ಮುಂಬೈ: ಹೈದ್ರಾಬಾದ್ ನ ಶಾದ್ ನಗರ್ ನಲ್ಲಿ ನಡೆದ ಪಶುವೈದ್ಯಾಧಿಕಾರಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಇಡೀ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸದ್ಯ ಇದಕ್ಕೆ ಕೈಜೋಡಿಸಿರುವ ಚಿತ್ರರಂಗದ ತಾರೆಯರು ಕೂಡ #JusticeForPriyankaReddy ಹ್ಯಾಶ್ ಟ್ಯಾಗ್ ಅಡಿ ನ್ಯಾಯಕ್ಕಾಗಿ ಒಕ್ಕೊರಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಾಲಿವುಡ್ ನ ವಿವಾದಾತ್ಮಕ ನಟಿ ರಾಖಿ ಸಾವಂತ್, ಪ್ರಧಾನಿ ನರೇಂದ್ರ ಮೋದಿ (NARENDRA MODI) ಅವರಿಗೆ ಸವಾಲ್ ಎಸಗಿದ್ದು, ಆರೋಪಿಗಳ ಗುಪ್ತಾಂಗಗಳನ್ನು ಕತ್ತರಿಸಿ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ಘಟನೆಯ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಹರಿಬಿಟ್ಟಿರುವ ರಾಖಿ, ಭಾರತ ದೇಶದಲ್ಲಿ ಯಾರೊಬ್ಬರು ಕೂಡ ಮಹಿಳೆಯರ ಸಹಾಯಕ್ಕೆ ಮುಂದೆಬರುವುದಿಲ್ಲ ಎಂಬುದನ್ನು ಅರಿತಿದ್ದು, ಮಹಿಳೆಯರು ಸ್ವಯಂ ರಕ್ಷಣೆಗೆ ತಂತ್ರಗಳನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ.
ಇದೇ ವೇಳೆ ಘಟನೆಗೆ ಕುರಿತಂತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿರುವ ರಾಖಿ, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ನಾಲ್ಕು ಆರೋಪಿಗಳಿಗೆ ತಾಲಿಬಾನ್ ನಲ್ಲಿ ಅತ್ಯಾಚಾರಿಗಳಿಗೆ ನೀಡಲಾಗುವ ಶಿಕ್ಷೆಯನ್ನು ನೀಡಿ ಅವರ ಗುಪ್ತಾಂಗಗಳನ್ನು ಕತ್ತರಿಸುವಂತೆ ಆಗ್ರಹಿಸಿದ್ದಾರೆ. ಇನ್ನೊಂದೆಡೆ ಹೆದ್ದಾರಿಯಲ್ಲಿ ಸಂಚರಿಸುವ ಮಹಿಳೆಯರಿಗೆ ಸಲಹೆ ನೀಡಿರುವ ರಾಖಿ ಸಾವಂತ್(RAKHI SAWANT), ಹೆದ್ದಾರಿಯಲ್ಲಿ ಸ್ವಂತ ವಾಹನದಲ್ಲಿ ಪ್ರಯಾಣ ಬೆಳೆಸುವಾಗ ವಾಹನದಲ್ಲಿ ಸಾಕಷ್ಟು ಇಂಧನ ಇದೆಯಾ ಎಂಬುದನ್ನು ಪರೀಕ್ಷಿಸಿ ಎಂದಿದ್ದಾರೆ. ಜೊತೆಗೆ ಹೆದ್ದಾರಿಯಲ್ಲಿ ಸಂಚರಿಸುವಾಗ ಯಾವುದೇ ಕಾರಣಕ್ಕೂ ವಾಹನ ನಿಲ್ಲಿಸದಂತೆ ಎಚ್ಚರಿಕೆ ಸಹ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋದಲ್ಲಿ ಮಾತನಾಡಿರುವ ರಾಖಿ, ದೇಶದಲ್ಲಿನ ಎಲ್ಲ ಮಹಿಳೆಯರ ಜವಾಬ್ದಾರಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವ ಬದಲು ಅವರ ಮೇಲೆ ಆಸಿಡ್ ಸುರಿಯಬೇಕು ಎಂದು ಕಿಡಿಕಾರಿದ್ದಾರೆ.