Ram Charan : ರಾಮ್ ಚರಣ್ ಮಗುವಿನ ಮೊದಲ ಫೋಟೋ ಲೀಕ್?

Ram Charan and Upasana Kamineni Daughter: ರಾಮ್ ಚರಣ್ ಮತ್ತು ಉಪಾಸನಾ ಮುದ್ದಾದ ಹೆಣ್ಣು ಮಗುವನ್ನು ಸ್ವಾಗತಿಸಿದರು. ಆ ಬಳಿಕ ಹೆಣ್ಣು ಮಗುವಿನ ಫೋಟೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಅದು ನಿಜವಾಗಿಯೂ ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳಾ?

Written by - Chetana Devarmani | Last Updated : Jun 21, 2023, 09:14 PM IST
  • ಹೆಣ್ಣು ಮಗುವಿಗೆ ಜನ್ಮ ನೀಡಿದ ಉಪಾಸನಾ
  • ಮುದ್ದಾದ ಹೆಣ್ಣು ಮಗುವಿನ ತಂದೆಯಾದ ರಾಮ್ ಚರಣ್
  • ರಾಮ್ ಚರಣ್ ಮಗುವಿನ ಮೊದಲ ಫೋಟೋ ಲೀಕ್?
Ram Charan : ರಾಮ್ ಚರಣ್ ಮಗುವಿನ ಮೊದಲ ಫೋಟೋ ಲೀಕ್?  title=

Ram Charan and Upasana Kamineni Daughter: ರಾಮ್ ಚರಣ್ ಮತ್ತು ಉಪಾಸನಾ ಹೆಣ್ಣು ಮಗುವನ್ನು ಸ್ವಾಗತಿಸಿದರು. ಅಜ್ಜ ಚಿರಂಜೀವಿ ಅವರಿಗೆ ಮೆಗಾ ಪ್ರಿನ್ಸೆಸ್ ಎಂದು ಹೆಸರಿಟ್ಟಿದ್ದಾರೆ. ಸದ್ಯ ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳು ಟಾಕ್ ಆಫ್ ದಿ ಟೌನ್ ಆಗಿದ್ದಾಳೆ. ರಾಮ್ ಚರಣ್ ಕುಟುಂಬದವರು ಮತ್ತು ದಕ್ಷಿಣ ಇಂಡಸ್ಟ್ರಿ ಸೆಲೆಬ್ರಿಟಿಗಳು ಇದೀಗ ಮೆಗಾ ಪ್ರಿನ್ಸೆಸ್‌ಗೆ ಪ್ರೀತಿಯ ಆಶೀರ್ವಾದವನ್ನು ಸುರಿಯುತ್ತಿದ್ದಾರೆ. ಇದರ ಈ ಮಧ್ಯೆ ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳದ್ದು ಎನ್ನಲಾದ ಫೋಟೋವೊಂದು ವಾಟ್ಸಾಪ್ ಗ್ರೂಪ್‌ಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳ ಫೋಟೋ ಲೀಕ್ ಆಗಿದೆಯೇ? ಅದೇ ಸತ್ಯ ಇಲ್ಲಿದೆ.

ರಾಮ್ ಚರಣ್ ಮತ್ತು ಉಪಾಸನಾ ಮಗಳ ಫೋಟೋ ಲೀಕ್?

ರಾಮ್ ಚರಣ್, ಉಪಾಸನಾ ಮತ್ತು ಮೆಗಾ ಪ್ರಿನ್ಸೆಸ್ ಸದ್ಯ ಮುಖ್ಯಾಂಶಗಳಲ್ಲಿದ್ದಾರೆ. ಆಸ್ಪತ್ರೆಯಲ್ಲಿರುವ ಮಗುವಿನ ಫೋಟೋವೊಂದು ವೈರಲ್‌ ಆಗಿದ್ದು, ಇದು ರಾಮ್‌ಚರಣ್‌ ಅವರ ಮಗು ಎಂದು ಹೇಳಲಾಗುತ್ತಿದೆ. ಆದರೆ ರಾಮ್ ಚರಣ್ ಅವರ ಡಿಜಿಟಲ್ ಮ್ಯಾನೇಜರ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರು ಈ ವೈರಲ್‌ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಫೋಟೋ ರಾಮ್ ಚರಣ್ ಮತ್ತು ಉಪಾಸನಾ ಅವರ ಮಗು ಮೆಗಾ ಪ್ರಿನ್ಸೆಸ್ ಅಲ್ಲ ಎಂದು ಶಿವ ಚೆರ್ರಿ ಸ್ಪಷ್ಟನೆ ನೀಡಿದ್ದಾರೆ. 

Ram Charan and Upasana Kamineni Daughter

ಇದನ್ನೂ ಓದಿ: Kartik Aaryan: ತಮ್ಮ ಕೈಯಿಂದ ಕಿಯಾರಾ ಸ್ಯಾಂಡಲ್ ಎತ್ತಿಕೊಟ್ಟ ಕಾರ್ತಿಕ್ ಆರ್ಯನ್.. ವಿಡಿಯೋ ವೈರಲ್‌!

ಕುಟುಂಬ ಸದಸ್ಯರು ರಾಮ್ ಚರಣ್, ಉಪಾಸನಾ ಮತ್ತು ಅವರ ಮಗಳನ್ನು ಕಾಣಲು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬಹಳಷ್ಟು ಸೆಲೆಬ್ರಿಟಿಗಳು, ಹೆಚ್ಚಾಗಿ ರಾಮ್ ಚರಣ್ ಮತ್ತು ಉಪಾಸನಾ ಅವರ ಕುಟುಂಬದ ಸದಸ್ಯರು ದಂಪತಿಗಳನ್ನು ಅಭಿನಂದಿಸಲು ಮತ್ತು ಹೆಣ್ಣು ಮಗುವನ್ನು ಆಶೀರ್ವದಿಸಲು ಅಪೋಲೋ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿಯಿಂದ ಹಿಡಿದು ಅಲ್ಲು ಅರವಿಂದ್, ವರುಣ್ ತೇಜ್, ಚಿರಂಜೀವಿ ಮತ್ತು ಪತ್ನಿ, ರಾಮ್ ಚರಣ್ ಸಹೋದರಿಯರಾದ ನಿಹಾರಿಕಾ ಮತ್ತು ಶ್ರೀಜಾ ಮತ್ತು ಇನ್ನಿತರರು ಮೆಗಾ ಪ್ರಿನ್ಸೆಸ್ ಅನ್ನು ಭೇಟಿ ಮಾಡುತ್ತಿದ್ದಾರೆ. ಮಹೇಶ್ ಬಾಬು, ಸಮಂತಾ ರುತ್ ಪ್ರಭು, ರಶ್ಮಿಕಾ ಮಂದಣ್ಣ, ಜೂನಿಯರ್ ಎನ್‌ಟಿಆರ್, ಕಿಯಾರಾ ಅಡ್ವಾಣಿ ಮುಂತಾದ ಸೆಲೆಬ್ರಿಟಿಗಳು ಸೆಲೆಬ್ರಿಟಿ ದಂಪತಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. 

ರಾಮ್ ಚರಣ್ ತಂದೆ ಚಿರಂಜೀವಿ ಕೋಡ ಸಂತಸದಿಂದ ಟ್ವೀಟ್ ಮಾಡಿದ್ದಾರೆ. 2012 ರಲ್ಲಿ ರಾಮ್ ಚರಣ್ ಮತ್ತು ಉಪಾನಾ ಮದುವೆಯಾದರು. ಇದೀಗ ಸುಮಾರು 10 ವರ್ಷಗಳ ನಂತರ ಮಗುವನ್ನು ಸ್ವಾಗತಿಸಿದ್ದಾರೆ. 

ಇದನ್ನೂ ಓದಿ: Ram Charan Upsana: ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News