ಫ್ಯಾನ್ಸ್‌ಗಾಗಿ ಮದುವೆ ಸಂಭ್ರಮದ ವಿಡಿಯೋ ಹಂಚಿಕೊಂಡ ಅದಿತಿ.. ಸಖತ್ತಾಗಿದೆ ನೋಡಿ..!

ಸ್ಯಾಂಡಲ್‌ವುಡ್‌ ಶಾನೆ ಟಾಪ್‌ ಬೆಡಗಿ ಅದಿತಿ ಪ್ರಭುದೇವ ಅವರು ನವೆಂಬರ್ 27ರಂದು ಯಶಸ್ ಅವರ ಜೊತೆ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸುಂದರ ಜೋಡಿಗೆ ಸ್ಯಾಂಡಲ್‌ವುಡ್‌ ತಾರೆಗಳು ಸೇರಿದಂತೆ ಅವರ ಅಭಿಮಾನಿಗಳು ಮದುವೆಯ ಶುಭಾಶಯಗಳನ್ನು ಕೋರಿದ್ದಾರೆ. ಸದ್ಯ ಅಭಿಮಾನಿಗಳಿಗಾಗಿ ಅದಿತಿ ತಮ್ಮ ಮದುವೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Written by - Krishna N K | Last Updated : Nov 28, 2022, 01:25 PM IST
  • ಶಾನೆ ಟಾಪ್‌ ಬೆಡಗಿ ಅದಿತಿ ಪ್ರಭುದೇವ ಯಶಸ್ ಅವರ ಜೊತೆ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದಾರೆ
  • ಈ ಸುಂದರ ಜೋಡಿಗೆ ಸ್ಯಾಂಡಲ್‌ವುಡ್‌ ತಾರೆಗಳು ಸೇರಿದಂತೆ ಅವರ ಅಭಿಮಾನಿಗಳು ಶುಭ ಕೋರಿದ್ದಾರೆ
  • ಮದುವೆ ಸಂಭ್ರಮದ ನೋಡಲು ಮಿಸ್‌ ಮಾಡಿಕೊಂಡಿದ್ದ ಅಭಿಮಾನಿಗಳಿಗಾಗಿ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ
ಫ್ಯಾನ್ಸ್‌ಗಾಗಿ ಮದುವೆ ಸಂಭ್ರಮದ ವಿಡಿಯೋ ಹಂಚಿಕೊಂಡ ಅದಿತಿ.. ಸಖತ್ತಾಗಿದೆ ನೋಡಿ..! title=

Aditi Prabhudeva wedding : ಸ್ಯಾಂಡಲ್‌ವುಡ್‌ ಶಾನೆ ಟಾಪ್‌ ಬೆಡಗಿ ಅದಿತಿ ಪ್ರಭುದೇವ ಅವರು ನವೆಂಬರ್ 27ರಂದು ಯಶಸ್ ಅವರ ಜೊತೆ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸುಂದರ ಜೋಡಿಗೆ ಸ್ಯಾಂಡಲ್‌ವುಡ್‌ ತಾರೆಗಳು ಸೇರಿದಂತೆ ಅವರ ಅಭಿಮಾನಿಗಳು ಮದುವೆಯ ಶುಭಾಶಯಗಳನ್ನು ಕೋರಿದ್ದಾರೆ. ಸದ್ಯ ಅಭಿಮಾನಿಗಳಿಗಾಗಿ ಅದಿತಿ ತಮ್ಮ ಮದುವೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮದುವೆ ಕಾರ್ಯಕ್ರಮಗಳು ಪ್ರಾರಂಭವಾದ ದಿನಗಳಿಂದಲೇ ನಟಿ ಅದಿತಿ ಪ್ರಭುದೇವ ಅವರು ತಮ್ಮ ಅದ್ದೂರಿ ಮದುವೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅವರ ಮದುವೆ ಸಂಭ್ರಮದ ನೋಡಲು ಮಿಸ್‌ ಮಾಡಿಕೊಂಡಿದ್ದ ಅಭಿಮಾನಿಗಳಿಗಾಗಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಅದಿತಿ ಫ್ಯಾನ್ಸ್‌ ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದೇ ವಸಿಷ್ಠ ಸಿಂಹನಿಗಾಗಿ.. ಆಗಿದ್ರೆ ಮದುವೆ ಫಿಕ್ಸ್‌ ಆಯ್ತಾ..!

ನಿನ್ನೆ (ನ.27) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಯಶಸ್ಸ್‌ ಮದುವೆ ಅದ್ದೂರಿಯಾಗಿ ನಡೆದಿದೆ. ರಿಸೆಪ್ಷನ್​ಗೂ ಮುನ್ನ ಈ ಜೋಡಿ ವಿಶೇಷವಾಗಿ ಫೋಟೋಶೂಟ್​ ಮಾಡಿಸಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಉಡುಗೆ ಧರಿಸಿ ಫೋಟೋಗೆ ಪೋಸ್​ ನೀಡಿದ್ದರು. ಈ ಕುರಿತು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಅಲ್ಲದೆ, ಅದಿತಿ ಅರಿಶಿಣ ಶಾಸ್ತ್ರದ ಫೋಟೋಸ್‌ ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಟ್ರೇಂಡ್‌ ಕ್ರಿಯೆಟ್‌ ಮಾಡಿದ್ದವು.

ಇನ್ನು ಸ್ಯಾಂಡಲ್‌ವುಡ್‌ ಕ್ಯೂಟ್‌ ಬೆಡಗಿಯ ಮದುವೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯತ್ರಿ ವಿಹಾರ್‌ನಲ್ಲಿ ಅದ್ದೂರಿಯಾಗಿ ಜರುಗಿದೆ. ಅದಿತಿಯ ಮದುವೆಗೆ ಸ್ಯಾಂಡಲ್‌ವುಡ್‌ ತಾರೆಯರು ಹಾಜರಾಗಿದ್ದರು. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಆಗಮಿಸಿ ದಂಪತಿಗೆ ಶುಭ ಕೋರಿದರು. ಅಲ್ಲದೆ, ಕಿರುತೆರೆಯ ನಟ ನಟಿಯರು ಅದಿತಿ ಮದುವೆಗೆ ಸಾಕ್ಷಿಯಾದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News