌಂಟ್ ಹಾಗೂ ಬಾಲಿ ಫೇಮ್ ಗ್ರೂಪ್ ಗಳಲ್ಲಿ ನಡೆಸಲಾಗಿದೆ. ಹೆಚ್ ಗುಂಪಿನಲ್ಲಿ ಒಟ್ಟು ಐವರು ಸದಸ್ಯರಿದ್ದಾರೆ. ಇದರಲ್ಲಿ ರಾಜ್ ಕುಂದ್ರಾ, ಮೇಘಾ ವಿಯಾನ್ ಅಕೌಂಟ್ಸ್, ಪ್ರದೀಪ್ ಬಕ್ಷಿ, ರಾಬ್ ಡಿಜಿಟಲ್ ಮಾರ್ಕೆಟಿಂಗ್ ಹಾಟ್ ಶಾಟ್ಸ್ ಹಾಗೂ ರಾಯ್ ಇವಾನ್ಸ್ ಕಂಟೆಂಟ್ ಹೆಡ್ ಹಾಟ್ ಶಾಟ್ಸ್ ಶಾಮೀಲಾಗಿದ್ದಾರೆ.

ಇದನ್ನೂ ಓದಿ-‘ವಿಕ್ರಾಂತ್ ರೋಣ’ ಸಿನಿಮಾ ಬಗ್ಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದೇನು..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News