Rakhi Sawant : ತಪ್ಪಾಗಿ ನಮಾಜ್ ಮಾಡಿದ ರಾಖಿ ಸಾವಂತ್ ವಿಡಿಯೋ ವೈರಲ್.!

Rakhi Sawant Offering Namaz Incorrectly : ವಿವಾದಗಳಿಂದಲೇ ಸುತ್ತುವರಿದ ರಾಖಿ ಸಾವಂತ್‌ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ನಟಿ ಇತ್ತೀಚೆಗೆ Instagram ನಲ್ಲಿ ನಮಾಜ್ ಮಾಡುವ ವಿಡಿಯೋವನ್ನು ಪೋಸ್ಟ್‌‌ ಮಾಡಿದ ನಂತರ ಟ್ರೋಲ್‌ಗೆ ಒಳಪಟ್ಟರು. 

Written by - Chetana Devarmani | Last Updated : Feb 23, 2023, 07:49 AM IST
  • ವಿವಾದಗಳಿಂದಲೇ ಸುತ್ತುವರಿದ ರಾಖಿ ಸಾವಂತ್‌
  • ನಮಾಜ್ ಮಾಡುವ ವಿಡಿಯೋ ಪೋಸ್ಟ್‌ ಮಾಡಿದ ನಟಿ
  • ತಪ್ಪಾಗಿ ನಮಾಜ್ ಮಾಡಿದ ರಾಖಿ ಸಾವಂತ್ ವಿಡಿಯೋ ವೈರಲ್.!
Rakhi Sawant : ತಪ್ಪಾಗಿ ನಮಾಜ್ ಮಾಡಿದ ರಾಖಿ ಸಾವಂತ್ ವಿಡಿಯೋ ವೈರಲ್.!   title=
ರಾಖಿ ಸಾವಂತ್

Rakhi Sawant Offering Namaz Incorrectly : ವಿವಾದಗಳಿಂದಲೇ ಸುತ್ತುವರಿದ ರಾಖಿ ಸಾವಂತ್‌ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ನಟಿ ಇತ್ತೀಚೆಗೆ Instagram ನಲ್ಲಿ ನಮಾಜ್ ಮಾಡುವ ವಿಡಿಯೋವನ್ನು ಪೋಸ್ಟ್‌‌ ಮಾಡಿದ ನಂತರ ಟ್ರೋಲ್‌ಗೆ ಒಳಪಟ್ಟರು. ರಾಖಿ ಸಾವಂತ್ ಅವರು ಉದ್ಯಮಿ ಆದಿಲ್ ಖಾನ್ ದುರಾನಿ ಅವರನ್ನು ವಿವಾಹವಾದಾಗಿನಿಂದಲೂ ಅವರ ವ್ಯಯಕ್ತಿಕ ಜೀವನದ ವಿಚಾರವಾಗಿ ಸಾಕಷ್ಟು ಟ್ರೋಲ್‌ ಆಗುತ್ತಿದ್ದಾರೆ. 

ಇವರಿಬ್ಬರು ಮದುವೆಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಆರಂಭಿಕ ಚರ್ಚೆಯ ನಂತರ, ವಿಷಯಗಳು ಈಗ ಗಂಭೀರ ಸ್ವರೂಪದಲ್ಲಿ ತಿರುವು ಪಡೆದಿವೆ. ಆದಿಲ್ ಹಲವಾರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾನೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಆಕೆಯು ತನ್ನ ಮಾಜಿ ಸಂಗಾತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ, ಅವನು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ತನ್ನ ಜೀವವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ ಮತ್ತು ತನ್ನ ನಗ್ನ ವಿಡಿಯೋಗಳನ್ನು ಸಹ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಪ್ರಸ್ತುತ ಆದಿಲ್ ಕೌಟುಂಬಿಕ ದೌರ್ಜನ್ಯದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ : ಹನಿಮೂನ್‌ನಿಂದ ಬಂದ ಕಿಯಾರಾ ನೋಡಿ ಬೇಜಾರಾದ ಪ್ಯಾನ್ಸ್‌..! ಏಕೆ ಗೊತ್ತಾ..?

ರಾಖಿ ಸಾವಂತ್ ಸುತ್ತಲಿನ ಎಂದಿಗೂ ಮುಗಿಯದ ವಿವಾದಗಳ ಮಧ್ಯೆ, ನಟಿ ಇತ್ತೀಚೆಗೆ Instagram ನಲ್ಲಿ ನಮಾಜ್ ನೀಡುವ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ನೆಟಿಜನ್‌ಗಳು ಇದಕ್ಕೆ ಆಕ್ರೋಶ ಹೊರಹಾಕಿದ್ದಾರೆ, ಮೊದಲು ಇಸ್ಲಾಮಿಕ್ ಪ್ರಾರ್ಥನೆಯನ್ನು ನಿರ್ವಹಿಸುವ ಸರಿಯಾದ ವಿಧಾನವನ್ನು ಕಲಿಯಬೇಕು ಎಂದು ಹೇಳಿದ್ದಾರೆ.

ಕ್ಲಿಪ್‌ನಲ್ಲಿ, ರಾಖಿ ಅರ್ಧ ತೋಳಿನ ಕಪ್ಪು ಮತ್ತು ಬಿಳಿ ಹೂವಿನ-ಮುದ್ರಿತ ಶರ್ಟ್‌ ಧರಿಸಿರುವುದನ್ನು ಕಾಣಬಹುದು. ಈ ವಿಡಿಯೋ ಜೊತೆಗೆ, ರಾಖಿ ದುಃಖದ ಸ್ಮೈಲಿ ಮತ್ತು ಹಾರ್ಟ್‌ ಬ್ರೇಕ್ ಎಮೋಜಿಯನ್ನು ಶೀರ್ಷಿಕೆಯಲ್ಲಿ ಸೇರಿಸಿದ್ದಾರೆ.

 

 

ಇಂಟರ್ನೆಟ್‌ನಲ್ಲಿ ವಿಡಿಯೋ ಕಾಣಿಸಿಕೊಂಡ ತಕ್ಷಣ, ಸಾಮಾಜಿಕ ಮಾಧ್ಯಮ ಬಳಕೆದಾರರು ಹಲವಾರು ಟೀಕೆಗಳನ್ನು ಮಾಡಿದ್ದಾರೆ. "ನಮಾಜ್ ಅನ್ನು ನೇಲ್ ಪ್ಯಾಂಟ್ ಧರಿಸಿ ಮಾಡಲಾಗುವುದಿಲ್ಲ, ನೇಲ್ ಪೇಂಟ್ ತೆಗೆದುಹಾಕಿ ಮತ್ತು ನಮಾಜ್ ಮಾಡಿ ಇಲ್ಲದಿದ್ದರೆ ಪ್ರಾರ್ಥನೆಯು ನಿಷ್ಪ್ರಯೋಜಕವಾಗುತ್ತದೆ" ಎಂದು ಒಬ್ಬ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ : ʼತಪ್ಪು ತಿಳಿಬೇಡಿ..ʼ ರಿಷಬ್‌ಗೆ ಸಿಕ್ಕಿದ್ದು, ಅಣ್ಣಾವ್ರಿಗೆ ಸಿಕ್ಕ ʼದಾದಾ ಸಾಹೇಬ್‌ ಪಾಲ್ಕೆʼ ಅಲ್ಲ..!

"ಆತ್ಮೀಯ ಸಹೋದರಿ, ದಯವಿಟ್ಟು ನಮಾಜ್ ಹೇಗೆ ಮಾಡಬೇಕೆಂಬುದರ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಿ" ಎಂದು ಮತ್ತೊಬ್ಬ ಬಳಕೆದಾರರು ವ್ಯಂಗ್ಯವಾಡಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರರ ಒಂದು ನಿರ್ದಿಷ್ಟ ವಿಭಾಗವು ರಾಖಿಯನ್ನು ಬೆಂಬಲಿಸಲು ಮುಂದಾಯಿತು. "ಅಲ್ಲಾ ಎಲ್ಲವನ್ನೂ ಚೆನ್ನಾಗಿ ಮಾಡುತ್ತಾನೆ ರಾಖಿ, ಚಿಂತಿಸಬೇಡಿ," ಎಂದು ಒಬ್ಬ ಬಳಕೆದಾರರು ಭರವಸೆ ನೀಡಿದ್ದಾರೆ. ಇನ್ನೊಬ್ಬರು ಶುಭವಾಗಲಿ ಎಂದು ಹಾರೈಸಿದ್ದಾರೆ. ರಾಖಿ ಸಾವಂತ್ ಪಾಪರಾಜಿಗಳೊಂದಿಗೆ ಸಂವಹನ ನಡೆಸುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News