ರಾಮ್​ ಚರಣ್ ತೇಜ ಹೊಸ ಸಿನಿಮಾ ಅನೌಸ್ಸ್‌ : ಸದ್ಯಕ್ಕಿಲ್ಲ ರಾಜಮೌಳಿ RRR ಭಾಗ 2

ಆರ್​ಆರ್​ಆರ್ ಚಿತ್ರದ ಮೆಗಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಮೆಗಾ ಪವರ್ ಸ್ಟಾರ್ ರಾಮ್​ ಚರಣ್ ತೇಜ ತಮ್ಮ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಒಂದನ್ನು ಕೊಟ್ಟಿದ್ದಾರೆ. ಉಪ್ಪೇನ ಖ್ಯಾತಿಯ ಬುಚ್ಚಿ ಬಾಬು ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಚರಣ್‌ ತೇಜ ನಟಿಸಲಿದ್ದಾರೆ. ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಇನ್ನೂ ಸಿನಿಮಾ ಟೈಟಲ್‌ ಫಿಕ್ಸ್‌ ಆಗಿಲ್ಲ.

Written by - Krishna N K | Last Updated : Nov 28, 2022, 02:32 PM IST
  • ರಾಮ್​ ಚರಣ್ ತೇಜ ತಮ್ಮ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌
  • ಮೆಗಾ ಪವರ್‌ ಸ್ಟಾರ್‌ ಹೊಸ ಸಿನಿಮಾ ಅನೌಸ್ಸ್‌
  • RC16ಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ ಬುಚ್ಚಿ ಬಾಬು ಸನಾ
ರಾಮ್​ ಚರಣ್ ತೇಜ ಹೊಸ ಸಿನಿಮಾ ಅನೌಸ್ಸ್‌ : ಸದ್ಯಕ್ಕಿಲ್ಲ ರಾಜಮೌಳಿ RRR ಭಾಗ 2 title=

RC16 : ಆರ್​ಆರ್​ಆರ್ ಚಿತ್ರದ ಮೆಗಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಮೆಗಾ ಪವರ್ ಸ್ಟಾರ್ ರಾಮ್​ ಚರಣ್ ತೇಜ ತಮ್ಮ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಒಂದನ್ನು ಕೊಟ್ಟಿದ್ದಾರೆ. ಉಪ್ಪೇನ ಖ್ಯಾತಿಯ ಬುಚ್ಚಿ ಬಾಬು ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಚರಣ್‌ ತೇಜ ನಟಿಸಲಿದ್ದಾರೆ. ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಇನ್ನೂ ಸಿನಿಮಾ ಟೈಟಲ್‌ ಫಿಕ್ಸ್‌ ಆಗಿಲ್ಲ.

ಮೈತ್ರಿ ಮೂವಿ ಮೇಕರ್ಸ್, ವೆಂಕಟ ಸತೀಶ್ ಕಿಲಾರು, ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳ ಅಡಿಯಲ್ಲಿ ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇನ್ನು ಹೆಸರಿಡದ RC15 ಚಿತ್ರದ ಚಿತ್ರೀಕರಣ ಮುಂದಿನ ವರ್ಷ ಪ್ರಾರಂಭವಾಗಲಿದೆ. ಸದ್ಯ ಶಂಕರ್​ ನಿರ್ದೇಶನದ ಪ್ಯಾನ್​ ಇಂಡಿಯಾ ಚಿತ್ರದ ಶೂಟಿಂಗ್‌ನಲ್ಲಿ ರಾಮ್​ ಚರಣ್​ ತೇಜ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಬುಚ್ಚಿ ಬಾಬು ಸನಾ ನಿರ್ದೇಶನದ ಹೊಸ ಚಿತ್ರ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದ "ಖಾಸಗಿ ಪುಟಗಳು"

ಆರ್‌ಆರ್‌ಆರ್‌ ಸಿನಿಮಾದ ಮೂಲಕ ಈಗಾಗಲೇ ರಾಮ್‌ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ವಿದೇಶಿಗರು ಸಹ ರಾಮ ಚರಣ್‌ ತೇಜ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜಮೌಳಿ ಸಿನಿಮಾ ಆರ್‌ಆರ್‌ಆರ್‌ ದೃಶ್ಯಕಾವ್ಯ ಎಂದೇ ಖ್ಯಾತಿ ಪಡೆದಿದೆ. ಇಂದಿಗೂ ಸಹ ಕೆಲ ವಿದೇಶಗಳಲ್ಲಿ ಆರ್‌ಆರ್‌ಆರ್‌ ಪ್ರದರ್ಶನಗೊಳ್ಳುತ್ತಿದೆ. ಅಲ್ಲದೆ, ಆಸ್ಕರ್‌ ಅಂಗಳಕ್ಕೂ ಈ ಸಿನಿಮಾ ಕಾಲಿಟ್ಟಿದೆ.

ಇನ್ನು ಆರ್‌ಆರ್‌ಆರ್‌ ಸಿನಿಮಾದ ಭಾಗ 2 ಬರಲಿದ್ದು, ಚರಣ್‌ ಆ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಮತ್ತೇ ರಾಜಮೌಳಿ ಜೊತೆ ಸೇರಿ ಎನ್‌ಟಿಆರ್‌ ಮತ್ತು ಚರಣ್‌ ಮ್ಯಾಜಿಕ್‌ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಸುದ್ದಿಯಾಗಿದ್ದು, ಆದ್ರೆ ಇದೀಗ ಚರಣ್‌ ತಮ್ಮ ಹೊಸ ಸಿನಿಮಾದ ಕುರಿತು ಮಾಹಿತಿ ನೀಡಿದ್ದು, ಸದ್ಯಕ್ಕೆ ಆರ್‌ಆರ್‌ಆರ್‌ 2 ಸಿನಿಮಾ ಇಲ್ಲ ಎಂದು ಪರೋಕ್ಷವಾಗಿ ತಿಳಿಸಿದಂತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News