Ram charan : ಧ್ವಜಾರೋಹಣ ಮಾಡಿದ ಮೆಗಾ ಪ್ರಿನ್ಸೆಸ್‌: ರಾಮ್‌ಚರಣ್ ಮಗಳ ಮೊದಲ ಫೋಟೊ ರಿವೀಲ್

Ramcharan Daughter Photo Viral : 2 ತಿಂಗಳ ಹಿಂದೆಯಷ್ಟೇ ಟಾಲಿವುಡ್‌ ಮೆಗಾ ಫ್ಯಾಮಿಲಿಗೆ  ಮೆಗಾ ಪ್ರಿನ್ಸೆಸ್‌ ಎಂಟ್ರಿಯಾಗಿತ್ತು. ರಾಮ್‌ಚರಣ್‌ ಪತ್ನಿ ಉಪಾಸನಾ ಹೆಣ್ಣು ಮಗಿವಿಗೆ ಜನ್ಮ ನೀಡಿದ್ದರು. ಈ ಸುದ್ದಿ ಕೇಳಿ ಅಭಿಮಾನಿಗಳು ಸಖತ್‌ ಖುಷ್‌ ಆಗಿದ್ದರು. ಇದೀಗ ರಾಮಚರಣ್‌ ತಮ್ಮ ಮಗಳ ಪೋಟೋ ರಿವೀಲ್‌ ಮಾಡಿದ್ದಾರೆ.   

Written by - Savita M B | Last Updated : Aug 16, 2023, 02:41 PM IST
  • ಸಾಮಾನ್ಯವಾಗಿ ನವಜಾತ ಶಿಶುವಿನ ಪೋಟೋಗಳನ್ನು ಪೋಷಕರು ಬೇಗ ರಿವೀಲ್‌ ಮಾಡುವುದಿಲ್ಲ.
  • ಅದರಲ್ಲೂ ಸೆಲೆಬ್ರಿಟಿಗಳು ಇಂತಹ ವಿಚಾರಗಳಲ್ಲಿ ಹೆಚ್ಚು ಕಾಳಜಿ ವಹಿಸುತ್ತಾರೆ.
  • ಸದ್ಯ ರಾಮಚರಣ್‌ ದಂಪತಿ ತಮ್ಮ ಮಗಳ ಪೋಟೋ ಹಂಚಿಕೊಂಡಿದ್ದಾರೆ.
Ram charan : ಧ್ವಜಾರೋಹಣ ಮಾಡಿದ ಮೆಗಾ ಪ್ರಿನ್ಸೆಸ್‌: ರಾಮ್‌ಚರಣ್ ಮಗಳ ಮೊದಲ ಫೋಟೊ ರಿವೀಲ್ title=

Ramcharan : ಸಾಮಾನ್ಯವಾಗಿ ನವಜಾತ ಶಿಶುವಿನ ಪೋಟೋಗಳನ್ನು ಪೋಷಕರು ಬೇಗ ರಿವೀಲ್‌ ಮಾಡುವುದಿಲ್ಲ. ಅದರಲ್ಲೂ ಸೆಲೆಬ್ರಿಟಿಗಳು ಇಂತಹ ವಿಚಾರಗಳಲ್ಲಿ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ ಸದ್ಯ ರಾಮಚರಣ್‌ ದಂಪತಿ ತಮ್ಮ ಮಗಳ ಪೋಟೋ ಹಂಚಿಕೊಂಡಿದ್ದಾರೆ.

ಸದ್ಯ ಮೆಗಾ ಫ್ಯಾಮಿಲಿಯಲ್ಲಿ ಖುಷಿ ತುಂಬಿ ತುಳುಕುತ್ತಿದೆ. ಮನೆಮಂದಿ ಕ್ಲೀಂಕಾರಳ ನಗು, ಅಳು ನೋಡುತ್ತಾ ಸಂಭ್ರಮಿಸುತ್ತಿದ್ದಾರೆ. ಜೊತೆಗೆ ರಾಮಚರ್ಣ್‌ ಸಹ ಸಿನಿಮಾ ಶೂಟಿಂಗ್‌ಗೆ ಕೊಂಚ ಬ್ರೇಕ್‌ ಕೊಟ್ಟು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Upasana Kamineni Konidela (@upasanakaminenikonidela)

ಇದನ್ನೂ ಓದಿ-Vijay Devarkonda : ಮದುವೆ ಕನಸು ಬಿಚ್ಚಿಟ್ಟ ರೌಡಿ ಬಾಯ್‌..!

ಇನ್ನು ಮೆಗಾ ಪ್ರಿನ್ಸೆಸ್‌ ಹುಟ್ಟಿದ ಬಳಿಕ ಮೊದಲ ಬಾರಿ ಅವರ ಅಜ್ಜಿ ತಾತನ ಜೊತೆ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿದ್ದಾಳೆ. ಸದ್ಯ ಅದೇ ಪೋಟೋವನ್ನು ಉಪಾಸನಾ ಹಂಚಿಕೊಂಡಿದ್ದಾರೆ. ಜೊತೆಗೆ ಆ ಪೋಸ್ಟ್‌ನ ಕೆಳಗೆ ಉಪಸನಾ "ಅಜ್ಜಿ ತಾತನ ಜೊತೆಗೆ ಕ್ಲೀಂಕಾರ ಮೊದಲ ಇಂಡಿಪೆಂಡೆನ್ಸ್ ಡೇ. ಅತ್ಯಂತ ಅಮೂಲ್ಯವಾದ ಕ್ಷಣಗಳು" ಎಂದು ಬರೆದುಕೊಂಡಿದ್ದಾರೆ. 

ಮೆಗಾಪ್ರಿನ್ಸೆಸ್‌ ಕ್ಲಿಂಕಾರ ಪೋಟೋ ನೋಡಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ. ಶೇರ್‌ ಮಾಡಿಕೊಂಡಟಿರುವ ಪೋಟೋಗೆ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಮಗು ಅವರ ತಂದೆಯನ್ನೇ ಹೋಲುತ್ತದೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ-ಟ್ರೇಲರ್ ಮೂಲಕ ಗಮನಸೆಳೆದ ಹೊಸಬರ ʻಆರʼ : ಜುಲೈ 28 ರಂದು ಸಿನಿಮಾ ರಿಲೀಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News