Rishab shetty Dada Saheb Phalke award : ಕನ್ನಡಿಗನ ʼಕಾಂತಾರʼ ಸಿನಿಮಾ ಭಾರತೀಯ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರ ಸಾಲು ಸಾಲು ದಾಖಲೆಗಳನ್ನು ಕ್ರಿಯೇಟ್ ಮಾಡಿತ್ತು. ಅಲ್ಲದೆ, ʼದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿʼಗೂ ಸಹ ರಿಷಬ್ ಶೆಟ್ಟಿ ಪಾತ್ರರಾಗಿದ್ದು ಹೆಮ್ಮೆಯ ವಿಚಾರ. ಇತ್ತೀಚಿಗೆ ಅವರೇ ಹಿಂದಿ ಕಾಂತಾರಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದರು. ಇದೀಗ ʼದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿʼ ಮತ್ತು ಪ್ರತಿಷ್ಠಿತ ʼದಾದಾ ಸಾಹೇಬ್ ಪಾಲ್ಕೆʼ ಪ್ರಶಸ್ತಿಯ ಕುರಿತು ನೆಟ್ಟಿಗರಲ್ಲಿ ಗೊಂದಲ ಉಂಟಾಗಿದೆ.
ಹೌದು.. ಕಾಂತಾರ ಸಿನಿಮಾಗಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಲಾಗಿದೆ. ಈ ಹಿಂದೆ ಈ ಪ್ರಶಸ್ತಿಯನ್ನು ಕಿಚ್ಚ ಸುದೀಪ್ ಅವರಿಗೆ ನೀಡಲಾಗಿತ್ತು. ಇದೀಗ ಎಲ್ಲಿರಲ್ಲಿಯೂ ಮೂಡಿರುವ ಒಂದೇ ಒಂದು ಪ್ರಶ್ನೆ ಅಂದ್ರೆ, ಡಾ. ರಾಜ್ಕುಮಾರ್ ಅವರಿಗೆ ಲಭಿಸಿದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಇಷ್ಟು ಬೇಗ ಈ ಯುವ ನಟರಿಗೆ ಹೇಗೆ ಸಿಕ್ತು ಅಂತ...! ಎಲ್ಲರೂ ತಲೆ ಕೆಡಿಸಿಕೊಂಡಿದ್ದಾರೆ...
ಇದನ್ನೂ ಓದಿ: ನಟ ವಿಶಾಲ್ ʼಮಾರ್ಕ್ ಆಂಟನಿʼ ಸಿನಿಮಾ ಸೆಟ್ನಲ್ಲಿ ಭಾರಿ ಅಪಘಾತ..! ವಿಡಿಯೋ ವೈರಲ್
ಯಸ್.. ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಬಿಡಿ. ಅಂದಹಾಗೆ ʼದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿʼ ಮತ್ತು ʼದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿʼ ಎರಡೂ ವಿಭಿನ್ನ ಪ್ರಶಸ್ತಿಗಳಾಗಿವೆ. ಸಿನಿಮಾ ಕ್ಷೇತ್ರದ ಜೀವನಮಾನ ಸಾಧನೆಗೆ, ದೇಶದ ಅತ್ಯುನ್ನತ ಪ್ರಶಸ್ತಿಯಾಗಿ ನೀಡಲಾಗುವ ʼದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿʼಗೂ ಹಾಗೂ ಕಿಚ್ಚ ಸುದೀಪ್ ಮತ್ತು ರಿಷಬ್ ಶೆಟ್ಟಿ ಸೇರಿದಂತೆ ಮೊನ್ನೆ ಹಲವು ಯುವ ನಟರಿಗೆ ನೀಡಿದ ದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ ಯಾವುದೇ ಸಂಬಂಧವಿಲ್ಲ.
ವರನಟ ಡಾ. ರಾಜ್ಕುಮಾರ್ ಅವರಿಗೆ ಸಿಕ್ಕ ದಾದಾ ಸಾಹೇಬ್ ಪ್ರಶಸ್ತಿಯನ್ನು, ಸಿನಿರಂಗದಲ್ಲಿ ಜೀವಮಾನ ಸಾಧನೆ ಮಾಡಿದ ಸಾಧಕರಿಗೆ ಮಾತ್ರ ನೀಡಲಾಗುತ್ತದೆ. ಅಣ್ಣಾವ್ರನ್ನು ಬಿಟ್ಟು ಇದುವರೆಗೂ ಕನ್ನಡದ ಯಾವುದೇ ನಟನಿಗೆ ಈ ಪ್ರಶಸ್ತಿ ಲಭಿಸಿಲ್ಲ ಎನ್ನುವುದನ್ನು ಮೊದಲ ಎಲ್ಲರೂ ತಿಳಿಯಬೇಕಾಗುತ್ತದೆ. ಭಾರತೀಯ ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಒಬ್ಬರನ್ನು ಆಯ್ಕೆ ಮಾಡಿ ಪ್ರತಿವರ್ಷ ಈ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. 1995 ರಲ್ಲಿ ಡಾ.ರಾಜ್ಕುಮಾರ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 2019 ರಲ್ಲಿ ರಜನಿಕಾಂತ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
ವರ್ಷದಲ್ಲಿ ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ನಟ, ನಟಿ, ನಿರ್ದೇಶಕರಿಗೆ ದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.