Thalaivar 171: ಸೂಪರ್‌ ಸ್ಟಾರ್ ರಜನಿಕಾಂತ್‌ ಹೊಸ ಸಿನಿಮಾದ ಪೋಸ್ಟರ್‌ ಔಟ್!‌

Thalaivar 171 Update: ಸೂಪರ್‌ ಸ್ಟಾರ್‌ ರಜನಿಕಾಂತ್ ಅಭಿನಯನದ ಬಹುನಿರೀಕ್ಷಿತ 'ತಲೈವರ್ 171' ಸಿನಿಮಾದ ಪೋಸ್ಟರ್ವ ರಿಲೀಸ್‌ ಮಾಡಲಾಗಿದೆ. ಹಾಗೆಯೇ ಚಿತ್ರದ ಟೀಸರ್‌ ಬಿಡುಗಡೆಯ ದಿನಾಂಕವನ್ನು ಕೂಡ ಅನೌನ್ಸ್‌ ಮಾಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.

Written by - Zee Kannada News Desk | Last Updated : Mar 28, 2024, 08:42 PM IST
  • ನಿರ್ದೇಶಕ ಲೋಕೇಶ್‌ ಕನಕರಾಜ್‌ ಈ ಚಿತ್ರದ ಹೊಸ ಪೋಸ್ಟರ್‌ ಶೇರ್‌ ಮಾಡುವುದರ ಜೊತೆಗೆ 'ತಲೈವರ್ 171' ಟೀಸರ್‌ ರಿಲೀಸ್‌ ಡೇಟ್‌ ಅಧೀಕೃತವಾಗಿ ಘೋಷಣೆ ಮಾಡಿದ್ದಾರೆ.
  • ಪೋಸ್ಟರ್‌ನಲ್ಲಿ ನಟ ರಜಿನಿಕಾಂತ್‌ ಒರಟಾಗಿ ರಗಡ್‌ ಅವತಾರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಕೈಗೆ ಚಿನ್ನದ ಕೈಗಡಿಯಾರ ಬೇಡಿ ತರಹ ಹಾಕಿಕೊಂಡಿದ್ದರು.
  • ಸಂದರ್ಶನವೊಂದರಲ್ಲಿ ಮಾತನಾಡಿದ ಲೋಕೇಶ್‌ ಕನಕರಾಜ್‌ ಸದ್ಯಕ್ಕೆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.
Thalaivar 171: ಸೂಪರ್‌ ಸ್ಟಾರ್ ರಜನಿಕಾಂತ್‌ ಹೊಸ ಸಿನಿಮಾದ ಪೋಸ್ಟರ್‌ ಔಟ್!‌ title=

Rajanikanth ʻThalaivar 171ʼ Poster: ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್ ಹಾಗೂ ಡೈರೆಕ್ಟರ್‌ ಕನಕರಾಜ್ ಅಪ್‌ಡೇಟ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ 'ತಲೈವರ್ 171' ಪೋಸ್ಟರ್‌ ರಿವೀಲ್‌ ಆಗಿದೆ. ನಿರ್ದೇಶಕ ಲೋಕೇಶ್‌ ಕನಕರಾಜ್‌ ಈ ಚಿತ್ರದ ಹೊಸ ಪೋಸ್ಟರ್‌ ಶೇರ್‌ ಮಾಡುವುದರ ಜೊತೆಗೆ ಈ ಸಿನಿಮಾದ ಟೀಸರ್‌ ರಿಲೀಸ್‌ ಡೇಟ್‌ ಕೂಡ ಅಧೀಕೃತವಾಗಿ ಘೋಷಣೆ ಮಾಡಿದ್ದಾರೆ.

ಲೋಕೇಶ್‌ ಕನಕರಾಜ್‌ ಇಂದು ಮಾರ್ಚ್‌ 28 ಗುರುವಾರದಂದು ಸೋಶಿಯಲ್‌ ಮಿಡಿಯಾದಲ್ಲಿ 'ತಲೈವರ್ 171' ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಳ್ಳುವುದರ ಜೊತೆಗೆ ಈ ಸಿನಿಮಾದ ಟೈಟಲ್‌ ಟೀಸರ್‌ ಏಪ್ರಿಲ್ 22, 2024 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ನಟ ರಜಿನಿಕಾಂತ್‌ ಒರಟಾಗಿ ರಗಡ್‌ ಅವತಾರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಕೈಗೆ ಚಿನ್ನದ ಕೈಗಡಿಯಾರ ಬೇಡಿ ತರಹ ಹಾಕಿಕೊಂಡಿದ್ದರು.

ಇದನ್ನೂ ಓದಿ: Samantha Ruth Prabhu: 'ಲೈಂಗಿಕತೆಯ ವಿಚಾರದಲ್ಲಿ ನಾನು ಯಾವಾಗಲೂ...', ಬೆಚ್ಚಿಬೀಳಿಸುವ ಹೇಳಿಕೆ ನೀಡಿದ ಸಮಂತಾ!

ಸಂದರ್ಶನವೊಂದರಲ್ಲಿ ಮಾತನಾಡಿದ ಲೋಕೇಶ್‌ ಕನಕರಾಜ್‌ ಸದ್ಯಕ್ಕೆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ನಿರ್ದೇಶಕ "ಜೂನ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇಡೀ ಪ್ರಕ್ರಿಯೆಯು ಸುಮಾರು ಒಂದರಿಂದ ಒಂದೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ. 'ತಲೈವರ್ 171' ಮುಗಿದ ಒಂದು ತಿಂಗಳ ನಂತರ ನಾವು ಕಾರ್ತಿ ಅವರೊಂದಿಗೆ 'ಕೈತಿ 2' ಪ್ರಾರಂಭಿಸುತ್ತೇವೆ. ಆದ್ದರಿಂದ, ಕೆಲಸ ನಡೆಯುತ್ತಿದೆ." ಎಂದಿದ್ದಾರೆ.

ಸದ್ಯಕ್ಕೆ ಈ ಚಿತ್ರದಕ್ಕೆ 'ತಲೈವರ್ 171' ಎಂದು ಹೆಸರಿಡಲಾಗಿದ್ದು, ಈ ಸಿನಿಮಾವನ್ನು ಸನ್ ಪಿಕ್ಚರ್ಸ್‌ನಿಂದ  ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಸೆಪ್ಟಂಬರ್‌ 2023 ರಿಂದ ಶೂಟಿಂಗ್‌ ಪ್ರಾರಂಭಿಸಲಾಗಿತ್ತು. ಈ ಚಿತ್ರದಲ್ಲಿ ನಟ ಶಿವಕಾರ್ತಿಕೇಯನ್ ಕೂಡ ಬಣ್ಣ  ಹಚ್ಚಲಿದ್ದಾರೆ ಎನ್ನಲಾಗಿದ್ದು, ಆದರೆ ಅಧಿಕೃತವಾಗಿ ಯಾವ ಮಾಹಿತಿಯೂನ ಹೊರ ಬಂದಿಲ್ಲ. ಈ ಸಿನಿಮಾದ ಸಾಹಸ ದೃಶ್ಯಗಳಿಗೆ ಸ್ಟಂಟ್‌ ಡೈರೆಕ್ಟರ್‌ ಅನ್ಬರಿವ್ ನಿರ್ದೇಶನ ಮಾಡಲಿದ್ದು, ಹಾಗೆ ಈ ಚಿತ್ರದ ಹಾಡುಗಳನ್ನು ಮ್ಯೂಸಿಕ್‌ ಡೈರೆಕ್ಟರ್‌ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News